Gold Rate Today: ಇಂದೂ ಏರಿದೆ ಚಿನ್ನದ ಮೌಲ್ಯ.. ಇಲ್ಲಿದೆ ದರ ವಿವರ!

Gold Silver Price in Bangalore: ದಿನ ಸಾಗುತ್ತಿದ್ದಂತೆ ಚಿನ್ನದ ದರ ಏರಿಕೆಯತ್ತ ಸಾಗುತ್ತಲೇ ಇದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,800 ರೂಪಾಯಿ ಆಗಿದೆ.

Gold Rate Today: ಇಂದೂ ಏರಿದೆ ಚಿನ್ನದ ಮೌಲ್ಯ.. ಇಲ್ಲಿದೆ ದರ ವಿವರ!
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Apr 08, 2021 | 9:16 AM

ಬೆಂಗಳೂರು: ಕಳೆದ ವಾರ ಚಿನ್ನದ ದರ ಇಳಿಕೆಯತ್ತ ಕುಸಿದಿತ್ತು.‌ ಆದರೀಗ ವಾರ ಕಳೆದ ನಂತರ ದರ ಏರುತ್ತಲೇ ಇದೆ. ಚಿನ್ನ ದರ ಇನ್ನೂ ಕುಸಿಯುತ್ತದೆ ಎಂದು ಕಾದು ಕುಳಿತಿದ್ದ ಗ್ರಾಹಕರಿಗೆ ಚಿನ್ನದ ದರ ಏರಿಕೆ ದೊಡ್ಡ ತಲೆನೋವು ತಂದೊಡ್ಡಿದೆ. 22 ಕ್ಯಾರೆಟ್​ 10 ಗ್ರಾಂ ಚಿನ್ನ ದರ 41 ಸಾವಿರದ ಆಸು ಪಾಸಿನಲ್ಲಿತ್ತು. ಜೊತೆಗೆ 24 ಕ್ಯಾರೆಟ್ ಚಿನ್ನದ ದರ 44 ಸಾವಿರದತ್ತ ಮುಖ ಮಾಡಿತ್ತು. ಆದರೀಗ ಒಂದು ವಾರದಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಪ್ರತಿ ನಿತ್ಯ ಕೊಂಚವೇ ದರ ಏರಿತ್ತಾ ಸಾಗಿದ್ದು, ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 42 ಸಾವಿರದ ಗಡಿ ದಾಟಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ದರ 45 ಸಾವಿರದ ಗಡಿ ದಾಟಿದೆ.

ಚಿನ್ನದ ದರ ಇಳಿಕೆ ಕಾಣುತ್ತಿರುವುದನ್ನು ಕಂಡ ಗ್ರಾಹಕರು ಖುಷಿ ಪಟ್ಟಿದ್ದರು. ಜೊತೆಗೆ ಇನ್ನೂ ದರ ಇಳಿಕೆ ಕಂಡು ಬರಬಹುದು ಎಂಬ ನಿರೀಕ್ಷೆಯಲ್ಲೂ ಇದ್ದರು. ಆದರೀಗ ಚಿನ್ನದ ದರ ಏರುತ್ತಲೇ ಇದೆ. ಇನ್ನೂ ಏರಬಹುದು.‌ ದೈನಂದಿನ ಪರಿಶೀಲನೆಯಲ್ಲಿ ಚಿನ್ನದ ದರವನ್ನು ಗಮನಿಸಿದಾಗ ಇಂದು ಗುರವಾರ ಚಿನ್ನದ ದರ ಏರಿಕೆ ಕಂಡಿದೆ.

ಚಿನ್ನ ಕೊಳ್ಳಲು ಮದುವೆ, ವಿಶೇಷಗಳೇ ಬರಬೇಕಂತಿಲ್ಲ. ಸಾಮಾನ್ಯವಾಗಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವುದು ಮೊದಲಿನಿಂದಲೂ ಬಂದಂಥದ್ದು. ಹಣವಿದ್ದಲ್ಲಿ , ಚಿನ್ನದ ದರ ಇಳಿಕೆಯತ್ತ ಸಾಗಿದಾಗಲೇ ಖರೀದಿಸುವುದು ಒಳಿತು. ಕಳೆದ ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಚಿನ್ನವನ್ನು ಗಮನಿಸಿದ ಗ್ರಾಹಕರು ಚಿನ್ನ ಕೊಳ್ಳುವ ಮಾತು ಸಹ ಆಡುತ್ತಿರಲಿಲ್ಲ. ಆದರೀಗ ಈ ವರ್ಷ ಚಿನ್ನದ ದರ ಗಮನಿಸಿದಾಗ ಕಳೆದ ವರ್ಷಕ್ಕಿಂತ ಚಿನ್ನದ ದರ ಕುಸಿತ ಕಂಡಿದೆ.‌ ಆದರೂ ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನದ ದರ ಏರುತ್ತಿದೆ. ಇದೀಗ ಚಿನ್ನ ಕೊಳ್ಳಬೇಕೆಂದೆನಿಸಿದರೆ ಮಾರುಕಟ್ಟೆಯಲ್ಲಿ ದರ ಹೀಗಿದೆ ಗಮನಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 4,240 ರೂಪಾಯಿ ಇದ್ದು, ಇಂದು ದರ 4,265 ರೂಪಾಯಿಗೆ ಜಿಗಿದಿದೆ. 8 ಗ್ರಾಂ ಚಿನ್ನದ ದರ ನಿನ್ನೆ 33,920 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 34,120 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ 42,400 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 42,650 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ನಿನ್ನೆ 4,26,500 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,26,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ 1 ಗ್ರಾಂ ಚಿನ್ನದ ದರ ನಿನ್ನೆ 4,625 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,653 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 37,000 ರೂಪಾಯಿಗೆ ಮಾರಾಟವಾಗಿದ್ದು ಇಂದು 37,224 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 46,250 ರೂಪಾಯಿ ಇದ್ದು, ಇಂದು ದರ 46,530 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ ನಿನ್ನೆ 4,62,500 ರೂಪಾಯಿ ಇತ್ತು. ಇಂದು 2,800 ರೂಪಾಯಿ ಏರಿಕೆಯ ನಂತರದಲ್ಲಿ 4,65,300 ರೂಪಾಯಿ ಆಗಿದೆ.

ವಿವಿಧ ನಗರಗಳಲ್ಲಿ ಚಿನ್ನ ದರವನ್ನು ಗಮನಿಸಿದಾಗ ನವದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 44,800 ರೂಪಾಯಿ ಇದೆ. ಚೆನ್ನೈನಲ್ಲಿ 42,970 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ದರ 44,300 ರೂಪಾಯಿಗೆ ಮಾರಾಟವಾಗಿದೆ.

ಬೆಳ್ಳಿ ದರ ಮಾಹಿತಿ ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ದರ ನಿನ್ನೆ 65 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 66 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 520 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 530 ರೂಪಾಯಿ ಆಗಿದೆ. 10ಗ್ರಾಂ ಬೆಳ್ಳಿ ನಿನ್ನೆ 650 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 663 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ ನಿನ್ನೆ 6,500 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 6,630 ರೂಪಾಯಿ ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ನಿನ್ನೆ 65,000 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 66,300 ರೂಪಾಯಿಗೆ ಜಿಗಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 1,300 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ: Gold Rate Today: ಅಮ್ಮನಿಗೆ ಚಿನ್ನದ ಉಡುಗೊರೆ ಕೊಡುವ ಮನಸ್ಸಿದೆಯೇ?‌ ಕೊಳ್ಳುವುದಾದರೆ ಇಂದಿನ ಚಿನ್ನದ ದರ ಗಮನಿಸಿ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

( Gold Rate Today in Bengaluru Hyderabad Chennai Mumbai and Delhi silver price on April 8th 2021)

Published On - 8:04 am, Thu, 8 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ