Gold Rate Today: ಅಮ್ಮನಿಗೆ ಚಿನ್ನದ ಉಡುಗೊರೆ ಕೊಡುವ ಮನಸ್ಸಿದೆಯೇ?‌ ಕೊಳ್ಳುವುದಾದರೆ ಇಂದಿನ ಚಿನ್ನದ ದರ ಗಮನಿಸಿ!

Gold Silver Price in Bangalore: ನಿಮ್ಮ ಪ್ರೀತಿಯ ಅಮ್ಮನಿಗೆ ಚಿನ್ನ ಕೊಡಿಸಿ ಸರ್ಪ್ರೈಸ್​ ಕೊಡಿ. ಅಮ್ಮನ ಮುಖದಲ್ಲಿನ ಸಂತೋಷ ಅಚ್ಚಳಿಯದೇ ಉಳಿಯುವಂತಾಗಲಿ ನಿಮ್ಮ ಉಡುಗೊರೆ. ಚಿನ್ನದ ದರ ಮಾಹಿತಿ ಇಲ್ಲಿದೆ. ದರ ಗಮನಿಸಿ ಚಿನ್ನ ಕೊಂಡುಕೊಳ್ಳಿ.

Gold Rate Today: ಅಮ್ಮನಿಗೆ ಚಿನ್ನದ ಉಡುಗೊರೆ ಕೊಡುವ ಮನಸ್ಸಿದೆಯೇ?‌ ಕೊಳ್ಳುವುದಾದರೆ ಇಂದಿನ ಚಿನ್ನದ ದರ ಗಮನಿಸಿ!
ಸಾಂದರ್ಭಿಕ ಚಿತ್ರ
Follow us
shruti hegde
| Updated By: Skanda

Updated on: Apr 07, 2021 | 8:44 AM

ಬೆಂಗಳೂರು: ಅದೆಷ್ಟೋ ಬಾರಿ ದುಬಾರಿ ವಸ್ತುವನ್ನು ನಾವು ಹೆಚ್ಚು ಪ್ರೀತಿಸುವವರಿಗೆ ಉಡುಗೊರೆಯಾಗಿ ಕೊಡಬೇಕು ಅಂದುಕೊಂಡಿರ್ತೀವಿ.‌ ಅದರಲ್ಲೂ ಚಿನ್ನ ಕೊಡಿಸಿದರೆ ಸ್ವೀಕರಿಸುವವರಿಗೂ ಖುಷಿ. ಆದರೆ, ಕೆಲವು ಬಾರಿ ದರ ಏರಿಕೆ ಆಗುವುದರಿಂದ ಕೊಡಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಮ್ಮೆ ಚಿನ್ನ ಕೊಳ್ಳುವಷ್ಟು ಹಣ ಕೂಡಿಡಲು ಸಾಧ್ಯವಾಗಿರುವುದಿಲ್ಲ. ಕೂಡಿಟ್ಟಷ್ಟೇ ಹಣದಲ್ಲಿ ನಮ್ಮನ್ನ ಪ್ರೀತಿಯಿಂದ ಸಾಕಿರುವ ಅಮ್ಮನಿಗೆ ಚಿನ್ನ ಕೊಡಿಸಿದರೆ ಹೇಗೆ? ಎಂಬೆಲ್ಲಾ ಆಲೋಚನೆಗಳು ಮನಸ್ಸಿಗೆ ನಾಟಿರುತ್ತದೆ‌.‌ ಅಂತಹ ಸದಾವಕಾಶ ನಿಮ್ಮ ಮುಂದಿದೆ. ಚಿನ್ನದ ದರ ಹೇಗಿದೆ ಎಂಬುದನ್ನು ಗಮನಿಸಿ. ಅಮ್ಮನಿಗೆ ಚಿನ್ನ ಕೊಡಿಸುವುದಾದರೆ ಇಂದೇ ಕೊಡಿಸಿ.‌

ದಿನ ಸಾಗುತ್ತಿದ್ದಂತೆ ಚಿನ್ನದ ದರ ಏರುತ್ತಲೇ ಇದೆ. ಇಂದು ಬುಧವಾರ ಕೂಡಾ ಚಿನ್ನದ ದರ ಏರಿಕೆ ಕಂಡಿದ್ದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರದ ಮಾಹಿತಿ ಎಷ್ಟಿದೆ ಎಂಬುದನ್ನು ನೋಡೋಣ. 1 ಗ್ರಾಂ ಚಿನ್ನದ ದರ ನಿನ್ನೆ 4,226 ರೂಪಾಯಿ ಇದ್ದು, ಇಂದು ದರ ಏರಿಕೆಯ ನಂತರ 4,240 ರೂಪಾಯಿಗೆ ಏರಿದೆ. 8 ಗ್ರಾಂ ಚಿನ್ನದ ದರ ನಿನ್ನೆ 33,808 ರೂಪಾಯಿ ಇದ್ದು, ಇಂದು 333,920 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ದರ ನಿನ್ನೆ 42,260 ರೂಪಾಯಿ ಇದ್ದು, ಇಂದು 42,400 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,22,600 ರೂಪಾಯಿ ಇದ್ದು, ಇಂದು ಚಿನ್ನದ ದರ 4,24,000 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ 1,400 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನದ ದರ ನಿನ್ನೆ 4,610 ರೂಪಾಯಿಗೆ ಏರಿಕೆಯಾಗಿದ್ದು, ಇಂದು ಮತ್ತೆ ದರದಲ್ಲಿ ಕೊಂಚ ಏರಿಕೆ ಕಂಡಿದ್ದು 4,625 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 36,880 ರೂಪಾಯಿ ಆಗಿದ್ದು, ಇಂದು ದರ 37,000 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ 46,100 ರೂಪಾಯಿ ಆಗಿದ್ದು ಇಂದು 46,250 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,61,000 ರೂಪಾಯಿ ಇದ್ದು, ಇಂದು 4,62,500 ರೂಪಾಯಿಗೆ ಜಿಗಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಏರಿಕೆ ಕಂಡಿದೆ.

ಅಮ್ಮ ನಮ್ಮನ್ನ ಅಷ್ಟು ವರ್ಷಗಳ ಕಾಲ ಸಾಕಿ- ಸಲಹಿ, ನಮ್ಮನ್ನ ಕಾಪಾಡಿದ್ದಾಳೆ. ನಿತ್ಯವೂ ದೂರದಲ್ಲಿರುವ ಮಗ/ ಮಗಳನ್ನ ನೆನೆಸಿಕೊಂಡು ಪ್ರತಿ ನಿತ್ಯ ಆರೋಗ್ಯ ವಿಚಾರಿಸುತ್ತಾಳೆ, ಕಾಳಜಿ ತೋರುತ್ತಾಳೆ. ಪ್ರೀತಿಯ ಅಮ್ಮನಿಗೆ ಏನಾದರೂ ಉಡುಗೊರೆ ಕೊಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ನೀವು ವರ್ಷ ಪೂರ್ತಿ ದುಡಿದ ಹಣವನ್ನು ಕೂಡಿಟ್ಟಿದ್ದೀರಿ ಎಂದಾದರೆ, ಅಮ್ಮನಿಗೆ ಚಿನ್ನ ಕೊಡಿಸಲು ಸದಾವಕಾಶವಿದೆ. ಚಿನ್ನದ ದರ ಒಂದು ವಾರದಿಂದ ಏರುತ್ತಲೇ ಇರುವುದರಿಂದ, ಚಿನ್ನದ ದರ ಮುಂದಿನ ದಿನಗಳಲ್ಲಿ ಇನ್ನೂ ಏರಬಹುದು. ಗರಿಷ್ಠ ಮಟ್ಟಕ್ಕೆ ತಲುಪುವುದರೊಳಗೆ ಚಿನ್ನ ಖರೀದಿಸುವುದು ಉತ್ತಮ ಎಂದೆನಿಸಿದರೆ, ನೀವು ಕೂಡಿಟ್ಟ ಹಣವನ್ನು ಚಿನ್ನಕ್ಕೆ ವ್ಯಯಿಸಬಹುದು ಎಂದೆನಿಸಿದರೆ ಚಿನ್ನ ಕೊಳ್ಳುವತ್ತ ಮುಂದಾಗಿ.

ಬೆಳ್ಳಿ ದರ ಮಾಹಿತಿ ಬೆಳ್ಳಿ ದರ ಕಳೆದೆರಡು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದೆ. 1 ಗ್ರಾಂ ಬೆಳ್ಳಿ ದರ ಇಂದು 65 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ 520 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ 650 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ಇಂದು 6,500 ರೂಪಾಯಿ ಆಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 90 ರೂಪಾಯಿ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 65,900 ರೂಪಾಯಿ ಆಗಿದ್ದು, ಇಂದು ದರ ಇಳಿಕೆಯ ನಂತರ 65,000 ರೂಪಾಯಿ ಆಗಿದೆ. 900 ರೂಪಾಯಿಯಷ್ಟು ದರ ಇಳಿಕೆ ಕಂಡಿದೆ.

ಇದನ್ನೂ ಓದಿ: Gold Rate Today: ದಿನ ಕಳೆದಂತೆ ಚಿನ್ನದ ದರ ಏರುತ್ತಲೇ ಇದೆ.. ಖರೀದಿಸುವುದಾದರೆ ದರ ಹೀಗಿದೆ!

Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ.. ಚಿನ್ನ ಕೊಳ್ಳಲು ಒಳ್ಳೆಯ ದಿನ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ