Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ.. ಚಿನ್ನ ಕೊಳ್ಳಲು ಒಳ್ಳೆಯ ದಿನ!

Gold Silver Price in Bangalore: ಚಿನ್ನ ದರ ನಾಲ್ಕು ದಿನಗಳಿಂದ ಕೊಂಚ ಇಳಿಕೆ ಕಂಡಿತ್ತು. ಇಂದು ಶುಕ್ರವಾರ ದರ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೆ ಚಿನ್ನ ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ವಹಿವಾಟು ನಡೆಸುತ್ತಿದೆ ಎಂಬುದರ ವಿವರ ಇಲ್ಲಿದೆ.

  • TV9 Web Team
  • Published On - 9:29 AM, 2 Apr 2021
Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ.. ಚಿನ್ನ ಕೊಳ್ಳಲು ಒಳ್ಳೆಯ ದಿನ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ದೇಶದೆಲ್ಲೆಡೆ ಹಬ್ಬುತ್ತಿದ್ದಂತೆ ಚಿನ್ನ ದರ ಏರಿಕೆ ಕಂಡಿತ್ತು. ಕೊಳ್ಳಲು ಹೋದ ಗ್ರಾಹಕರಿಗೆ ನಿರಾಸೆ ಉಂಟಾಗುತ್ತಿತ್ತು. ತದನಂತರ ದೇಶದ ಆರ್ಥಿಕ ಚಟುವಟಿಕೆ ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತಿದ್ದಂತೆ ದರ ಕೊಂಚ ಇಳಿಕೆಯತ್ತ ಸಾಗಲು ಪ್ರಾರಂಭಿಸಿತು. ಈ ವಾರದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿನ್ನ ದರ ಕೊಂಚ ಇಳಿಕೆಯತ್ತ ಮುಖ ಮಾಡಿರುವುದನ್ನು ಕಂಡ ಗ್ರಾಹಕರಿಗೆ ರಿಲೀಫ್​ ಸಿಕ್ಕಿತ್ತು. ಚಿನ್ನ ಕೊಳ್ಳಲು ಗ್ರಾಹಕರು ಮುಂದಾಗುತ್ತಿದ್ದರು. ದೈನಂದಿನ ದರ ಪರಿಶೀಲಿಸಿದಾಗ ಇಂದು ಶುಕ್ರವಾದ ಚಿನ್ನ ಕೊಂಚ ಏರಿದೆ ಎಂದು ವಿಶ್ಲೇಷಿಸಬಹುದು.

ದೈನಂದಿನ ದರ ಪ್ರಕ್ರಿಯೆಯಲ್ಲಿ ಚಿನ್ನ ದರವನ್ನು ಪರಿಶೀಲಿಸಿದಾಗ ಇಂದು ಶುಕ್ರವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 41,650 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 45,440 ರೂಪಾಯಿ ಇದೆ. ಹಾಗೆಯೇ 1ಕೆಜಿ ಬೆಳ್ಳಿ ದರ 63,400 ರೂಪಾಯಿಗೆ ಇಳಿದಿದೆ.

22 ಕ್ಯಾರೆಟ್ ಚಿನ್ನ ದರ ಹೇಗಿದೆ ಎಂಬುದರ ವಿವರ ಇಲ್ಲಿದೆ
1 ಗ್ರಾಂ ಚಿನ್ನ ದರ ನಿನ್ನೆ 4,110 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಕೊಂಚ ಏರಿಕೆಯ ನಂತರದಲ್ಲಿ 4,165 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 32,880 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 33,320 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 41,100 ರೂಪಾಯಿ ಇದ್ದು ಇಂದು ದರ 41,650 ರೂಪಾಯಿಗೆ ಜಿಗಿದಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,11,000 ರೂಪಾಯಿ ಇದ್ದು ಇಂದು ದರ 4,16,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ ಮಾಹಿತಿ ಇಲ್ಲಿದೆ
1 ಗ್ರಾಂ ಚಿನ್ನ ದರ ನಿನ್ನೆ 4,484 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,544 ರೂಪಾಯಿಗೆ ಜಿಗಿದಿದೆ. 8 ಗ್ರಾಂ ಚಿನ್ನ ದರ ನಿನ್ನೆ 35,872 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 36,352ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 44,840 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 45,440 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 600 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,48,400 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,54,400 ರೂಪಾಯಿಗೆ ಜಿಗಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 6,000 ರೂಪಾಯಿ ಏರಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ
ದೈನಂದಿನ ದರ ಪರಿಶೀಲನೆಯ ನಂತರ ಇಂದು ಶುಕ್ರವಾರ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಹೇಗಿದೆ ಎಂಬುದನ್ನು ಗಮನಿಸಿದಾಗ 1 ಗ್ರಾಂ ಬೆಳ್ಳಿ ದರ ನಿನ್ನೆ 65.50 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 63.40 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 507.20 ರೂಪಾಯಿ ಆಗಿದ್ದು ಇಂದು ದರ 507.20 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 655 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 634 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,550 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 6,340 ರೂಪಾಯಿ ಆಗಿದೆ. ಹಾಗೆಯೇ 1 ಕೆಜಿ ಬೆಳ್ಳಿ ದರ ನಿನ್ನೆ 65,500 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 63,400 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 2,100 ರೂಪಾಯಿ ಇಳಿಕೆ ಕಂಡಿದೆ.

ಅಂತರಾಷ್ಟ್ರೀಯ ಟ್ರೆಂಡ್​, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್​ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಪ್ರತಿ ನಿತ್ಯದ ಚಿನ್ನ ಮತ್ತು ಬೆಳ್ಳಿ ದರವನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

Gold Silver Price: ಚಿನ್ನ ದರ ಕುಸಿತ.. ಕೊರೊನಾ ಹೆಚ್ಚಾಗುತ್ತಿದ್ದು ಚಿನ್ನ ದರ ಏರಿಕೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ

(Gold Rate Today in Bengaluru Chennai Hyderabad Mumbai and Delhi silver price on april 2nd 2021)