ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹವಾ
Hop Shoots Crop: ಬಿಹಾರದ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಈ ಬೆಳೆಯನ್ನು ಒಂದು ಕೆಜಿಗೆ ₹ 1 ಲಕ್ಷದಂತೆ ಮಾರಾಟ ಮಾಡುತ್ತಿದ್ದಾರೆ. ಈ ಬೆಳೆಯ ಹೆಸರು ‘ಹೊಪ್ ಶೂಟ್ಸ್’. ಇದು ವಿಶ್ವದ ಅತಿದುಬಾರಿ ಬೆಳೆ ಎನಿಸಿಕೊಂಡಿದೆ.
ಬಿಹಾರದ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಈ ಬೆಳೆಯನ್ನು ಒಂದು ಕೆಜಿಗೆ ₹ 1 ಲಕ್ಷದಂತೆ ಮಾರಾಟ ಮಾಡುತ್ತಿದ್ದಾರೆ. ರೈತ ಅಮರೇಶ್ ಸಿಂಗ್ ಬೆಳೆದ ಈ ಬೆಳೆಯ ಹೆಸರು ‘ಹೊಪ್ ಶೂಟ್ಸ್’ (Hop Shoots). ಇದು ವಿಶ್ವದ ಅತಿ ದುಬಾರಿ ಬೆಳೆ ಎನಿಸಿಕೊಂಡಿದೆ. ಈ ಬೆಳೆಯ ಬಗ್ಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಸುದ್ದಿಯ ಜೊತೆಗೆ ಕೆಲ ಫೋಟೊಗಳನ್ನೂ ಟ್ವೀಟ್ ಮಾಡಿದ್ದಾರೆ. ಈ ಬೆಳೆಯು ಭಾರತೀಯ ರೈತರ ಪರಿಸ್ಥಿತಿಯನ್ನು ಬದಲಿಸಬಲ್ಲದು ಎಂದಿದ್ದಾರೆ ಅವರು. ಈ ಟ್ವೀಟ್ ವೈರಲ್ ಆಗಿದೆ. 5000 ಮಂದಿ ರೀಟ್ವೀಟ್ ಮಾಡಿದ್ದು, 23.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಭಾರತದಲ್ಲಿ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅವರು ಮೊದಲು ವಾರಣಾಸಿಯ ಭಾರತೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ ಸಸಿಗಳನ್ನು ತಂದರು. ಸಂಶೋಧನಾ ಸಂಸ್ಥೆಯು ಬೆಳೆಯನ್ನು ಪರಿಚಯಿಸುವವರೆಗೆ ಹೊಪ್ ಶೂಟ್ಸ್ ಹೆಸರನ್ನು ಭಾರತದಲ್ಲಿ ಹೆಚ್ಚಿನ ಜನರು ತಿಳಿದಿರಲೇ ಇಲ್ಲ. ಈ ಬೆಳೆ ಬೇಕು ಎಂದಾದರೆ ವಿದೇಶಗಳಿಂದ ತರಿಸಿಕೊಳ್ಳಬೇಕಾಗಿತ್ತು. ಸಾಗಾಟ ವೆಚ್ಚವೂ ಹೆಚ್ಚಾಗುತ್ತಿತ್ತು. ಅಷ್ಟೇ ಅಲ್ಲ, ಆರ್ಡರ್ ಮಾಡಿದವರು ದೀರ್ಘಕಾಲ ಕಾಯಬೇಕಿತ್ತು.
ಇದೀಗ ಹೊಪ್ ಶೂಟ್ಸ್ ಬೆಳೆ ಬೆಳೆಯಲು ಉತ್ತೇಜನ ಸಿಗುತ್ತಿದೆ. ಇದು ರೈತರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿ ಆಗಬಲ್ಲದು. ಹೊಪ್ಸ್ ಗಿಡದ ಎಲ್ಲ ಭಾಗಗಳೂ ಉಪಯುಕ್ತ. ಆದರೆ ಹೂಗಳಿಗೆ ವಿಶೇಷ ಬೇಡಿಕೆಯಿದೆ. ಹೊಪ್ ಗಿಡದ ವೈಜ್ಞಾನಿಕ ಹೆಸರು ಹ್ಯುಮ್ಯುಲಸ್ ಲುಪ್ಯುಲಸ್ (Humulus Lupulus). ಇದು ಹೂಬಿಡುವ ಕೆನ್ನಬಸಿಯಾ ಕುಟುಂಬಕ್ಕೆ ಸೇರಿದ ಗಿಡವಾಗಿದೆ.
ಅದೆಲ್ಲಾ ಸರಿ, ಈ ಗಿಡದ ಉತ್ಪನ್ನಗಳಿಗೇಕೆ ಇಷ್ಟೊಂದು ಬೆಲೆ ಅಂದ್ರಾ? ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತ ಎಂದು ಅಧ್ಯಯನಗಳು ಹೇಳುತ್ತವೆ. ಹಣ್ಣು, ಹೂ, ಕಾಂಡಗಳು ಹಲವು ರೀತಿಯ ಉಪಯೋಗ ಹೊಂದಿವೆ. ಬಿಯರ್ ಉದ್ಯಮದಲ್ಲಿ ಈ ಗಿಡದ ಕೆಲ ಭಾಗಗಳನ್ನು ಸ್ಥಿರೀಕರಣಕ್ಕಾಗಿ (stability agent) ಬಳಸುತ್ತಾರೆ. ಕ್ಷಯರೋಗ ಬಾರದಂತೆ ತಡೆಯುವ ಶಕ್ತಿಯೂ ಈ ಗಿಡಕ್ಕಿದೆ. ಈ ಗಿಡದಲ್ಲಿರುವ ಆಂಟಿಯಾಕ್ಸಿಡೆಂಟ್ಸ್ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಇದರ ಚಿಗುರು ಸೇವಿಸುವುದರಿಂದ ಅತಿಕೋಪ, ಉದ್ವಿಗ್ನ ಮನಃಸ್ಥಿತಿ, ನಿದ್ರಾಹೀನತೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ ಎಂದು ಹೇಳುತ್ತಾರೆ.
One kilogram of this vegetable costs about Rs 1 lakh ! World’s costliest vegetable,’hop-shoots’ is being cultivated by Amresh Singh an enterprising farmer from Bihar, the first one in India. Can be a game changer for Indian farmers ?https://t.co/7pKEYLn2Wa @PMOIndia #hopshoots pic.twitter.com/4FCvVCdG1m
— Supriya Sahu IAS (@supriyasahuias) March 31, 2021
ಐಎಎಸ್ ಅಧಿಕಾರಿ ಸುಪ್ರಿಯಾ ಅವರ ಟ್ವೀಟ್ಗೆ ಉತ್ತರಿಸಿರುವ ಹಲವರು, ಈ ಬೆಳೆಗೆ ಅಷ್ಟೊಂದು ಬೆಲೆಯಿಲ್ಲ ಎಂದು ವಾದಿಸಿದ್ದಾರೆ. ಕೆಲವರು ಹೊಪ್ಸ್ ಬೆಳೆಯಿಂದ ದೂರ ಸರಿಯಲು ನಿರ್ಧರಿಸಿದ ರೈತರ ಬಗ್ಗೆ ‘ದಿ ಟ್ರಿಬ್ಯೂನ್’ ದಿನಪತ್ರಿಕೆ ಪ್ರಕಟಿಸಿರುವ ವರದಿಯ ಲಿಂಕ್ ಹಂಚಿಕೊಂಡಿದ್ದಾರೆ.
Supriya ji Green hops nowhere near ₹1lakh/kg. Hops, one of the main ingredients to make beer, is imported in pellets form. Retails 3k-10k per kg. Is sensitive to climate, usually grown at high altitude. India used to grow in Kashmir n Himachal long back. No harm trying in Bihar
— Rajeev B Agarwal (@RajeevBAgarwal) March 31, 2021
ಈ ಅಭಿಪ್ರಾಯವನ್ನು ನಿರಾಕರಿಸಿ ವಾದಕ್ಕಿಳಿದಿರುವ ಕೆಲವರು, ಯಾವುದೇ ಮದ್ಯ ಮಾರಾಟ ಕಂಪನಿಯನ್ನು ಕೇಳಿನೋಡಿ, ಹೊಪ್ಸ್ ಬೆಳೆಗೆ ಚಿನ್ನದ ಬೆಲೆ ಕೊಡುತ್ತಾರೆ. ಹಲವು ತಂಪುಪಾನೀಯಗಳ ಸುಗಂಧ ಮತ್ತು ರುಚಿಗೆ ಹೊಪ್ಸ್ನ ಉಪ ಉತ್ಪನ್ನಗಳು ಬಳಕೆಯಾಗುತ್ತವೆ ಎಂದಿದ್ದಾರೆ.
Ask any distilleries they will pay a lot if its quality hops being produced … this is primarily used in making Beer .. all the fruity flavours and aroma profiles are usually a by product of hops..
— Kyubi 01 (@rockstarakshu) March 31, 2021
ಇದನ್ನೂ ಓದಿ: ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್