ಆರ್ಜೇರಿಯ ಶರದ್​ಚಂದ್ರಾಜಿ: ಮಹಾರಾಷ್ಟ್ರದಲ್ಲಿ ಪತ್ತೆಯಾದ ಹೊಸ ಪ್ರಭೇದದ ಗಿಡಕ್ಕೆ ಶರದ್ ಪವಾರ್ ಹೆಸರು

Argyreia Sharadchandrajii: ಕೇಂದ್ರ ಸಚಿವರಾಗಿದ್ದಾಗ ಶರದ್ ಪವಾರ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗೆ ಗೌರವಾರ್ಥ ಹೂವಿನ ಗಿಡವೊಂದಕ್ಕೆ ಆರ್ಜೇರಿಯ ಶರದ್​ಚಂದ್ರಾಜಿ ಎಂಬ ಹೆಸರು ನೀಡಲಾಗಿದೆ

ಆರ್ಜೇರಿಯ ಶರದ್​ಚಂದ್ರಾಜಿ: ಮಹಾರಾಷ್ಟ್ರದಲ್ಲಿ ಪತ್ತೆಯಾದ ಹೊಸ ಪ್ರಭೇದದ ಗಿಡಕ್ಕೆ ಶರದ್ ಪವಾರ್ ಹೆಸರು
ಶರದ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 02, 2021 | 11:25 AM

ಮಹಾರಾಷ್ಟ್ರ: ದಕ್ಷಿಣ ಮಹಾರಾಷ್ಟ್ರದ ಕೋಲ್ಹಾಪೂರ್ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರನ್ನು ಇಡಲಾಗಿದೆ. ಕೇಂದ್ರ ಸಚಿವರಾಗಿದ್ದಾಗ ಶರದ್ ಪವಾರ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗೆ ಗೌರವಾರ್ಥ ಹೂವಿನ ಗಿಡವೊಂದಕ್ಕೆ ಆರ್ಜೇರಿಯ ಶರದ್​ಚಂದ್ರಾಜಿ ಎಂಬ ಹೆಸರು ನೀಡಲಾಗಿದೆ. ಹೊಸ ಗಿಡದ ಬಗ್ಗೆ ಮಾತನಾಡಿದ ಅಧ್ಯಯನಕಾರರಾದ ಪ್ರಮೋದ್. ಆರ್. ಲಾವಾಂಡ್ ಮತ್ತು ಡಾ.ವಿನೋದ್ ಬಿ ಶಿಂಪಾಲೆ, ಆ ಗಿಡವು ಆರ್ಜೇರಿಯ ಪ್ರಭೇದಕ್ಕೆ ಸೇರಿದ್ದು, ಇವು ಆಲಂಪ್ರಭು ದೇವ್ ರಾಯ್​ಗಳಲ್ಲಿ(ಪವಿತ್ರ ತೋಪು ) ಕಂಡು ಬರುತ್ತವೆ ಎಂದಿದ್ದಾರೆ. ಲಾವಾಂಡ್ ಮತ್ತು ಶಿಂಪಾಲೆ ಕೋಲ್ಹಾಪೂರ್​ನ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.

‘Argyreia sharadchandrajii (Convolvulaceae): A new species from the Western Ghats, India’ ಎಂಬ ಅಧ್ಯಯನ ವರದಿಯು ಇತ್ತೀಚೆಗೆ ಜರ್ನಲ್ ಆಫ್ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ಆಂಜಿಯೊಸ್ಪರ್ಮ್ ಟ್ಯಾಕ್ಸೊನಮಿಯಲ್ಲಿ ಪ್ರಕಟವಾಗಿದೆ.

ಆರ್ಜೇರಿಯ ಪ್ರಭೇದಕ್ಕೆ ಸೇರಿದ 40 ಉಪ ಪ್ರಭೇದಗಳು ಭಾರತದಲ್ಲಿ ಕಂಡುಬಂದಿವೆ. ಈ ಪ್ರಭೇದಗಳು ಏಷ್ಯಾದ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತವೆ.  40ರ ಪೈಕಿ 17 ಪ್ರಭೇದಗಳು ಸ್ಥಳೀಯವಾಗಿ ಕಂಡುಬಂದಿದ್ದು, 18ನೇ ಪ್ರಭೇದವನ್ನು ನಾವು ರಾಮ್​ಲಿಂಗ್ ಬೆಟ್ಟದ ಆಲಂಪ್ರಭು ಪವಿತ್ರ ತೋಪುಗಳಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ಶಿಂಪಾಲೆ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಗಿಡವು ಜುಲೈ ಮತ್ತು ಸಪ್ಟೆಂಬರ್ ತಿಂಗಳ ಮಧ್ಯೆ ಹೂಬಿಡುತ್ತಿದ್ದು, ಡಿಸೆಂಬರ್  ತಿಂಗಳು ​ಫಲ ಬಿಡುವ ಅವಧಿಯಾಗಿದೆ. ಇವುಗಳು ತೆರೆದ ಬಯಲಿನ ಹುಲ್ಲುಗಾವಲಿನಲ್ಲಿ ಬೆಳೆಯುತ್ತಿದ್ದು, ಇತರ ಪೊದೆಗಳ ಬಳಿ ಬೇರೂರುತ್ತವೆ ಎಂದಿದ್ದಾರೆ ಶಿಂಪಾಲೆ

ಕೆಲವು ವರ್ಷಗಳ ಹಿಂದೆ ಪವಾರ್ ಅವರು ಬಾರಾಮತಿಯಲ್ಲಿನ ಹೂವಿನ ಗಿಡಗಳ ಬಗ್ಗೆ ಅಧ್ಯಯನ ವರದಿಯನ್ನು ಪ್ರಕಟಿಸಲು ಆರ್ಥಿಕ ಸಹಾಯ ಮಾಡಿದ್ದರು. ಶರದ್ ಪವಾರ್ ಅವರ ಚುನಾವಣಾ ಕ್ಷೇತ್ರವಾಗಿದೆ ಬಾರಾಮತಿ. ಹಾಗಾಗಿಯೇ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಶರದ್ ಪವಾರ್ ಅವರ ಹೆಸರನ್ನಿರಿಸಿದ್ದೇವೆ. ಜೀವ ವೈವಿಧ್ಯಗಳಿಂದ ಸಮೃದ್ಧವಾಗಿರುವ ಕೋಲ್ಹಾಪೂರ್ ಜಿಲ್ಲೆಯ ಪಶ್ಚಿಮ ಘಟ್ಟದ ಪರಿಸರ ವಲಯಕ್ಕೆ ಶರದ್ ಪವಾರ್ ಅವರು ನೀಡಿದ ಅನನ್ಯ ಕೊಡುಗೆಗೆ ಗೌರವಾರ್ಥ ಈ ಗಿಡಕ್ಕೆ ಅವರ ಹೆಸರು ಇರಿಸಲಾಗಿದೆ ಎಂದು ಶಿಂಪಾಲೆ ಹೇಳಿದ್ದಾರೆ.

ಸಹ್ಯಾದ್ರಿ ಪರ್ವತಗಳಲ್ಲಿ ಕಂಡುಬರುವ ಸಸ್ಯವನ್ನು ಪತ್ತೆ ಹಚ್ಚಿದ್ದ ವಿನೋದ್ ಶಿಂಪಾಲ್ ಮತ್ತು ಡಾ. ಪ್ರಮೋದ್ ಲಾವಂಡ್ ಅವರು ಆ ಸಸ್ಯಕ್ಕೆ ಶರದ್ ಪವಾರ್ ಅವರ ಹೆಸರನ್ನು ಇರಿಸಿದ್ದಾರೆ. ಈ ಸಸ್ಯವನ್ನು ಈಗ ‘ಆರ್ಜೇರಿಯ ಶರದಚಂದ್ರಾಜಿ’ ಎಂದು ಕರೆಯಲಾಗುತ್ತದೆ. ಈ ಇಬ್ಬರು ಸಂಶೋಧಕರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಮಹಾರಾಷ್ಟ್ರ ತಮ್ಮದೇ ಕುಟುಂಬ ಎಂದು ಪವಾರ್ ಅವರು ಭಾವಿಸುತ್ತಾರೆ. ಅಂತಹ ಗೌರವ ಮತ್ತು ಮನ್ನಣೆ ಕುಟುಂಬದಿಂದ ಮಾತ್ರ ಬರಬಹುದು. ಇದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಧನ್ಯವಾದಗಳು ಎಂದು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆ ಟ್ವೀಟ್ ಮಾಡಿದ್ದಾರೆ.

( Argyreia sharadchandrajii new species of flowering plant discovered in south Maharashtra Kolhapur named after Sharad Pawar)

ಇದನ್ನೂ ಓದಿ: ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್​ ಶಾ

Published On - 11:15 am, Fri, 2 April 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ