ಸೂಪರ್ ಸ್ಟಾರ್ ರಜಿನಿಕಾಂತ್​ಗೆ ಶುಭಹಾರೈಸಿದ ಗೃಹ ಸಚಿವ ಅಮಿತ್ ಶಾ

ಇಂದು ವಿಧಾನಸಭಾ ಚುನಾವಣೆಯ ನಿಮಿತ್ತ ತಮಿಳುನಾಡಿನಲ್ಲಿ ಸಾರ್ವಜನಿಕ ಮೆರವಣಿಗೆ ಮತ್ತು ಪ್ರಚಾರ ಸಭೆಗಳನ್ನು ನಡೆಸಿದ ಅಮಿತ್ ಶಾ, ದಾದಾ ಸಾಹೇಬ್ ಪ್ರಶಸ್ತಿ ಘೋಷಣೆಯಾದ ಕಾರಣ ರಜಿನಿಕಾಂತ್​ಗೆ ತಮಿಳಿನಲ್ಲೇ ಶುಭ ಕೋರಿದ್ದಾರೆ.

ಸೂಪರ್ ಸ್ಟಾರ್ ರಜಿನಿಕಾಂತ್​ಗೆ ಶುಭಹಾರೈಸಿದ ಗೃಹ ಸಚಿವ ಅಮಿತ್ ಶಾ
ರಜಿನಿಕಾಂತ್​ಗೆ ಶುಭಹಾರೈಸಿದ ಗೃಹ ಸಚಿವ ಅಮಿತ್ ಶಾ
Follow us
guruganesh bhat
|

Updated on: Apr 01, 2021 | 9:28 PM

ದೆಹಲಿ: ಸೂಪರ್ ​ಸ್ಟಾರ್ ರಜಿನಿಕಾಂತ್​ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ರಜಿನಿಕಾಂತ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ತಮಿಳಿನಲ್ಲಿ ಟ್ವಿಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ, ವಿಶ್ವದಾದ್ಯಂತ ತಮ್ಮ ನಟನೆ ಮತ್ತು ವ್ಯಕ್ತಿತ್ವದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ರಜಿನಿಕಾಂತ್​ಗೆ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಬೆಳಗ್ಗೆಯಷ್ಟೇ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಘೋಷಿಸಿದ್ದರು.

ಇಂದು ವಿಧಾನಸಭಾ ಚುನಾವಣೆಯ ನಿಮಿತ್ತ ತಮಿಳುನಾಡಿನಲ್ಲಿ ಸಾರ್ವಜನಿಕ ಮೆರವಣಿಗೆ ಮತ್ತು ಪ್ರಚಾರ ಸಭೆಗಳನ್ನು ನಡೆಸಿದ ಅಮಿತ್ ಶಾ, ರಜಿನಿಕಾಂತ್​ಗೆ ತಮಿಳಿನಲ್ಲೇ ಶುಭ ಕೋರಿದ್ದಾರೆ. ತಮಿಳು ಸೂಪರ್‌ಸ್ಟಾರ್ 1975 ರಲ್ಲಿ ಕೆ ಬಾಲಚಂದರ್ ಅವರ ಅಪೂರ್ವ ರಾಗಂಗಲ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದು, ಕಾಲಿವುಡ್‌ನಲ್ಲಿ 45 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ರಜನಿಕಾಂತ್ ಕೊನೆಯ ಬಾರಿಗೆ ಎ.ಆರ್.ಮುರುಗದಾಸ್ ಅವರ ದರ್ಬಾರ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ತಮ್ಮ ಮುಂಬರುವ ಚಿತ್ರ ಅನ್ನಾಥೆ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನೆಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾರ್ಷಿಕವಾಗಿ ಪ್ರಸ್ತುತಪಡಿಸುತ್ತದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಗೌರವಿಸಲಾಗುತ್ತದೆ. ಸ್ವೀಕರಿಸುವವರನ್ನು ಭಾರತೀಯ ಚಲನಚಿತ್ರ ಭ್ರಾತೃತ್ವದ ವಿಶಿಷ್ಟ ವ್ಯಕ್ತಿಗಳ ಸಮಿತಿಯು ಆಯ್ಕೆ ಮಾಡುತ್ತದೆ. ಜಾವಡೇಕರ್ ಅವರ ಟ್ವೀಟ್ ಪ್ರಕಾರ, ಈ ವರ್ಷದ ತೀರ್ಪುಗಾರರಾಗಿದವರೆಂದರೆ – ಗಾಯಕಿ ಆಶಾ ಭೋಸ್ಲೆ, ಚಲನಚಿತ್ರ ನಿರ್ಮಾಪಕ ಸುಭಾಷ್ ಘೈ, ನಟ ಮೋಹನ್ ಲಾಲ್, ಗಾಯಕ-ಸಂಯೋಜಕ ಶಂಕರ್ ಮಹಾದೇವನ್ ಮತ್ತು ಹಿರಿಯ ನಟ ಬಿಸ್ವಾಜೀತ್ ಚಟರ್ಜಿ.

ಇದನ್ನೂ ಓದಿ: Dadasaheb Phalke Award 2020: ಸೂಪರ್​ ಸ್ಟಾರ್​ ರಜಿನಿಕಾಂತ್​ಗೆ 51ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ

Rajinikanth: ರಜನಿಕಾಂತ್​ ಬಾನೆತ್ತರಕ್ಕೆ ಬೆಳೆದರೂ ಕರುನಾಡಿನಲ್ಲೇ ಇದೆ ಈ ಹೆಮ್ಮರದ ಬೇರು!