Tv9 Kannada Digital Live | ಕೊವ್ಯಾಕ್ಸಿನ್​ – ಕೊವಿಶೀಲ್ಡ್​ ಯಾವ ಲಸಿಕೆ ಹಿತ? ವಿಷಯ ತಜ್ಞರೊಂದಿಗೆ ಟಿವಿ9 ಡಿಜಿಟಲ್​ ಚರ್ಚೆ

ಕೊರೊನಾ ತೀವ್ರತೆ ದೇಶದಲ್ಲಿ ಹೆಚ್ಚುತ್ತಿದ್ದು, ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ನಲ್ಲಿ ಯಾವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ. ಕುರಿತಂತೆ ವಿಷಯ ತಜ್ಞರೊಂದಿಗೆ ಟಿವಿ9 ಕನ್ನಡ ಡಿಜಿಟಲ್​ ಚರ್ಚೆ ನಡೆಸಿದೆ.

Tv9 Kannada Digital Live | ಕೊವ್ಯಾಕ್ಸಿನ್​ - ಕೊವಿಶೀಲ್ಡ್​ ಯಾವ ಲಸಿಕೆ ಹಿತ? ವಿಷಯ ತಜ್ಞರೊಂದಿಗೆ ಟಿವಿ9 ಡಿಜಿಟಲ್​ ಚರ್ಚೆ
ಡಾ. ಸುನೀಲ್​, ಆ್ಯಂಕರ್​ ಹರಿಪ್ರಸಾದ್​ ಮತ್ತು ಡಾ. ಚಂದ್ರಶೇಖರ್​
Follow us
shruti hegde
| Updated By: guruganesh bhat

Updated on: Apr 01, 2021 | 9:39 PM

ಇಂದಿನಿಂದ  45 ವರ್ಷಕ್ಕೂ ಮೇಲ್ಪಟ್ಟರಿಗೆ ಕೊವಿಡ್​ ಚುಚ್ಚುಮದ್ದು ಕೊಡುವ ಅಭಿಯಾನ ಪ್ರಾರಂಭವಾಗಿದೆ. ಈ ಕುರಿತಾಗಿ ಒಂದು ಹೊಸ ಚರ್ಚೆ ಪ್ರಾರಂಭವಾಗಿದ್ದು, ಕೊವ್ಯಾಕ್ಸಿನ್​ ಚುಚ್ಚುಮದ್ದು ಕೊವಿಶೀಲ್ಡ್​ಗಿಂತ ಹಿತ ಎಂದು ಯುರೋಪಿನ ದೇಶಗಳಲ್ಲಿ ಮತ್ತು ನಮ್ಮ ದೇಶದಲ್ಲಿಯೂ ಚರ್ಚೆ ನಡೆಯುತ್ತಿದೆ. ಈ ಕುರಿತು ಇಂದು ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಆ್ಯಂಕರ್​ ಹರಿಪ್ರಸಾದ್​ ಚರ್ಚೆ ನಡೆಸಿಕೊಟ್ಟಿದ್ದಾರೆ.

ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್​​ ಲಸಿಕೆಗಳನ್ನು ಕೊರೊನಾ ನಿಯಂತ್ರಣಕ್ಕಾಗಿ ಉಪಯೋಗಿಸಲಾಗುತ್ತಿದೆ. ಇದೀಗ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸರ್ಕಾರ ಆದೇಶ ನೀಡಿದೆ. ಲಸಿಕೆ ಹಾಕುವ ಪ್ರಕ್ರಿಯೆ ಭಾರತದಲ್ಲಿ ನಡೆಯುತ್ತಿದ್ದಂತೆ ಕೊವಿಶೀಲ್ಡ್​ ಉತ್ತಮವೋ? ಅಥವಾ ಕೊವ್ಯಾಕ್ಸಿನ್ ಉತ್ತಮವೋ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಲು ಸಾಂಕ್ರಾಮಿಕ ತಜ್ಞ ಡಾ.ಸುನೀಲ್, ಔಷಧ ತಜ್ಞ ಡಾ. ಚಂದ್ರ ಶೇಖರ್​ ಹಾಗೂ ಜಯದೇವ ಹೃದಯರೋಗ ಆಸ್ಪತ್ರೆಯ ತಜ್ಞ ಡಾ. ಮಂಜುನಾಥ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಡಾ.ಸುನೀಲ್​ ಮಾತನಾಡಿ, ನಮ್ಮಲ್ಲಿ ಕೊವಿಶೀಲ್ಡ್​ ಆಗಲಿ ಅಥವಾ ಕೊವ್ಯಾಕ್ಸಿನ್ ವಿಚಾರಕ್ಕೆ ಬಂದಾಗ 65 ವರ್ಷದವರಿಗೆ ಯಾವುದೇ ತೊಂದರೆ ಆಗಿಲ್ಲ. ಕೊವಿಶೀಲ್ಡ್​ನಿಂದ ಕೊವ್ಯಾಕ್ಸಿನ್​ಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ತಿಳಿದು ಬಂದಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ ವ್ಯಾಕ್ಸಿನ್​ ಇದರಲ್ಲಿ ಯಾವುದು ಉತ್ತಮ ಎಂಬ ಚರ್ಚೆಯಾಗುತ್ತಿದೆ. ಈ ಕುರಿತಂತೆ ಮಾತನಾಡಿದ ಡಾ. ಚಂದ್ರಶೇಖರ್​, ಎರಡೂ ಲಸಿಕೆಗಳಲ್ಲಿ ಪ್ರೋಟೀನ್​ ವ್ಯತ್ಯಾಸವಿರುತ್ತದೆ. ಹಾಗಿದ್ದಾಗ ಯಾವುದರಲ್ಲಿ ಹೆಚ್ಚು ಪ್ರೋಟೀನ್​​ ನೀಡಬಹುದು ಆ ಕುರಿತು ಗಮನ ಹರಿಸುವುದು ಮುಖ್ಯ. ವಾರ್ಷಿಕವಾಗಿ ಗಮನಿಸಿದಾಗ ಯಾವ ಲಸಿಕೆಯ ಸೌಲಭ್ಯ ಸಿಗುತ್ತದೆಯೋ ಅದನ್ನು ಜನರಿಗೆ ನೀಡಿ ಎಂದು ಹೇಳಿದರು. ದೇಹಕ್ಕೆ ಹೆಚ್ಚು ಪ್ರೋಟೀನ್​ ಎಂಬುದು ಜನರೇಟ್​ ಆಗುತ್ತದೆ. ಆದರೆ ಯಾವ ಲಸಿಕೆಯಲ್ಲಿ ಹೆಚ್ಚು ಪ್ರೋಟೀನ್​ ಸಿಗುತ್ತದೆ ಎಂಬುದು ಮುಖ್ಯವಾಗಿರುತ್ತದೆ. ಅದರಲ್ಲಿ ಕೊವ್ಯಾಕ್ಸಿನ್​ ಮುಂದಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಇನ್ನು, ಲಸಿಕೆ ಪಡೆಯಲು ನಿಮಗಿಷ್ಟವಾದ ಸ್ಥಳಕ್ಕೆ ಭೇಟಿ ನೀಡಿ ಲಸಿಕೆ ಪಡೆಯಿರಿ. ಇಲ್ಲೇ ಬಂದು ಲಸಿಕೆ ಪಡೆಯಿರಿ ಎಂಬುದಾಗಿ ಯಾರೂ ಆಜ್ಞೆ ಮಾಡಿಲ್ಲ. ಅಜ್ಞಾನ, ಆತಂಕ, ಭಯವನ್ನು ಪಕ್ಕಕ್ಕಿಟ್ಟು ಹತ್ತಿರದಲ್ಲಿ ಸಿಗುತ್ತಿರುವ ವ್ಯಾಕ್ಸಿನೇಷನ್​ ಸೆಂಟರ್​ಗಳಲ್ಲಿ ಲಸಿಕೆ ಪಡೆಯಿರಿ. ಇದರಿಂದ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು ಎಂದರು ಸೂಚನೆ ನೀಡಿದರು.

ಈ ಕುರಿತಂತೆ ಡಾ. ಮಂಜುನಾಥ್​ ಮಾತನಾಡಿ, ವ್ಯಾಕ್ಸಿನ್​ ಎಂಬುದು ಕೊವಿಡ್​ ಸಮಯದಲ್ಲಿ ಸೋಂಕು ಹರಡುವಿಕೆಯನ್ನು ತಡೆ ಹಿಡಿಯುವುದಾದರೆ ಎಲ್ಲರಿಗೂ ಲಸಿಕೆ ನೀಡಬೇಕು. ಆದರೆ ಹಂತ ಹಂತವಾಗಿ 65 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷ ಮೇಲ್ಪಟ್ಟವರು ಎಂಬುದಾಗಿ ವಿಭಾಗಿಸಿ ಲಸಿಕೆ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ 45 ಕ್ಕಿಂತ ಕಡಿಮೆ ವರ್ಷ ಇರುವವರಿಗೆ ಹೆಚ್ಚು ರೋಗ ಕಂಡುಬರುತ್ತಿದೆ. ಆ ನಿಟ್ಟಿನಲ್ಲಿ ಗಮನಿಸಿದಾಗ ಎಲ್ಲರಿಗೂ ಲಸಿಕೆ ಬೇಕು. ಆದರೆ, ಲಸಿಕೆಯ ಸೌಲಭ್ಯವನ್ನು ಒಂದೇ ಬಾರಿ ಎಲ್ಲರಿಗೂ ನೀಡಲು ಕಷ್ಟವಾಗುವುದರಿಂದ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವ್ಯಾಕ್ಸಿನ್​ ತೆಗೆದುಕೊಂಡರೆ ಏನಾಗುತ್ತಯೋ ಏನೋ? ಎಂಬ ಆತಂಕಕ್ಕೆ ಹೊಂದಿರುವವರು ಯಾರೂ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಲಸಿಕೆಯಿಂದ ಯಾವುದೇ ಪರಿಣಾಮ ಇಲ್ಲ. ಆದರೆ ಕೆಲವರಿಗೆ ಚೂರು ಜ್ವರ, ಮೈಕೈ ನೋವು ಬಂದಿರಬಹುದು. ಆದರೆ ಯಾವುದೇ ಭಯಕ್ಕೆ ಬೀಳುವ ಅವಶ್ಯಕತೆ ಇಲ್ಲ. ಕೊವಿಡ್​ ಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಎರಡೂ ಲಸಿಕೆ ಒಂದೇ ರೀತಿ ಇದೆ. ಯಾವ ಲಸಿಕೆ ಪಡೆಯಲೂ ಭಯ ಬೇಡ. ಲಸಿಕೆ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ರೋಗದ ತೀವ್ರತೆ ಕಡಿಮೆ ಮಾಡಲು ಮತ್ತು ಕೊರೊನಾ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಲಸಿಕೆ ಪಡೆಯುವುದು ಮುಖ್ಯ ಎಂದು ಜನರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: TV9 Digital Live| ಕೊವಿಡ್​ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?

(Which is best Covaccine or Covishield  covid control debate)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ