TV9 Digital Live| ಕೊವಿಡ್​ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?

ಎರಡನೇ ಅಲೆಯ ಉತ್ತುಂಗ ನನ್ನ ಪ್ರಕಾರ ಮೇ ತಿಂಗಳಿನಲ್ಲಿ ಆಗುತ್ತದೆ. 15 ದಿನದಲ್ಲಿ ನಿರ್ಬಂಧ ಹೇರಿದರೆ ಬರುವ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತದೆ. ಜೀವ ಉಳಿಸುವುದು ಮುಖ್ಯ ಗುರಿಯಾಗಿರಬೇಕು ಎಂದು ಡಾ. ಗಿರಿಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

TV9 Digital Live| ಕೊವಿಡ್​ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?
ಕೊರೊನಾ ಕಾರ್ಯಪಡೆ ಸದಸ್ಯರಾದ ಡಾ. ಗಿರಿಧರ್ ಬಾಬು, ಆ್ಯಂಕರ್ ​ ಹರಿಪ್ರಸಾದ್​ ಮತ್ತು ಕೈಗಾರಿಕೋದ್ಯಮಗಳು ಮತ್ತು ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷರಾದ ಬಂಗೇರಾ
Follow us
preethi shettigar
|

Updated on: Mar 31, 2021 | 12:05 PM

ಕರ್ನಾಟಕ ಸರ್ಕಾರ ಕೊವಿಡ್​ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಕೊವಿಡ್​ ನಿಯಂತ್ರಣ ಮಾಡಲು ಸಹಕಾರಿಯಾಗಬಹುದೇ? ಇದರಲ್ಲಿ ಜನರ ಪಾತ್ರ ಏನಿರುತ್ತೆ? ಇವೆಲ್ಲದರ ಬಗ್ಗೆ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಆ್ಯಂಕರ್​ ಹರಿಪ್ರಸಾದ್​ ಚರ್ಚೆ ನಡೆಸಿದ್ದಾರೆ. ಸಂವಾದದಲ್ಲಿ ಕೈಗಾರಿಕೋದ್ಯಮಗಳು ಮತ್ತು ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷರಾದ ಬಂಗೇರಾ, ಕೊರೊನಾ ಕಾರ್ಯಪಡೆ ಸದಸ್ಯರಾದ ಡಾ. ಗಿರಿಧರ್ ಬಾಬು, ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾಗಿರುವ ಕೆ. ಸತ್ಯನಾರಯಣ , ಮಹೇಂದ್ರ ಲದ್ದಡ್ ಭಾಗಿಯಾಗಿದ್ದಾರೆ.

ಕೊರೊನಾ ನಿಯಂತ್ರಣ ಮಾಡಲು ಮೂರು ರೀತಿಯ ಕ್ರಮಗಳನ್ನು ನಾವು ತೆಗೆದುಕೊಳ್ಳಬಹುದು ಮೊದಲನೇಯದಾಗಿ ಹೊಸ ವೈರಸ್ ಪ್ರಭೇದ ಹೆಚ್ಚು ಸಾಂಕ್ರಾಮಿಕವೇ? ಹೆಚ್ಚು ಹರಡುತ್ತದೆಯೇ? ಎನ್ನವುದರ ಬಗ್ಗೆ ತುಂಬಾ ಪರೀಕ್ಷೆ ಮಾಡಬೇಕಾಗುತ್ತದೆ. ಜೆನೊಮಿಕ್ ಸೀಕ್ವೇನ್ಸ್ ಮತ್ತು ಇನ್‌ವಿಟ್ರೋ ಪರೀಕ್ಷೆ ಇದೆ ಅದನ್ನು ಮಾಡಲು ಏನೆಲ್ಲಾ ಸಲಕರಣೆ ಬೇಕು ಅದನ್ನು ತೆಗೆದುಕೊಂಡು ಬಂದು ಹೊಸ ಪ್ರಭೇದ ಮೇಲೆ ಪರೀಕ್ಷೆ ನಡೆಸಬೇಕು. ಈ ಸೋಂಕು ಮೊದಲು ಬಂದವರಲ್ಲಿಯೇ ಕಂಡು ಬಂದಿದೆಯೇ ಅಥವಾ ಸೋಂಕು ಹೊಸ ರೀತಿಯದ್ದೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಮೂರನೇಯದಾಗಿ ಕೋವಿಡ್ ಹರಡುವಿಕೆಯನ್ನು ಕಡಿಮೆ ಮಾಡಲು ಸೂಕ್ತ ನಡವಳಿಕೆಗಳು ಇದೆ. ಅವುಗಳನ್ನು ಅನುಸರಿಸಬೇಕು. ಈ ಮೂರು ಕ್ರಮಗಳನ್ನು ಅನುಸರಿಸಿದಾಗ ಮತ್ತು ಕೊರೊನಾ ಲಸಿಕೆಯನ್ನು ಅತ್ಯಂತ ವೇಗದಲ್ಲಿ ನೀಡಿದಾಗ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತದೆಯೇ ಹೊರತು, ಒಂದೇ ಒಂದು ನಿಯಮ ಮಾಡುವುದರಿಂದ ಉಪಯೋಗವಿಲ್ಲ ಎಂದು ಕೊರೊನಾ ಕಾರ್ಯಪಡೆ ಸದಸ್ಯರಾದ ಡಾ. ಗಿರಿಧರ್ ಬಾಬು ಹೇಳಿದ್ದಾರೆ.

ಲಾಕ್​ಡೌನ್ ಮಾಡಿದಾಗ ಮಾತ್ರ ಜನ ಕೇಳುತ್ತಾರೆ ಎಂದಾಗ ಏನು ಮಾಡಲು ಸಾಧ್ಯವಿಲ್ಲ. ಯಾವುದೇ ಸಾಮೂಹಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಬಸ್​ಗಳಲ್ಲಿ, ಮಾರುಕಟ್ಟೆಗಳಲ್ಲಿ ಅಥವಾ ತುಂಬಾ ಜನರು ಸೇರುವ ಕಡೆಗಳಲ್ಲಿ ಮಾಸ್ಕ್​ ಕಡ್ಡಾಯ ಮಾಡಬೇಕು. ಹೊರಗಿನ ಸ್ಥಳಗಳಲ್ಲಿ ಕೊರೊನಾ ಸೋಂಕು ಹರಡದಂತೆ ಒಂದು ವಿಧಾನವನ್ನು ಅನುಸರಿಸಬೇಕು ಹಾಗೂ ಒಳಗೆ ನಡೆಯುವ ಕಾರ್ಯಕ್ರಮಗಳ ಮೇಲೆ ಸ್ವಲ್ಪ ಭಿನ್ನ ವಿಧಾನವನ್ನು ಅನುಸರಿಸಬೇಕು ಎಂದು ಕೊರೊನಾ ಕಾರ್ಯಪಡೆ ಸದಸ್ಯರಾದ ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

ಎಲ್ಲಿ ಹೊರಗಡೆ ಸಮಾರಂಭ ಆಗತ್ತದೆಯೋ ಅಥವಾ ಬಸ್​ಸ್ಟಾಂಡ್‌ಗಳಲ್ಲಿನ ಜನ ಸಮೂಹದ ಮೇಲೆ ನಿಯಂತ್ರಣ ಹೇರಬಹುದು. ಆದರೆ ಒಳಗಿನ ಒಡನಾಟವನ್ನು ನಿಯಂತ್ರಣಕ್ಕೆ ತರುವುದು ಕಷ್ಟ. ಮಾಸ್ಕ್ ಹಾಕದೇ ಇದ್ದರೆ ಮುಚ್ಚಿದ ಸ್ಥಳಗಳಲ್ಲಿ ಸೋಂಕು ಹರಡು ಸಾಧ್ಯತೆ ಹೆಚ್ಚು. ಆಗುವ ಸಾವುಗಳನ್ನು ತಡೆಯಲು ಎರಡು ವಿಧಾನ ಇದೆ ಒಂದು ಯಾರು ಲಸಿಕೆಗಳನ್ನು ತೆಗೆದುಕೊಳ್ಳಲು ಅರ್ಹರು ಅವರೆಲ್ಲಾ ಲಸಿಕೆ ತೆಗೆದುಕೊಳ್ಳಲೇ ಬೇಕು. ಇನ್ನೊಂದು ಎಲ್ಲೇ ಕೊರೊನಾ ಕೇಸ್‌ಗಳಿದ್ದರು ಅದನ್ನು ಶೀಘ್ರವೇ ತಡೆಯಬೇಕು ಇದಕ್ಕೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯ ಎಂದು ಕೊರೊನಾ ಕಾರ್ಯಪಡೆ ಸದಸ್ಯರಾದ ಡಾ. ಗಿರಿಧರ್ ಬಾಬು ಹೇಳಿದ್ದಾರೆ.

ಜನ ಜೀವನ ಅಸ್ತವ್ಯಸ್ತ ಆಗಬಾರದು ಎನ್ನುವುದು ನಮ್ಮೇಲ್ಲರ ಆಶಯ. ಮದುವೆ ಮಂಟಗಳಲ್ಲಿ ಕೊರೊನಾ ಕೇಸ್‌ಗಳು ಕಂಡುಬಂದರೆ ಮಂಟಪದ ಮಾಲೀಕರ ಮೇಲೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದವರ ಮೇಲೆ ಬೇರೆ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ಇದೆ. ಮದುವೆ ಮಂಟಪವನ್ನೇ ಮುಚ್ಚಿಸುವ ಕಾರ್ಯದ ಬಗ್ಗೆಯೂ ಯೋಚಿಸಲಾಗಿದೆ. ಸರ್ಕಾರದಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಇಲ್ಲ. ಎಲ್ಲರ ಪ್ರಯತ್ನ ಬೇಕು ಎಂದು ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

ದೇಶದಾದ್ಯಂತ ಈಗ ಮತ್ತೆ ಕೊರೊನಾದ ಎರಡನೇ ಅಲೆ ಶುರುವಾಗಿದೆ. ಮೊದಲು ಹೇಗೆ ಕೇರಳದಲ್ಲಿ , ಮಹರಾಷ್ಟ್ರದಲ್ಲಿ ಕೊರೊನಾ ಆರಂಭ ಆಯಿತು. ಹಾಗೆ ಪುನಃ ಪ್ರಾರಂಭವಾಗಿದೆ. 19 ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಬರೀ ಜನರನ್ನು ನಿಂದನೆ ಮಾಡೋದು ಸರಿ ಅಲ್ಲ. ಲಸಿಕೆಯನ್ನು ಮುಂದೆ ಬಂದು ತೆಗೆದುಕೊಳ್ಳವವರ ಸಂಖ್ಯೆ ಹೆಚ್ಚಾಗಬೇಕು. ಎಲ್ಲರಿಗೂ ಕೂಡ ಮತ್ತೆ ಎರಡನೇ ಅಲೆ ಬಗ್ಗೆ ಬೇಸರ ಇದೆ ಆದರೆ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಎರಡನೇ ಅಲೆಯ ಭಯ ನನ್ನ ಪ್ರಕಾರ ಮೇ ತಿಂಗಳಿನಲ್ಲಿ ಆಗುತ್ತದೆ. 15 ದಿನದಲ್ಲಿ ನಿರ್ಬಂಧ ಹೇರಿದರೆ ಬರುವ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತದೆ. ಜೀವ ಉಳಿಸುವುದು ಮುಖ್ಯ ಗುರಿಯಾಗಿರಬೇಕು ಎಂದು ಡಾ. ಗಿರಿಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷೆಗಳು ನಡೆಯಬೇಕು ಮತ್ತು ಕೊರೊನಾ ಇರಲಿ ಇರದೆ ಇರಲಿ ಐಸೋಲೇಶನ್ ಮಾಡಿಸುವುದರಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು ಮತ್ತು ಲಾಕ್‌ಡೌನ್‌ನಂತಹ ವ್ಯವಸ್ಥೆ ಮತ್ತೆ ಜಾರಿಗೆ ತರುವ ಅನಿವಾರ್ಯತೆಯಿಂದ ಕೂಡ ದೂರ ಇರಬಹುದು. ಜನರೆಲ್ಲ ಗುಂಪು ಸೇರುತ್ತಾರೆ, ಹಾಗಿದ್ದಾಗ ನಾವು ಏಕೆ ಕಾರ್ಯಕ್ರಮ ಮಾಡಬಾರದು ಎನ್ನುವುದು ಸರಿಯಲ್ಲ. ಅವರು ತಪ್ಪು ಮಾಡುತ್ತಾರೆ ನಾವು ಮಾಡೋಣ ಎಂದು ಕೊನೆಗೆ ಲಾಕ್‌ಡೌನ್‌ಗೆ ಬಂದು ತಲುಪುವ ಬದಲು ನಮ್ಮ ಜವಾಬ್ದಾರಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಸರ್ಕಾರದ ಮಾರ್ಗಸೂಚಿ ನಂತರ ನಮ್ಮ ಮಾರ್ಗಸೂಚಿ ಅಗತ್ಯ ಮತ್ತು ಸ್ವಯಂ ಪ್ರೇರಣೆ ಅಗತ್ಯ ಎಂದು ಡಾ. ಗಿರಿಧರ್ ಬಾಬು ತಿಳಿಸಿದ್ದಾರೆ.

ಜನ ತಿಳುವಳಿಕೆಯಿಂದ ಕೆಲಸ ಮಾಡಬೇಕು ಜೀವ ಮತ್ತು ಜೀವನ ಎರಡು ಕೂಡ ಮುಖ್ಯ. ಆದರೆ ಕಳೆದ ಎರಡು ತಿಂಗಳಲ್ಲಿ ಜನ ಈ ಕೊರೊನಾವನ್ನು ಬಹಳ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ನಿರ್ಬಂಧ ಮಾಡಿದರೂ ಪ್ರಯೋಜನ ಇಲ್ಲ. ಜನರಲ್ಲಿ ತಿಳುವಳಿಕೆ ಮೂಡಿಸಿಕೊಳ್ಳುವುದು ಅಗತ್ಯ ನನ್ನ ಜೀವನ ನಾನು ಕಾಪಾಡಬೇಕು, ನನ್ನ ಪಕ್ಕದವರ ಜೀವವನ್ನು ನಾನು ರಕ್ಷಣೆ ಮಾಡಬೇಕು, ನನ್ನ ವ್ಯವಹಾರವನ್ನು ರಕ್ಷಣೆ ಮಾಡಬೇಕು. ಇದನ್ನು ಜನ ತಿಳಿಯಬೇಕು. ನಮ್ಮ ಕೈಗಾರಿಕೆಯಲ್ಲೂ ಅಷ್ಟೇ ಮಾಸ್ಕ್ ಮತ್ತು ಸ್ಯಾನಿಟೈಜರ್ ಕಡ್ಡಾಯ ಮಾಡಿದ್ದೇವೆ. ಇದಕ್ಕೆ ನಮ್ಮಲ್ಲಿ ಒಂದು ಕೊರೊನಾ ಕೇಸ್ ಬಂದಿಲ್ಲ. ಈಗಾಗಲೇ ಕೈಗಾರಿಕೆಗಳಲ್ಲಿನ ರಪ್ತು ಪ್ರಕ್ರಿಯೆ ಸಂಪೂರ್ಣವಾಗಿ ಬಂದ್ ಆಗಿದೆ. ಇನ್ನು ನಾವು ಎಚ್ಛೆತ್ತು ಕೊಳ್ಳದೆ ಇದ್ದರೆ ಸ್ಥಿತಿ ಗಂಭೀರವಾಗುತ್ತದೆ ಎನ್ನವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕೈಗಾರಿಕೋದ್ಯಮಗಳು ಮತ್ತು ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷರಾದ ಬಂಗೇರಾ ತಿಳಿಸಿದ್ದಾರೆ.

ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವ ಕಾನೂನು ತಪ್ಪು. ಕಲ್ಯಾಣ ಮಂಟಪಕ್ಕೆ ಬರುವ ಗ್ರಾಹಕರಿಗೆ ನಾವು ಮೊದಲೇ ಕೊರೊನಾ ನಿಯಮದ ಬಗ್ಗೆ ತಿಳಿಸಿರುತ್ತೇವೆ. ಅವರು ಕೂಡ ಮಾಸ್ಕ್ ಹಾಕಿರುತ್ತಾರೆ. ಮೊದಲು ಅವರು 300 ಜನ ಬರುತ್ತಾರೆ ಎಂದು ತಿಳಿಸಿರುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ಜನ ಸ್ಥಳಕ್ಕೆ ಆಗಮಿಸುತ್ತಾರೆ. ಹೀಗಾಗಿ ಸರ್ಕಾರ ಮಾಲೀಕರನ್ನು ಹೊಣೆ ಮಾಡುವುದು ತಪ್ಪು. ಸ್ಯಾನಿಟೈಜರ್ ಇಟ್ಟು ನಾವು ನಿಯಮ ಪಾಲನೆ ಮಾಡಿ ಎಂದು ಹೇಳಿದ ಮೇಲೂ ಅವರು ಉಲ್ಲಂಘನೆ ಮಾಡುತ್ತಾರೆ. ಟ್ಯಾಕ್ಸ್, ಜಿಎಸ್‌ಟಿ ಕಟ್ಟಿ ಮತ್ತೆ ನಮ್ಮನ್ನೇ ನೇರ ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾಗಿರುವ ಕೆ. ಸತ್ಯನಾರಯಣ ಹೇಳಿದ್ದಾರೆ.

ನಾವು ಸಾಲ ಕಟ್ಟಿ ಜೀವನ ನಡೆಸುತ್ತಿರುತ್ತೇವೆ ಹೀಗಾಗಿ ಸರ್ಕಾರ ನಮ್ಮ ಬಗ್ಗೆ ಯೋಚಿಸುವುದು ಕೂಡ ಅನಿವಾರ್ಯ. ಹುಡುಗ ಮತ್ತು ಹುಡುಗಿಯ ತಂದೆ ತಾಯಿಗಳನ್ನು ಕರೆಸಿ ಕೊರೊನಾ ನಿಯಮ ಪಾಲನೆ ಮಾಡುವಂತೆ ಅವರಿಂದ ಅರ್ಜಿಯನ್ನು ಕೂಡ ನಾವು ಸ್ವೀಕರಿಸುತ್ತೇವೆ. ಇನ್ನು ಹೆಚ್ಚು ನಿರ್ಬಂಧವನ್ನು ಹೇರಿದರೆ ಕಲ್ಯಾಣ ಮಂಟಪವನ್ನು ಬಿಟ್ಟು ದೇವಾಲಯಗಳಲ್ಲಿ ಮದುವೆ ಮಾಡುತ್ತಾರೆ. ಇದರಿಂದ ನಾವು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಸರ್ಕಾರ ಮಾತ್ರ ನಮಗೆ ನಷ್ಟ ಆದರೂ ತೊಂದರೆ ಇಲ್ಲ ನಮ್ಮ ಟ್ಯಾಕ್ಸ್ ನಮಗೆ ಕೊಡಿ ಎನ್ನುತ್ತಾರೆ ಎಂದು ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾಗಿರುವ ಕೆ. ಸತ್ಯನಾರಯಣ ತಿಳಿಸಿದ್ದಾರೆ.

ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ನಿಜ. ಆದರೆ ತುಂಬಾ ನಿರ್ಬಂಧಗಳನ್ನು ಹೇರಿದರು ಕೂಡ ಕಷ್ಟ. ಏಕೆಂದರೆ ಲಾಕ್‌ಡೌನ್‌ನಿಂದಾಗಿ ಜನರು ಈಗ ಸ್ವಲ್ಪ ಹೊರಗೆ ಬರುತ್ತಿದ್ದಾರೆ ಮತ್ತು ಸುಧಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಲಸಿಕೆಯನ್ನು ಇನ್ನು ಹೆಚ್ಚುಗೊಳಿಸಬೇಕು. ಹೊಸ ನಿಯಮಗಳಿಗಿಂತ, ಇರುವ ನಿಯಮವನ್ನೇ ಪಾಲಿಸುವಲ್ಲಿ ಹೆಚ್ಚು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಮಹೇಂದ್ರ ಲದ್ದಡ್ ಹೇಳಿದ್ದಾರೆ.

ಒಟ್ಟಾರೆ ಸರ್ಕಾರ ಕ್ರಮ ತೆಗೆದುಕೊಳ್ಳುವುದೇ ಕೆಲವೊಂದು ಸಮಸ್ಯೆಗಳಿಗೆ ನಿಯಂತ್ರಣಗಳನ್ನು ತರಲು ಆದರೆ ಕೆಲವೊಂದಿಷ್ಟು ಕ್ರಮಗಳಿಂದ ಹಲವು ಗುಂಪುಗಳಿಗೆ ತೊಂದರೆಯಾಗುತ್ತದೆ. ಆದರೆ ಕೊರೊನಾದ ಕ್ಲಿಷ್ಟಕರ ಸಂದರ್ಭದಲ್ಲಿ ಎಲ್ಲರೂ ನಿಯಮವನ್ನು ಪಾಲಿಸುವುದು ಅಗತ್ಯ.

ಇದನ್ನೂ ಓದಿ:

Tv9 Digital Live | ಕೊರೊನಾ 2ನೇ ಅಲೆಯಿಂದ ಮಕ್ಕಳನ್ನು ಕಾಪಾಡುವುದು ಹೇಗೆ? 

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ