TV9 Education Expo 2025: SSLC, PUC ಬಳಿಕ ಮುಂದೇನು? ಚಿಂತೆ ಬೇಡ, ಟಿವಿ9 ಎಜುಕೇಷನ್ EXPO ನೀಡುತ್ತಿದೆ ಹತ್ತು ಹಲವು ಕೋರ್ಸ್ಗಳ ಮಾಹಿತಿ
TV9 ಎಜುಕೇಷನ್ EXPO, SSLC ಮತ್ತು PUC ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ, ವ್ಯಾಪಾರ ಮತ್ತು ಇನ್ನೂ ಅನೇಕ ಕೋರ್ಸ್‌ಗಳ ಮಾಹಿತಿ ಇಲ್ಲಿ ಲಭ್ಯವಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ(ಏ.04) ಮೂರು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಪ್ರವೇಶ ಉಚಿತ.
ವಿದ್ಯಾರ್ಥಿ ಜೀವನದಲ್ಲಿ ಬಹು ದೊಡ್ಡ ಘಟ್ಟಗಳೆಂದರೆ ಅದುವೇ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ . ಆದರೆ ಈ ಎಸ್ಎಸ್ಎಲ್‌ಸಿ ಬಳಿಕ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ. ವಿದ್ಯಾರ್ಥಿಗಳ ಈ ಗೊಂದಲಕ್ಕೆ ಟಿವಿ9 ಎಜುಕೇಷನ್ EXPO ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ಟಿವಿ9 ಎಜುಕೇಷನ್ EXPO SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳುವ ಒಂದೇ ಸೂರಿನಡಿ ಹಲವು ಮಾಹಿತಿಗಳನ್ನು ನೀಡುತ್ತಿದೆ. ಇಂದಿನಿಂದ(ಏ.04) ಮೂರು ದಿನಗಳ ಕಾಲ ನಡೆಯಲಿರುವ ಟಿವಿ9 ಎಜುಕೇಷನ್ EXPOಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ಟಿವಿ9 ಎಜುಕೇಷನ್ EXPOದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿವೆ. ಇಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್, ಫೈನಾನ್ಸ್, ಫೈರ್ ಸೇಫ್ಟಿ, ಮ್ಯಾನೇಜ್ಮೆಂಟ್ ಇತ್ಯಾದಿ ಕೋರ್ಸ್ಗಳ ಬಗ್ಗೆ ಮಾಹಿತಿ ಸಿಗಲಿದೆ. ಪ್ರವೇಶ ಸಂಪೂರ್ಣ ಉಚಿತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ