AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಬೆಳೆಗಳಿಗೆ ನೀರು ಹರಿಸುವಂತೆ ಹೇಳಿದ್ದ ಕೋರ್ಟ್ ಆದೇಶಕ್ಕೂ ಅಡ್ಡಗಾಲು ಹಾಕಿದ ಸರ್ಕಾರ

ಯಾದಗಿರಿ ಜಿಲ್ಲೆಯಲ್ಲಿ ನೀರಿಗಾಗಿ ರಾಜ್ಯ ಸರ್ಕಾರ ಹಾಗೂ ರೈತರ ನಡುವಿನ ಕಾಳಗ ಮುಂದುವರಿದಿದೆ. ಬಸವಸಾಗರ (ನಾರಾಯಣಪುರ) ಜಲಾಶಯ ಭಾಗದ ರೈತರು ರಾಜ್ಯ ಸರ್ಕಾರದ ವಿರುದ್ಧ ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಬೆಳೆಗಳಿಗೆ ನೀರಿಲ್ಲವೆಂದು ಹೋರಾಟ, ಪ್ರತಿಭಟನೆಗಳನ್ನು ಮಾಡಿದರೂ ಸರ್ಕಾರ ಯಾವುದೇ ಸ್ಪಂದನೆ ಮಾಡಿಲ್ಲ. ಹೀಗಾಗಿ ರೈತರು ಕಲಬುರಗಿ ಹೈಕೋರ್ಟ್​ ಮೆಟ್ಟಿಲೇರಿ ನೀರು ಪಡೆದುಕೊಂಡಿದ್ದರು. ಆದ್ರೆ, ಇದೀಗ ಇದಕ್ಕೆ ರಾಜ್ಯ ಸರ್ಕಾರ ತಡೆಯಾಜ್ಞೆ ತಂದಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ರೈತರ ಬೆಳೆಗಳಿಗೆ ನೀರು ಹರಿಸುವಂತೆ ಹೇಳಿದ್ದ ಕೋರ್ಟ್ ಆದೇಶಕ್ಕೂ ಅಡ್ಡಗಾಲು ಹಾಕಿದ ಸರ್ಕಾರ
Basavasagar
ಅಮೀನ್​ ಸಾಬ್​
| Edited By: |

Updated on:Apr 04, 2025 | 3:34 PM

Share

ಯಾದಗಿರಿ, (ಏಪ್ರಿಲ್ 04): ತಮ್ಮ ಬೆಳೆಗಾಗಿ ರೈತರು (Farmers)  ಕೋರ್ಟ್​​ ಮೂಲಕ ನೀರು(Water) ಪಡೆದುಕೊಳ್ಳುತ್ತಿರುವುದಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕಿದೆ. ಇದರಿಂದ ರೈತರ ಆಕ್ರೋಶ ಭುಗಿಲೆದ್ದಿದೆ. ನೀರಿಲ್ಲದೇ ತಮ್ಮ ಬೆಳೆಗಳು ಒಣಗುತ್ತಿವೆ ಎಂದು ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಪರಿಗಣಿಸಿದ್ದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ರೈತರ ಮನವಿಗೆ ಸ್ಪಂದಿಸಿದ್ದು, ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆದು ನಿಂತಿರುವ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏ.4 ಇದೇ ಏ. 6ರವರೆಗೆ ಬಸವಸಾಗರ (ನಾರಾಯಣಪುರ) ಜಲಾಶಯದಿಂದ (Basava Sagar Reservoir)  ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶಿಸಿತ್ತು. ಆದ್ರೆ, ರಾಜ್ಯ ಸರ್ಕಾರಕ್ಕೆ ಇದರ ವಿರುದ್ಧ ಮೇಲ್ಮನವಿ ಹೋಗಿ ದ್ವಿಸದಸ್ಯ ಪೀಠದಿಂದ ತಡೆಯಾಜ್ಞೆ ತಂದಿದೆ. ಇದರಿಂದ ರೈತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಬೆಳೆಗಳಿಗೆ ನೀರು ಕೊಡಿ ಎಂದು ರೈತರು ಪ್ರತಿಭಟನೆ, ಹೋರಾಟಗಳನ್ನು ಮಾಡಿದರೂ ಸಹ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕೊನೆಗೆ ಹುಣಸಗಿ ತಾಲೂಕಿನ ಮಲ್ಲಿಕಾರ್ಜುನ ಎಂಬ ರೈತ ಸರ್ಕಾರದ ವಿರುದ್ಧ ಕಲಬುರಗಿ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದರು. ಈ ನಿನ್ನೆ (ಏಪ್ರಿಲ್ 03) ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಏಪ್ರಿಲ್ 04 ರಿಂದ ಏಪ್ರಿಲ್ 6ರ ತನಕ ಜಲಾಶಯ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ 0.8 ಟಿಎಂಸಿ ನೀರು ಹರಿಸುವಂತೆ ಆದೇಶಿಸಿತ್ತು. ಇದರಿಂದ ಫುಲ್ ಖುಷ್ ಆಗಿದ್ದರು. ಆದ್ರೆ, ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್​ ದ್ವಿಸದಸ್ಯ ಪೀಠ, ನೀರು ಹರಿಸುವ ಆದೇಶಕ್ಕೆ ಏಪ್ರಿಲ್ 9ರವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಇದನ್ನೂ ಒದಿ: ಪ್ರತಿಭಟನೆ, ಹೋರಾಟಕ್ಕೆ ಮಣಿಯದ ಸರ್ಕಾರಕ್ಕೆ ತಮ್ಮ ಗತ್ತು ತೋರಿಸಿದ ರೈತರು..!

ರೈತರನ್ನ ಉಳಿಸಬೇಕಿದ್ದ ಸರ್ಕಾರವೇ ಈ ತಡೆಯಾಜ್ಞೆ ತಂದಿರುವುದಿರಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದ ರೈತರು ಸರ್ಕಾರ ನಡೆಯನ್ನು ಖಂಡಿಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ಜು ಈ ಬಗ್ಗೆ ಮಾಜಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದು, ನಿನ್ನೆ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಸರ್ಕಾರಕ್ಕೆ ಮೇಲ್ಮನವಿ ಹೋಗಬೇಡಿ ಎಂದು ನಾವು ಮನವಿ ಮಾಡಿದ್ವಿ. ಆದ್ರೆ ಸರ್ಕಾರ ಕೋರ್ಟ್ ಮೊರೆ ಹೋಗಿ ಸ್ಟೇ ತರುವ ಕೆಲಸ ಮಾಡಿದೆ. ಸರ್ಕಾರ ಈ ರೀತಿ ಬಂಡತನಕ್ಕೆ ಹೋಗುತ್ತೆ ಎಂದು ಅಂದುಕೊಂಡಿರಲಿಲ್ಲ. ನೀರು ಬಿಡೋಕೆ ರೆಡಿ ಇದ್ದೇವೆ. ಎಷ್ಟು ಲಭ್ಯತೆ ಇದೆ ಎಂದು ನೋಡಿ ಬಿಡುವುದಕ್ಕೆ ಸ್ಟೇ ತಂದಿದ್ದಾರೆ. ನೀರು ಬಿಡುವುದೇ ಆದ್ರೆ ಸ್ಟೇ ತಂದಿರುವುದು ಏಕೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದನ್ನೂ ಓದಿ
Image
ಶೀಘ್ರದಲ್ಲೇ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ: ಕರ್ನಾಟಕ ಸರ್ಕಾರ ಶುಭ ಸುದ್ದಿ
Image
ಇಂದಿನಿಂದ ಬೆಂಗಳೂರಿನಲ್ಲಿ ಮಳೆ, ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Image
ಸಾರ್ವಜನಿಕರ ಗಮನಕ್ಕೆ: ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ
Image
ಯಾದಗಿರಿ: ಬಸವಸಾಗರ ಜಲಾಶಯದ ನೀರು ತೆಲಂಗಾಣ ಪಾಲು

ನಿಮ್ಮ ಉದ್ದೇಶ ಎಡ ಮತ್ತು ಬಲದಂಡೆ ಕಾಲುವೆ ರೈತರ ಜೀವ ತೆಗೆಯುವುದು ಇದೆಯಾ? ಈ ಸರ್ಕಾರ ರೈತರ ವಿರೋಧಿ ಸರ್ಕಾರ. ತೆಲಂಗಾಣಕ್ಕೆ ನೀರು ಬಿಡಲು ಇವರಿಗೆ ಬಹಳ ಪ್ರೀತಿಯಿತ್ತು. ಆದ್ರೆ ನಮ್ಮ ರೈತರಿಗೆ ನೀರು ಬಿಡಲು ಪ್ರೀತಿ ಇಲ್ಲ. ನನಗೆ ನೀರು ಬಿಡಿಸುವ ಕ್ರೆಡಿಟ್ ಬೇಕಾಗಿಲ್ಲ. ಸದ್ಯ ಯಾವುದೇ ಚುನಾವಣೆಗಳು ಇಲ್ಲ. ನಾನೇ ಒಂದೇ ವರ್ಷದಲ್ಲಿ ಎರಡು ಚುನಾವಣೆ ಸೋತಿದ್ದೆನೆ. ಚುನಾವಣೆಗೆ ಇನ್ನು ಮೂರು ವರ್ಷವಿದೆ ಮುಂದೆ ನೋಡೋಣಾ. ನಾವು ಅನುಕಂಪದ ಮೇಲೆ ಗೆದ್ದಿರುವ ವ್ಯಕ್ತಿ ಅಲ್ಲ. ಈ ಕೋರ್ಟ್ ನಲ್ಲಿ ಏಪ್ರಿಲ್ 9 ವರೆಗೆ ಸ್ಟೇ ತಂದಿದ್ದಾರೆ. ಮುಂದೆ ಕೂಡ ನಾನು ಕಾನೂನಾತ್ಮಕ ಹೋರಾಟ ಮತ್ತು ಪ್ರತಿಭಟನೆಗೆ ಬದ್ಧನಾಗಿದ್ದೆನೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 4 April 25

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ