Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ: ಕಾರ್ಮಿಕರಿಗೆ ಶುಭ ಸುದ್ದಿ ನೀಡಲು ಮುಂದಾದ ಕರ್ನಾಟಕ ಸರ್ಕಾರ

Minimum wages in Karnataka: ಕರ್ನಾಟಕ ಸರ್ಕಾರವು ಕೌಶಲ್ಯಯುಕ್ತ ಮತ್ತು ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲು ಉದ್ದೇಶಿಸಿದೆ. 20,000 ರೂ. ವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಕರಡು ಪ್ರಸ್ತಾವನೆಯನ್ನು ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಿ ಅನುಮೋದನೆ ಪಡೆದ ನಂತರ, ಮುಂದಿನ ಒಂದೆರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ: ಕಾರ್ಮಿಕರಿಗೆ ಶುಭ ಸುದ್ದಿ ನೀಡಲು ಮುಂದಾದ ಕರ್ನಾಟಕ ಸರ್ಕಾರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Apr 03, 2025 | 10:53 AM

ಬೆಂಗಳೂರು, ಏಪ್ರಿಲ್ 3: ಕೌಶಲಯುಕ್ತ ಮತ್ತು ಕೌಶಲ್ಯ ರಹಿತ ಕಾರ್ಮಿಕರ ಕನಿಷ್ಠ ವೇತನ (Minimum wages) ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ (Karnataka govt) ಉದ್ದೇಶಿಸಿದ್ದು, ಮುಂದಿನ ಒಂದೆರಡು ವಾರಗಳ ಒಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಒಂದು ವೇಳೆ, ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಷ್ಟೇ ಪ್ರಮಾಣದಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದ್ದೇ ಆದಲ್ಲಿ, ಕಾರ್ಮಿಕರಿಗೆ ದೇಶದಲ್ಲಿಯೇ ಅತಿ ಹೆಚ್ಚು ಕನಿಷ್ಠ ವೇತನ ನೀಡುವ ರಾಜ್ಯ ಎಂದು ಕರ್ನಾಟಕ ಗುರುತಿಸಿಕೊಳ್ಳಲಿದೆ. ಒಟ್ಟು 82 ವಿವಿಧ ಕೆಲಸಗಳಿಗೆ ಕಾರ್ಮಿಕರ ಕನಿಷ್ಠ ವೇತನ ಅನ್ವಯವಾಗಲಿದೆ. ಈ ಸಂಬಂಧ 2022 ರಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.

ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಲಾಗುವುದು. ಮಂಡಳಿಯು ಅನುಮೋದನೆ ನೀಡಿದ್ದೇ ಆದಲ್ಲಿ ಮುಂದಿನ ಒಂದೆರಡು ವಾರಗಳಲ್ಲಿ ಸರ್ಕಾರ ಅಧಿವೇಶನ ಹೊರಡಿಸುವ ನಿರೀಕ್ಷೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ವೇತನ ಪರಿಷ್ಕರಣೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.

ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ವಿವರ

ಪ್ರಸ್ತುತ ಕರ್ನಾಟಕದಲ್ಲಿ ಕೌಶಲ ಸಹಿತ ಮತ್ತು ಕೌಶಲರಹಿತ ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 12,000 ಇದೆ. ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಇದು 20,000 ರೂಪಾಯಿಗೆ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಸೇರಿದಂತೆ ವಿವಿಧ ವಲಯಗಳ ಸುಮಾರು 1.7 ಕೋಟಿ ಕಾರ್ಮಿಕರಿದ್ದಾರೆ.

ಇದನ್ನೂ ಓದಿ
Image
ಕೆಲಸಕ್ಕಾಗಿ ಆರೋಗ್ಯ ನಿರ್ಲಕ್ಷ್ಯಿಸಬೇಡಿ; ಐಸಿಯುಗೆ ದಾಖಲಾದ ಬೆಂಗಳೂರು ಸಿಇಒ
Image
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
Image
ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ, ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ
Image
ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್​​ ದರ ಏರಿಕೆ

ಕನಿಷ್ಠ ವೇತನವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಬೇಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಕನಿಷ್ಠ ವೇತನ ಕಡಿಮೆ ಇರಬೇಕೆಂದು ಉದ್ಯೋಗದಾತರು ಬಯಸಿದ್ದರು ನಾವು ಎಲ್ಲರ ಹಿತಾಸಕ್ತಿಯನ್ನು ಪರಿಗಣಿಸುತ್ತೇವೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕನಿಷ್ಠ ವೇತನವನ್ನು ತಿಂಗಳಿಗೆ 35000 ರೂಪಾಯಿಗೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: ಸಾರ್ವಜನಿಕರ ಗಮನಕ್ಕೆ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ

ಪ್ರಸ್ತುತ ನವದೆಹಲಿಯಲ್ಲಿ ಕಾರ್ಮಿಕರ ಕನಿಷ್ಠ ವೇತನ, ದೇಶದಲ್ಲಿ ಹೆಚ್ಚಾಗಿದೆ. ಅಲ್ಲಿ ಕನಿಷ್ಠ ವೇತನ ತಿಂಗಳಿಗೆ 17000 ರೂ.ನಿಂದ 23,000 ಸಾವಿರ ರೂಪಾಯಿವರೆಗೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Thu, 3 April 25

ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ