ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್ಎಂ
ಅತ್ತಿಗುಪ್ಪೆಯ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರು ಶಾಲಾ ಮಕ್ಕಳನ್ನು ಟಾಯ್ಲೆಟ್‌ಗಳು ಮತ್ತು ತಮ್ಮ ವಾಹನವನ್ನು ಸ್ವಚ್ಛಗೊಳಿಸಿರುವಂತಹ ಘಟನೆ ನಡೆದಿದೆ. ಈ ಘಟನೆಯಿಂದ ಪೋಷಕರು ಆಕ್ರೋಶಗೊಂಡಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶಾಲಾ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 02: ಮುಖ್ಯ ಶಿಕ್ಷಕಿ ಮಕ್ಕಳಿಂದ (Students) ಟಾಯ್ಲೆಟ್ ಕ್ಲೀನ್ ಮಾಡಿಸಿರುವಂತಹ ಘಟನೆ ನಗರದ ಅತ್ತಿಗುಪ್ಪೆಯ ಸರ್ಕಾರಿ ಶಾಲೆವೊಂದರಲ್ಲಿ ನಡೆದಿದೆ. ಟಾಯ್ಲೆಟ್ ಮಾತ್ರವಲ್ಲದೇ ತಮ್ಮ ಸ್ಕೂಟಿಯನ್ನು ಹೆಚ್ಎಂ ಕ್ಲೀನ್ ಮಾಡಿಸಿದ್ದಾರೆ. ಮಕ್ಕಳು ಟಾಯ್ಲೆಟ್ ಮತ್ತು ಸ್ಕೂಟಿ ಕ್ಲೀನ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಗರಂ ಆಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 02, 2025 11:32 AM
Latest Videos