ಕುಮಾರಸ್ವಾಮಿ ಟ್ವೀಟ್ಗಳಿಂದ ನಮ್ಮ ಸರ್ಕಾರದ ನೀತಿಗಳು ಬದಲಾಗಲ್ಲ: ಡಿಕೆ ಶಿವಕಮಾರ್
ಸ್ಥಳೀಯ ಸಂಘಸಂಸ್ಥೆಗಳ ನೌಕರರಿಗೆ ಸಂಬಳ ನೀಡಲು ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಕಸದ ಮೇಲೆ ಸೆಸ್ ಅನಿವಾರ್ಯ ಎಂದು ಶಿವಕುಮಾರ್ ಹೇಳುತ್ತಾರೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಮಾತು ಮತ್ತು ಟ್ವೀಟ್ ಸಮರ ಕೆಲದಿನಗಳ ಕಾಲ ನಿಂತು ಹೋಗಿತ್ತು. ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಬಳಿಕ ಕುಮಾರಸ್ವಾಮಿ ಟೀಕಿಸುವುದನ್ನು ನಿಲ್ಲಿಸಿದ್ದು ಸುಳ್ಳಲ್ಲ.
ಬೆಂಗಳೂರು, ಏಪ್ರಿಲ್ 2: ಹಾಲು ಮತ್ತು ಕಸಕ್ಕೆ ತೆರಿಗೆ ವಿಧಿಸುವುದನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸುತ್ತ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕುಮಾರಸ್ವಾಮಿ ಟ್ವೀಟ್ಗಳು ರಾಜ್ಯ ಸರ್ಕಾರದ ಕಾರ್ಯವೈಖರಿಯ ಮೇಲೆ ಯಾವುದೇ ಪರಿಣಾಮ ಬೀರಲ್ಲ, ತಮ್ಮ ಸರ್ಕಾರ ರೈತರ ಪರವಾಗಿದೆ, ಅವರಿಗೆ ಅನುಕೂಲ ಆಗಲಿ ಅಂತ್ಲೇ ಹಾಲಿನ ದರವನ್ನು ಹೆಚ್ಚಿಸಿದ್ದು, ಹಾಸನದಲ್ಲಿ ಕುಮಾರಸ್ವಾಮಿ ಅವರ ಅಣ್ಣನೇ ಹಾಲು ಒಕ್ಕೂಟದ ಅಧ್ಯಕ್ಷ, ಅವರಿಗೆ ₹4 ಕಡಿಮೆ ಮಾಡುವಂತೆ ಯಾಕೆ ಕೇಂದ್ರ ಸಚಿವ ಹೇಳಬಾರದು ಎಂದರು.
ಇದನ್ನೂ ಓದಿ: ಸಂವಿಧಾನ ಬದಲಿಸುವ ಮಾತಾಡಿದ್ದರೆ ರಾಜಕೀಯದಿಂದ ನಿವೃತ್ತನಾಗ್ತೀನಿ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ