ಸಂವಿಧಾನ ಬದಲಿಸುವ ಮಾತಾಡಿದ್ದರೆ ರಾಜಕೀಯದಿಂದ ನಿವೃತ್ತನಾಗ್ತೀನಿ: ಡಿಕೆ ಶಿವಕುಮಾರ್
ಸಂವಿಧಾನ ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮೊದಲಿಂದಲೂ ಮಾಡಿಕೊಂಡು ಬಂದಿದೆ, ಅದನ್ನು ಬದಲಿಸುತ್ತೇವೆಂದು ಹೇಳಿದ್ದು ಬಿಜೆಪಿಯವರು, ಪಕ್ಷದ ದೆಹಲಿ ನಾಯಕರು ಇದರ ಬಗ್ಗೆ ತನಗೆ ಸ್ಪಷ್ಟನೆ ಕೇಳಿದ್ದಾರೆ, ಅವರೂ ಸಹ ಸಂದರ್ಶನವನ್ನು ನೋಡಿ ತಾನು ಹೇಳಿದ್ದನ್ನು ಮನವರಿಕೆ ಮಾಡಿಕೊಂಡಿದ್ದಾರೆ, ತಾನು ದೆಹಲಿಗೆ ಹೋದಾಗ ಬಿಜೆಪಿಯವರು ಕಪ್ಪುಬಾವುಟ ಪ್ರದರ್ಶನ ಮಾಡೋದಿದ್ದರೆ ಮಾಡಲಿ ಎಂದು ಶಿವಕುಮಾರ್ ಹೇಳಿದರು
ಬೆಂಗಳೂರು, 25 ಮಾರ್ಚ್: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂವಿಧಾನ ಬದಲಿಸಬೇಕೆಂದು ಸಂದರ್ಶನದಲ್ಲಿ ಹೇಳಲು ತನಗೇನೂ ತಲೆಕೆಟ್ಟಿಲ್ಲ, ತಾನು ಹೇಳಿದ್ದೇನೆಂದು ಹೇಳುತ್ತಿರುವವರಿಗೆ ತಲೆ ಕೆಟ್ಟಿರಬೇಕು, ಹಾಗೇನಾದರೂ ಹೇಳಿದ್ದರೆ ರಾಜಕೀಯದಿಂದ ನಿವೃತ್ತನಾಗ್ತೀನಿ, ತನ್ನ ಸವಾಲು ಎದುರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ ಎಂದು ಶಿವಕುಮಾರ್ ಹೇಳಿದರು. ತಾನು ಸಂದರ್ಶನದಲ್ಲಿ ಹೇಳಿದ್ದು ಸತ್ಯ ಮಾತ್ರ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಬಿಜೆಪಿಯವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಕುಮಾರ್ ವಿರುದ್ಧ ಆರೋಪ ಮಾಡೋದು ಬಿಟ್ಟು ತನ್ನ ವಿರುದ್ಧ ಮಾತಾಡುತ್ತಿರುವವರ ಮೇಲೆ ಮುನಿರತ್ನ ಕೇಸ್ ಹಾಕಲಿ: ಸೋಮಶೇಖರ್