ಮೈಸೂರು: ಶಿವಕುಮಾರ್ ಪ್ರತಿಕೃತಿಯನ್ನು ಸುಡಲು ಯತ್ನಿಸಿದ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದ ಪೊಲೀಸರು
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೇವಲ ಒಬ್ಬ ಕಾರ್ಯಕರ್ತ ಮಾತ್ರ ಪೊಲೀಸರ ಜೊತೆ ವಾಗ್ವಾದಕ್ಕಿಳಿದು ಪ್ರತಿಕೃತಿಯನ್ನು ಹಿಡಿದು ಓಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಗೆ ಪ್ರತಿಭಟನೆ ಮಾಡುವ ಅವಕಾಶವಿದೆ, ತನ್ನ ಹಕ್ಕನ್ನು ಯಾಕೆ ಕಸಿದುಕೊಳ್ಳಲಾಗುತ್ತಿದೆ ಅಂತ ಜೋರಾಗಿ ಕೂಗುತ್ತಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾರೆ.
ಮೈಸೂರು, ಮಾರ್ಚ್ 25: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಡ್ಯದ ಜನರನ್ನು ಛತ್ರಿ ಎಂದು ಹೇಳಿದ್ದು ರಾಜ್ಯದ ಹಲವಾರು ಜಿಲ್ಲೆಗಳ ಜನರಲ್ಲಿ ತಲ್ಲಣ ಮೂಡಿಸಿದೆ. ಬಿಜೆಪಿ ಮುಖಂಡರು (BJP leaders) ಮತ್ತು ಕಾರ್ಯಕರ್ತರು ಶಿವಕುಮಾರ್ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮೈಸೂರಲ್ಲಿ ಶಿವಕುಮಾರ್ ಪ್ರತಿಕೃತಿಯನ್ನು ದಹಿಸಲು ಮುಂದಾದಾಗ ಪೊಲಿಸರೊಂದಿಗೆ ಮಾತಿನ ಚಕಮಕಿ ನಡೆಯುತ್ತದೆ. ಪೊಲೀಸರು ಪ್ರತಿಕೃತಿಯನ್ನು ಕಸಿಯುವಲ್ಲಿ ಸಫಲರಾಗುತ್ತಾರೆ ಮತ್ತು ಅದನ್ನು ಅಲ್ಲಿಂದ ದೂರ ಒಯ್ಯುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಣ್ಣಾಮಲೈ ಪ್ರತಿಭಟನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯಮಯವಾಗಿ ಹೇಳಿದ್ದೇನು!?
Latest Videos