ಡಿಕೆ ಶಿವಕುಮಾರ್ ಛತ್ರಿ ಹೇಳಿಕೆ ವಿರುದ್ಧ ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಛತ್ರಿ ಹಿಡಿದು ಪ್ರತಿಭಟನೆ!
ಮಾರ್ಚ್ 17ರಂದು ಬೆಂಗಳೂರಲ್ಲಿ ನಡೆದ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಛತ್ರಿಗಳೆಂಬ ಪದ ಬಳಸಿದ್ದರು. ಅದಾದ ಬಳಿಕ ಶಿವಕುಮಾರ್ ವಿರುದ್ಧ ಪ್ರತಿಭಟನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಶಿವಕುಮಾರ್ ಮಂಡ್ಯ ಜನರ ಕ್ಷಮೆ ಯಾಚಿಸಲೇಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಮಂಡ್ಯ, ಮಾರ್ಚ್ 25: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಡ್ಯದ ಜನ ಛತ್ರಿಗಳೆಂದು ಹೇಳಿರುವುದು ಜಿಲ್ಲೆಯ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ನಗರದಲ್ಲಿಂದು ರೈತ, ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಪದಾಧಿಕಾರಿಗಳು ಶಿವಕುಮಾರ್ ವಿರುದ್ಧ ಛತ್ರಿಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದರು. ದುರಹಂಕಾರಿ ಶಿವಕುಮಾರ್ಗೆ ಧಿಕ್ಕಾರ, ಮಂಡ್ಯದ ಜನರ ಬಗ್ಗೆ ಹಗುರವಾಗಿ ಮಾತಾಡಿರುವ ಶಿವಕುಮಾರ್ ಧಿಕ್ಕಾರ, ತಮ್ಮ ಮಾತುಗಳಿಗೆ ಶಿವಕುಮಾರ್ ಕ್ಷಮೆ ಯಾಚಿಸಬೇಕು ಇಲ್ಲವೇ ರಾಜೀನಾಮೆ ಸಲ್ಲಿಸಬೇಕು ಎಂದು ಪ್ರದರ್ಶನಕಾರರು ಘೋಷಣೆ ಕೂಗಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯ್ತು ಡಿಕೆ ಶಿವಕುಮಾರ್ ಈ ಹೇಳಿಕೆ