ಹನಿ ಟ್ರ್ಯಾಪ್ ಕೇಸ್: ದೂರು ಯಾಕೆ ನೀಡಿಲ್ಲವೆಂದು ಮುಖ್ಯಮಂತ್ರಿ ಕೇಳಿದ್ದಾರೆ, ಇವತ್ತು ನೀಡುತ್ತಿದ್ದೇನೆ: ಕೆಎನ್ ರಾಜಣ್ಣ
ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರ ಜೊತೆ ಮಾತುತೆ ನಡೆಸಿದ್ದರ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಜಣ್ಣ, ಅವರಿವರು ದೆಹಲಿಗೆ ಹೋಗಿದ್ದು ಅಲ್ಲಿಂದ ವಾಪಸ್ಸು ಬಂದಿದ್ದರ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ, ತಮ್ಮ ತಮ್ಮ ಕೆಲಸಗಳ ನಿಮಿತ್ತ ರಾಜ್ಯದ ನಾಯಕರು ದೆಹಲಿಗೆ ಹೋಗುತ್ತಾರೆ ಎಂದು ಹೇಳಿದರು.
ತುಮಕೂರು, ಮಾರ್ಚ್ 25: ತನ್ನ ವಿರುದ್ಧ ಹನಿ ಟ್ರ್ಯಾಪ್ ನಡೆಸುವ ಸಂಚು ನಡೆದಿದೆ ಅಂತ ಸದನದಲ್ಲಿ ಹೇಳಿರುವ ಸಹಕಾರ ಸಚಿವ ಕೆಎನ್ ರಾಜಣ್ಣ, ಇದುವರೆಗೆ ದೂರು ಸಲ್ಲಿಸಿಲ್ಲ. ಮುಖ್ಯಮಂತ್ರಿಯವರನ್ನು ಕೇಳಿ ಮುಂದುವರಿಯುವುದಾಗಿ ಅವರು ಹೇಳುತ್ತಿದ್ದರು. ಇವತ್ತು ತುಮಕೂರುನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ರಾಜಣ್ಣ ತಾನು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು ಮತ್ತು ಅವರು ಇನ್ನೂ ಯಾಕೆ ದೂರು ಸಲ್ಲಿಸಿಲ್ಲ ಎಂದು ಕೇಳಿದ ಬಗ್ಗೆ ವಿವರಣೆ ನೀಡಿದರು. ಇವತ್ತು ಅವರು ತಮ್ಮ ವಿರುದ್ಧ ಹನಿ ಟ್ರ್ಯಾಪ್ ನಡೆಸುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸುವರಂತೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಗೊತ್ತಿದೆ, ಮುಖ್ಯಮಂತ್ರಿಯವರಿಗೆ ಹೇಳುತ್ತೇನೆ: ರಾಜೇಂದ್ರ, ರಾಜಣ್ಣ ಮಗ