ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ನಟಿ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾದಿಂದ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಈಗ ಅವರಿಗೆ ಹೊಸ ಸಿನಿಮಾ ಅವಕಾಶ ಸಿಕ್ಕಿದೆ. ನೀನಾಸಂ ಸತೀಶ್ ಅಭಿನಯದ ‘ರೈಸ್ ಆಫ್ ಅಶೋಕ’ ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರದ ಶೂಟ್ ಬಗ್ಗೆ ಅವರು ಮಾತನಾಡಿದ್ದಾರೆ. ಅವರು ಹೇಳಿದ ಬಗ್ಗೆ ಇಲ್ಲಿದೆ ವಿವರ.
ಚನ್ನಪಟ್ಟಣದಲ್ಲಿ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ (Raise Of Ashoka Movie) ಶೂಟ್ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ನೀನಾಸಂ ಸತೀಶ್ ಹೀರೋ. ಸಿನಿಮಾ ಬಗ್ಗೆ ಮಾತನಾಡಿರುವ ನಾಯಕಿ ಸಪ್ತಮಿ ಗೌಡ, ‘ನನ್ನದು ಹೂ ಮಾರುವ ಹಳ್ಳಿ ಹುಡುಗಿಯ ಪಾತ್ರ. ಊರಿನ ಸಮುದಾಯದಲ್ಲಿ ನಡೆಯುವ ಕಥೆ. ನಾನು ನನ್ನ ವೃತ್ತಿ ಜೀವನದಲ್ಲಿ ಹಳ್ಳಿ ಹುಡುಗಿಯ ಪಾತ್ರಗಳನ್ನೇ ಜಾಸ್ತಿ ಮಾಡಿದ್ದೇನೆ. ನನಗೆ ಗ್ಲಾಮರ್ ಪಾತ್ರ ಹೆಚ್ಚು ಸಿಕ್ಕಿಲ್ಲ. ಹಳ್ಳಿ ಕಡೆಗಳಲ್ಲಿ ಶೂಟ್ ಮಾಡುತ್ತಿದ್ದೇವೆ. ಹಳ್ಳಿ ವೈಬ್ ಬೇರೆ. ನಾನು ಹಬ್ಬಗಳನ್ನು ಹಳ್ಳಿಗಳಲ್ಲಿ ಮಾಡುತ್ತೇನೆ. ಮತ್ತೆ ಆ ರೀತಿ ಬದುಕೋಕೆ ಆಗಿದೆ ಅನ್ನೋದು ಖುಷಿಯ ವಿಚಾರ’ ಎಂದಿದ್ದಾರೆ ಸಪ್ತಮಿ ಗೌಡ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 25, 2025 02:57 PM