ಬೆಂಗಳೂರು ರಸ್ತೆಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ವತಿಯಿಂದ ಸಬ್ಸಿಡಿ ದರದಲ್ಲಿ ತಳ್ಳುಗಾಡಿಗಳು: ಶಿವಕುಮಾರ್
ಏಪ್ರಿಲ್ 30ರೊಳಗೆ ಹೆಸರು ನೋಂದಾಯಿಸಿಕೊಂಡ ವ್ಯಾಪಾರಿಗೆ ಗಾಡಿ ಸಿಗುತ್ತದೆ, ಇದುವರೆಗೆ 27,565 ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಮತ್ತು 3,778 ಜನ ತಳ್ಳುಗಾಡಿ ಬೇಕೆದು ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 30 ರ ನಂತರ ಯಾರೂ ರಸ್ತೆಬದಿ ವ್ಯಾಪಾರ ಮಾಡುವಂತಿಲ್ಲ, ಹಾಗಾಗಿ ಸ್ಟ್ರೀಟ್ ವೆಂಡರ್ಗಳು ಅದರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಮಾರ್ಚ್ 24: ನಗರದ ರಸ್ತೆಬದಿ ವ್ಯಾಪಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ (Bengaluru Development Minister) ಡಿಕೆ ಶಿವಕುಮಾರ್ ಒಂದು ಸಿಹಿಸುದ್ದಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮಾತಾಡಿದ ಅವರು, ಇನ್ನು ಮುಂದೆ ಯಾರೂ ರಸ್ತೆ ಬದಿ ವ್ಯಾಪಾರ ಮಾಡುವಂತಿಲ್ಲ, ಅವರು ಬಿಬಿಎಂಪಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ತಳ್ಳುವ ಗಾಡಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು, ಮೋಟಾರರ ವಾಹನಗಳು ಸೇರಿದಂತೆ 4-5 ಬಗೆಯ ವಾಹನಗಳನ್ನು ವ್ಯಾಪಾರಿಗಳಿಗೆ ನೀಡುವ ನಿರ್ಧಾರ ಮಾಡಲಾಗಿದೆ, ವ್ಯಾಪಾರಿಗಳು ತಮಗಿಷ್ಟ ಬರುವ ಗಾಡಿಯನ್ನು ಆರಿಸಿಕೊಳ್ಳಬಹುದು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಣ್ಣಾಮಲೈ ಪ್ರತಿಭಟನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯಮಯವಾಗಿ ಹೇಳಿದ್ದೇನು!?