ಹನಿ ಟ್ರ್ಯಾಪ್ ಪ್ರಕರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ಏಜೆಂಟ್ನಂತೆ ವರ್ತಿಸಿದ್ದಾರೆ: ರೇಣುಕಾಚಾರ್ಯ
ತಾನೊಬ್ಬ ಹಿಂದೂತ್ವವಾದಿ ಅಂತ ಹೇಳಿಕೊಳ್ಳುವ ಬಸನಗೌಡ ಯತ್ನಾಳ್ ಅಸಲಿಗೆ ನಕಲಿ ಹಿಂದುತ್ವವಾದಿ, ಇದುವರೆಗೆ ಅವರು ಸರ್ಕಾರದ ವೈಫಲ್ಯಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಮಾತಾಡಿಲ್ಲ, ಎಂದು ರೇಣುಕಾಚಾರ್ಯ ಹೇಳಿದರು. ಚೀಟಿಯ ವಿಷಯದಲ್ಲಿ ಅವರ ಸರ್ಕಾರದ ಏಜೆಂಟ್ನಂತೆ ವರ್ತಿಸಿದ್ದು ಸರಿಯಲ್ಲ ಎಂದು ಅವರು ಮಾಜಿ ಶಾಸಕ ಹೇಳಿದರು.
ಶಿವಮೊಗ್ಗ, 24 ಮಾರ್ಚ್: ಒಂದಷ್ಟು ದಿನ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ ಅವರು ನಮ್ಮ ನಾಯಕ ಎನ್ನಲಾರಂಭಿಸಿದ್ದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮೊದಲಿನ ಚಾಳಿಗೆ ವಾಪಸ್ಸಾಗಿದ್ದಾರೆ. ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯತ್ನಾಳ್ ಸದನದಲ್ಲಿ ಬಿಜೆಪಿ ಶಾಸಕನಂತೆ ವರ್ತಿಸದೆ, ತನಗೊಂದು ಚೀಟಿ ಕಳಿಸಿದ್ದರೂ ಪ್ರಭಾವಿ ಸಚಿವರೊಬ್ಬರ ಆಮಿಷಕ್ಕೆ ಒಳಗಾಗಿ ಆಡಳಿತ ಪಕ್ಷದ ಶಾಸಕನಂತೆ ವರ್ತಿಸಿದ್ದಾರೆ, ಇದು ಮಾಧ್ಯಮಗಳಲೆಲ್ಲ ಬಿತ್ತರವಾಗಿದೆ, ಅವರು ಚೀಟಿಯಲ್ಲಿ ಬರೆದಿರುವುದನ್ನು ಯಾಕೆ ಸದನದಲ್ಲಿ ಪ್ರಸ್ತಾಪ ಮಾಡಲಿಲ್ಲ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚೀಟಿಯಲ್ಲಿ ಬರೆದಿದ್ದುದನ್ನು ಹೇಳಿದರೆ ಎರಡೂ ಪಕ್ಷಗಳ ಮಹಾನ್ ನಾಯಕರು ಮನೆಗೆ ಹೋಗುತ್ತಾರೆ: ಯತ್ನಾಳ್