ಕುನಾಲ್ ಕಮ್ರಾ ಅವರ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್ ಧ್ವಂಸ ಕಾರ್ಯಾಚರಣೆ
ಬಿಎಂಸಿ ಅಧಿಕಾರಿಗಳು ಯುನಿಕಾಂಟಿನೆಂಟಲ್ ಸ್ಟುಡಿಯೋವನ್ನು ಕೆಡವಲು ಸುತ್ತಿಗೆಗಳೊಂದಿಗೆ ಆಗಮಿಸಿದ್ದಾರೆ. ಇದೇ ಸ್ಟುಡಿಯೋದಲ್ಲಿ ಕುನಾಲ್ ಕಮ್ರಾ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬಗ್ಗೆ ತಮಾಷೆ ಮಾಡಿದರು. ಹಂತ ಹಂತವಾಗಿ ಬಿಜೆಪಿ ಮಹಾರಾಷ್ಟ್ರದ ಸಾಮರಸ್ಯ ಮತ್ತು ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಮತ್ತು ಮಹಾರಾಷ್ಟ್ರೀಯರ ಎಲ್ಲಾ ವ್ಯವಹಾರಗಳನ್ನು ಗುಜರಾತ್‌ಗೆ ಸ್ಥಳಾಂತರಿಸುತ್ತಿದೆ ಎಂದಿದ್ದರು.
ಮುಂಬೈ, ಮಾರ್ಚ್ 24: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈನ ಖಾರ್ ಪ್ರದೇಶದ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಅಣಕಿಸುವ ವೀಡಿಯೊವನ್ನು ಚಿತ್ರೀಕರಿಸಿದ್ದರು. ಇದು ಭಾರಿ ವಿವಾದವನ್ನು ಹುಟ್ಟುಹಾಕಿದೆ. ಬಿಎಂಸಿ ತಂಡವು ಸುತ್ತಿಗೆಗಳೊಂದಿಗೆ ಸ್ಟುಡಿಯೋವನ್ನು ಪ್ರವೇಶಿಸಿತು ಮತ್ತು ಪ್ರಸ್ತುತ ಒಳಗೆ ಧ್ವಂಸ ಕಾರ್ಯಾಚರಣೆಯನ್ನು ನಡೆಸಿದೆ. ಅಧಿಕಾರಿಗಳ ಪ್ರಕಾರ, ಈ ಸ್ಟುಡಿಯೋದ ಆವರಣವು ಎರಡು ಹೋಟೆಲ್‌ಗಳ ನಡುವಿನ ಅತಿಕ್ರಮಣ ಪ್ರದೇಶದಲ್ಲಿದೆ.
ಕುನಾಲ್ ಕಮ್ರಾ ಏನು ಹೇಳಿದ್ದರು?:
ಮುಂಬೈನ ಖಾರ್ ಪ್ರದೇಶದ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಸ್ಟುಡಿಯೋದಲ್ಲಿ ತಮ್ಮ ಪ್ರದರ್ಶನದ ಸಮಯದಲ್ಲಿ, ಕುನಾಲ್ ಕಮ್ರಾ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಶಿಂಧೆ ಅವರನ್ನು “ದೇಶದ್ರೋಹಿ” ಎಂದು ಕರೆದಿದ್ದರು. ಏಕನಾಥ್ ಶಿಂಧೆ ಉದ್ಧವ್ ಠಾಕ್ರೆ ವಿರುದ್ಧ 2022ರಲ್ಲಿ ನಡೆಸಿದ ರಾಜಕೀಯ ಹೈಡ್ರಾಮಾವನ್ನು ವಿವರಿಸಲು ‘ದಿಲ್ ತೋ ಪಾಗಲ್ ಹೈ’ ಚಿತ್ರದ ಹಿಂದಿ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಕಮ್ರಾ ಬಳಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ