ಮೇಕೆದಾಟು ಯೋಜನೆಗೆ ಕರ್ನಾಟಕವು ತಮಿಳುನಾಡನ್ನು ಒಪ್ಪಿಸಿದರೆ ಕೇಂದ್ರ ಕಣ್ಣುಮುಚ್ಚಿ ಅನುಮತಿ ನೀಡುತ್ತದೆ: ರವಿ
ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಕಾಂಗ್ರೆಸ್ ಜೊತೆ ದೋಸ್ತಿ ಇದೆ, ಬಿಜೆಪಿಯೊಂದಿಗಲ್ಲ, ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ತಮಿಳುನಾಡುವನ್ನು ಒಪ್ಪಿಸಿದರೆ, ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಲು ಯಾವ ಅಭ್ಯಂತರವೂ ಇರೋದಿಲ್ಲ, ಅಲ್ಲಿ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಕಾರಣರಾದ ಕಾಂಗ್ರೆಸ್ ನಾಯಕರು ಈಗ್ಯಾಕೆ ಸುಮ್ಮನಾಗಿದ್ದಾರೆ ಎಂದು ರವಿ ಪ್ರಶ್ನಿಸಿದರು.
ಬೆಂಗಳೂರು, ಮಾರ್ಚ್ 25: ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ಅವಕಾಶ ನೀಡದು ಎಂದು ಅಲ್ಲಿನ ಮಂತ್ರಿಯೊಬ್ಬರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸಿಟಿ ರವಿ, ಶಿವಕುಮಾರ್ (DK Shivakumar) ಹೋಗಿದ್ದು ನೋಡಿದರೆ ಬೆಂಗಳೂರು ನಗರ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುತ್ತಾರೆ ಎಂದು ಭಾವಿಸಿದ್ದೆ, ಆದರೆ ಅದರ ವ್ಯತಿರಿಕ್ತ ಸನ್ನಿವೇಶ ಸೃಷ್ಟಿಯಾಗಿದೆ ಎಂದರು. ಕರ್ನಾಟಕ-ತಮಿಳುನಾಡು ನಡುವಿನ ಜಗಳ ರಾಜ್ಯಗಳೇ ಬಗೆಹರಿಸಿಕೊಳ್ಳಬೇಕು,ಕೇಂದ್ರ ಸರ್ಕಾರವಲ್ಲ ಎಂದು ರವಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಬೇಗ ನಿಲುವು ಪ್ರಕಟಿಸಲಿ ಅಂತ ಮನವಿ ಮಾಡಲಾಗಿದೆ: ಶಿವಕುಮಾರ್