ಬೆಂಗಳೂರು: 18 ಶಾಸಕರನ್ನು ಸ್ಪೀಕರ್ ಖಾದರ್ ಸಸ್ಪೆಂಡ್ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ನಾಯಕರ ಪ್ರತಿಭಟನೆ
ಅಧಿವೇಶನ ಇಲ್ಲದ ಸಮಯದಲ್ಲಿ ಖಾದರ್ ಅವರು ತಮ್ಮ ಬಂಧುಗಳನ್ನು, ಸಂಬಂಧಿಕರನ್ನು ಮತ್ತು ಮೌಲ್ವಿಗಳನ್ನು ಸದನಕ್ಕೆ ಕರೆತಂದು ಸ್ಪೀಕರ್ ಪೀಠದ ಮುಂದೆ, ಹಿಂದೆ ಸುತ್ತಮುತ್ತ ಕೂರಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ, ಅದು ಕಾನೂನುಸಮ್ಮತ ಅಂತ ಅಂದುಕೊಳ್ಳೋದಾದರೆ, ಜನರಿಂದ ಆಯ್ಕೆಯಾಗಿ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುವ ಶಾಸಕರು ಪೀಠದ ಬಳಿ ಹೋದರೆ ಹೇಗೆ ಕಾನೂನುಬಾಹಿರ ಎಂದು ಅಶೋಕ ಪ್ರಶ್ನಿಸಿದರು.
ಬೆಂಗಳೂರು, ಏಪ್ರಿಲ್ 2: ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಇಂದು ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಬಳಿ ನಿಂತು ಅಧಿವೇಶನ ನಡೆಯುತ್ತಿದ್ದಾಗ 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿರುವ ಸ್ಪೀಕರ್ ಯುಟಿ ಖಾದರ್ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಪೀಕರ್ ಹುದ್ದೆ ಧರ್ಮಾತೀತ ಮತ್ತು ಪಕ್ಷಾತೀತವಾದದ್ದು ಆದರೆ ಖಾದರ್ ಸರ್ಕಾರದ ಏಜೆಂಟ್ ನಂತೆ ವರ್ತಿಸಿದ್ದಾರೆ, ಮುಸ್ಲಿಂ ಮೀಸಲಾತಿ ವಿಧೇಯಕವನ್ನು ಪಾಸು ಮಾಡಬೇಕಿತ್ತು, ಅದೇ ಕಾರಣಕ್ಕೆ ಅವರು ಸಂವಿಧಾನಬಾಹಿರವಾಗಿ ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ವಿರೋಧ ಪಕ್ಷ ದ ನಾಯಕ ಆರ್ ಅಶೋಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos