ಬಿಜೆಪಿ ನಾಯಕರು ಯಾವುದೇ ಹೋರಾಟ, ಪ್ರತಿಭಟನೆಗೆ ಜೆಡಿಎಸ್ ನಾಯಕರನ್ನು ಕರೆಯುತ್ತಿಲ್ಲ: ಸುರೇಶ್ ಬಾಬು
ಹಿಂದೆಯೂ ಇದೇ ರೀತಿ ಜೆಡಿಎಸ್ ಪಕ್ಷವನ್ನು ಕಡೆಗಣಿಸಿದಾಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅದರೆ ಬಿಜೆಪಿ ವರಿಷ್ಠರು ಅವರ ಮನವೊಲಿಸಿದ್ದರು. ಬಿಜೆಪಿ ನಡೆಸುವ ಅಹೋರಾತ್ರಿ ಧರಣಿ ಮತ್ತು ಏಪ್ರಿಲ್ 7 ರಂದು ರಾಜ್ಯದಾದ್ಯಂತ ನಡೆಯುವ ಪ್ರತಿಭಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಹೇಳಿದ ಸುರೇಶ್, ತಮ್ಮ ಪಕ್ಷವನ್ನು ಹೀಗೆ ಕಡೆಗಣಿಸಿದರೆ ಬಿಜೆಪಿಗೆ ಕಷ್ಟವಿದೆ ಎಂದರು.
ಬೆಂಗಳೂರು,ಮ ಏಪ್ರಿಲ್ 2: ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ (JDS Legislature Party Leader) ಸುರೇಶ್ ಬಾಬು ರಾಜ್ಯ ಬಿಜೆಪಿ ನಾಯಕರ ಧೋರಣೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಸಮನ್ವಯತೆಯ ಕೊರತೆ ಖಂಡಿತ ಎದುರಾಗಿದೆ, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ನಡೆಸುವ ಹೋರಾಟಗಳಿಗೆಲ್ಲ ಜೆಡಿಎಸ್ ಪಕ್ಷವನ್ನು ಕಡೆಗಣಿಸುತ್ತಿದ್ದಾರೆ, ತಾವು ರಾಷ್ಟ್ರೀಯ ಪಕ್ಷವೆಂಬ ದಾರ್ಷ್ಟ್ಯತೆ ಅವರಿಗಿರಬಹುದು, ಎಂದು ಸುರೇಶ್ ಬಾಬು ಹೇಳಿದರು. ಜೆಡಿಎಸ್ ಪಕ್ಷವನ್ನು ಎನ್ಡಿಎ ಭಾಗವೆಂದು ಪರಿಗಣಿಸಲಾಗಿತ್ತು, ಅದರೆ ವಸ್ತು ಸ್ಥಿತಿ ಬೇರೆಯೇ ಇದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇವೇಗೌಡರ ಬಗ್ಗೆ ಕಾಮೆಂಟ್ ಮಾಡುವ ಯಾವುದೇ ನೈತಿಕತೆ ಯೋಗೇಶ್ವರ್ಗಿಲ್ಲ: ಸುರೇಶ್ ಬಾಬು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 02, 2025 01:41 PM