ಪೊಲೀಸ್ ಧ್ವಜ ದಿನಾಚರಣೆ: ದಕ್ಷತೆ ಮೆರೆದ ಪೊಲೀಸ್ ಅಧಿಕಾರಿಗಳಿಗೆ ಚಿನ್ನದ ಪದಕ ನೀಡಿ ಸತ್ಕರಿಸಿದ ಸಿದ್ದರಾಮಯ್ಯ
ಪೊಲೀಸ್ ಇಲಾಖೆಯ ಉದ್ಯೋಗಿಗಳು ಮಾಡೋದು ಥ್ಯಾಂಕ್ಲೆಸ್ ಜಾಬ್ ಅಂತ ಹೇಳುತ್ತಾರೆ. ಶಾಂತಿ ಸುವ್ಯವಸ್ಥೆ ಕಾಪಾಡುತ್ತ ಜನರ ಆಸ್ತಿ ಪಾಸ್ತಿಗಳ ರಕ್ಷಣೆ ಮಾಡುವ ಪೊಲೀಸರಿಗೆ ಸರಿಯಾದ ರಿಕಗ್ನಿಷನ್ ಸಿಗುತ್ತಿಲ್ಲ ಅಂತ ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಪೊಲೀಸರು ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕಾರಕ್ಕೆ ಆಯ್ಕೆಯಾಗೋದು ಸಂತೋಷದ ಸಂಗತಿ. ಸಿದ್ದರಾಮಯ್ಯ ಪೊಲೀಸರ ಸೇವೆಯನ್ನು ಕೊಂಡಾಡಿದರು.
ಬೆಂಗಳೂರು, ಏಪ್ರಿಲ್ 2: ಪೊಲೀಸ್ ಧ್ವಜ ದಿನಾಚರಣೆಯಾಗಿರುವ ಇಂದು ದಕ್ಷತೆ, ನಿಷ್ಠೆ ಮತ್ತು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಪುರಸ್ಕಾರಕ್ಕೆ ಆಯ್ಕೆಯಾದ ಪೊಲೀಸ್ ಅಧಿಕಾರಿಗಳಿಗೆ ಪದಕ ನೀಡಿ ಗೌರವಿಸಿದರು. ಅಧಿಕಾರಿಗಳು ಎಂದಿನ ಪೊಲೀಸ್ ಶಿಸ್ತಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೊಲೀಸ್ ಸೆಲ್ಯೂಟ್ ಗೌರವ ಸಲ್ಲಿಸಿ ಎದೆಯ ಮೇಲೆ ಪದಕ ತೊಡಿಸಿಕೊಳ್ಳುವುದು ಮನಸ್ಸಿಗೆ ಖುಷಿ ನೀಡುವ ದೃಶ್ಯ.
ಇದನ್ನೂ ಓದಿ: ಕೃಷ್ಣಾ, ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸಿಎಂಗೆ ಸಿದ್ದರಾಮಯ್ಯ ಪತ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 02, 2025 11:42 AM