ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಚಾಮರಾಜನಗರದ ಪೊಲೀಸ್ ಹೆಡ್ ಕಾನ್ಸ್​ಟೇಬಲ್​

ಚಾಮರಾಜನಗರ ಜಿಲ್ಲೆಯಾಗಿ 23 ವರ್ಷ ಕಳೆದರೂ ಯಾವುದೇ ಹೆಡ್ ಕಾನ್ಸ್​ಟೇಬಲ್ ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡಿರಲಿಲ್ಲ. ತನ್ನ 23 ವರ್ಷಗಳ ತನ್ನ ಸುದೀರ್ಘ ಅವಧಿಯಲ್ಲಿ 2020ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿವನಂಜಪ್ಪ ಭಾಜನರಾಗಿದ್ದಾರೆ.

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಚಾಮರಾಜನಗರದ ಪೊಲೀಸ್ ಹೆಡ್ ಕಾನ್ಸ್​ಟೇಬಲ್​
ಪೊಲೀಸ್ ಹೆಡ್ ಕಾನ್ಸ್​ಟೇಬಲ್ ಶಿವನಂಜಪ್ಪ
Follow us
sandhya thejappa
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 27, 2021 | 11:36 PM

ಚಾಮರಾಜನಗರ: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪೊಲೀಸ್ ಹೆಡ್ ಕಾನ್ಸ್​ಟೇಬಲ್ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಗುಪ್ತ ಮಾಹಿತಿದಾರನಾಗಿ ಕಾರ್ಯನಿರ್ವಹಿಸುತ್ತಿರುವ ಶಿವನಂಜಪ್ಪ ಚಿನ್ನದ ಪದಕಕ್ಕೆ ಭಾಜನರಾದ ಹೆಡ್ ಕಾನ್ಸ್​ಟೇಬಲ್ ಆಗಿದ್ದಾರೆ.

ಚಾಮರಾಜನಗರ ಜಿಲ್ಲೆಯಾಗಿ 23 ವರ್ಷ ಕಳೆದರೂ ಯಾವುದೇ ಹೆಡ್ ಕಾನ್ಸ್​ಟೇಬಲ್ ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡಿರಲಿಲ್ಲ. ತನ್ನ 23 ವರ್ಷಗಳ ತನ್ನ ಸುದೀರ್ಘ ಅವಧಿಯಲ್ಲಿ 2020ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿವನಂಜಪ್ಪ ಭಾಜನರಾಗಿದ್ದಾರೆ. ಹಾಲಿ ಗುಂಡ್ಲುಪೇಟೆ ಪಟ್ಟಣದ ಎಸ್​ಬಿಯಾಗಿ ಶಿವನಂಜಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. 1997 ಮೇ 1 ರಲ್ಲಿ ಪೊಲೀಸ್ ಇಲಾಖೆ ಸೇರಿದ ಶಿವನಂಜಪ್ಪ ಚಾಮರಾಜನಗರದ ರಾಮ ಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಕಾರ್ಯಾರಂಭ ಮಾಡಿದರು. ಇದಾದ ಬಳಿಕ ಯಳಂದೂರು, ತೆರಕಣಾಂಬಿ, ಬೇಗೂರು, ಗುಂಡ್ಲುಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಸಾರ್ವಜನಿಕರಿಂದ ಪ್ರಶಂಸೆ ಜೊತೆಗೆ ಉತ್ತಮ ಸೇವೆಗಾಗಿ ಅಧಿಕಾರಿಗಳಿಂದ ಪ್ರಶಂಸೆ ಪಡೆದಿದ್ದಾರೆ.

ಬೇಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ 2014ರಲ್ಲಿ ನಂಜನಗೂಡು ಹಾಗೂ ಚಾಮರಾಜನಗರದಲ್ಲಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಮಾಲು ಸಮೇತ ಬಂಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರ ಮೆಚ್ಚುಗೆ ಪಡೆದು ಜನರ ಸೇವೆಗಾಗಿ ಅಭಿನಂದನಾರ್ಹರಾಗಿದ್ದರು. ಕರ್ನಾಟಕದಲ್ಲಿ ನಿಷೇಧಿಸಲ್ಪಟ್ಟಿರುವ ಅಕ್ರಮ ಲಾಟರಿ ಮಾರಾಟ ಮಾಡುತ್ತಿದ್ದ ಸುಮಾರು 18 ಪ್ರಕರಣಗಳನ್ನು ಏಕಾಂಗಿಯಾಗಿ ಪತ್ತೆ ಮಾಡಿ ಮಾರಾಟಗಾರರನ್ನು ಬಂಧಿಸಿದ್ದರು.

2020 ರಲ್ಲಿ ಗುಂಡ್ಲುಪೇಟೆಯಲ್ಲಿ ನಡೆದ ಮೂರು ಕೊಲೆಗಳ ಪ್ರಕರಣ ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಕಾಲಕ್ಕೆ ಘಟನಾ ಸ್ಥಳಕ್ಕೆ ಧಾವಿಸಿ ಶಿವನಂಜಪ್ಪ ಇನ್ನೂ ಆಗಬೇಕಿದ್ದ ಕೊಲೆಗಳನ್ನು ತಡೆಯುವಲ್ಲಿ ಪ್ರಮುಖ ರುವಾರಿಯಾಗಿದ್ದರು. ಕೊಲೆ ಮಾಡಿದವರನ್ನು ತಡೆಯಲು ಹೋದ ಶಿವನಂಜಪ್ಪನಿಗೆ ಸಣ್ಣ ಪುಟ್ಟ ಗಾಯಗಳಾಗುವುದರ ಜೊತೆಗೆ ಇಡೀ ವಸ್ತ್ರವೇ ರಕ್ತದ ಮುದ್ದೆಯಾಗಿದ್ದವು. 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಸಲ್ಲಿಸಿದ ಸೇವೆ ಮತ್ತು ತ್ರಿವಳಿ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಕಾರ್ಯ ಸಾಧನೆಯನ್ನು ಪ್ರಶಂಸೆ ಮಾಡಿದ ಪೊಲೀಸ್ ಇಲಾಖೆ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿತ್ತು. ಇಷ್ಟೇ ಮಾತ್ರವಲ್ಲದೆ ಜೂಜಾಟ, ಅನೇಕ ಕಳ್ಳತನ ಪ್ರಕರಣ ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಶಿವನಂಜಪ್ಪಗೆ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಏಪ್ರಿಲ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಿವನಂಜಪ್ಪಗೆ ಮುಖ್ಯಮಂತ್ರಿಗಳು ಚಿನ್ನದ ಪದಕವನ್ನು ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ

ಮೃತರಾಗಿ 10ವರ್ಷಗಳೇ ಕಳೆದಿದ್ದರೂ ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳ ಚುನಾವಣಾ ಐಕಾನ್​ ಆಗಿದ್ದಾರೆ ಎಲ್​ಟಿಟಿಇ ಸಂಸ್ಥಾಪಕ ಪ್ರಭಾಕರನ್​

ಕ್ರಿಕೆಟ್​ ದೇವರಿಗೆ ಕೊರೊನಾ ಸೋಂಕು.. ಸಚಿನ್​ಗೂ ಮುನ್ನ ಈ ಕ್ರಿಕೆಟಿಗ ಕೊರೊನಾದಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯ್ತು?

Published On - 4:55 pm, Sat, 27 March 21