Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಸುಧಾಕರ್

ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ಮುಂದುವರೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರರನ್ನು ಬದಲಾವಣೆ ಮಾಡಬೇಕೆಂದು ಒಂದು ಬಣ ಪಟ್ಟು ಹಿಡಿದಿದೆ. ಇದರ ಮಧ್ಯ ಇದೀಗ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕದಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, ಸಂಸದ ಡಾ. ಕೆ. ಸುಧಾಕರ್ ಅವರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಬಿ.ವೈ. ವಿಜಯೇಂದ್ರ ಅವರ ಧೋರಣೆ ಸುಧಾಕರ್ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ.

ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಗುಡುಗಿದ ಸುಧಾಕರ್
ಡಾ ಕೆ ಸುಧಾಕರ್ - ವಿಜಯೇಂದ್ರ
Follow us
ರಮೇಶ್ ಬಿ. ಜವಳಗೇರಾ
|

Updated on:Jan 29, 2025 | 5:16 PM

ಬೆಂಗಳೂರು, (ಜನವರಿ 29): ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಒಬ್ಬರಾದ ಮೆಲೆ ಒಬ್ಬರು ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಾಮಧಾನ ಹೊರಹಾಕುತ್ತಲೇ ಇದ್ದಾರೆ. ಯತ್ನಾಳ್, ರಮೇಶ್ ಜಾರಕಿಹೊಳಿ ಬಳಿಕ ಶ್ರೀರಾಮುಲು ಸಹ ವಿಜಯೇಂದ್ರ ನಡೆಗೆ ಅಸಮಾಧಾನ ಹೊರಹಾಕಿದ್ದರು. ಇದೀಗ ಚಿಕ್ಕಬಳ್ಳಾಪುರ ಸಂಸದ ಡಾ ಸುಧಾಕರ್ ಅವರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದು, ಜಿಲ್ಲಾಧ್ಯಕ್ಷ ನೇಮಕದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಗುಡುಗಿದ್ದಾರೆ.

ಚಿಕ್ಕಬಳ್ಳಾಪುರ ಸಂಸದ ಕೆ.ಕೆ ಸುಧಾಕರ್ ಅವರು ವಿಜಯೇಂದ್ರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದು, ನಿಮ್ಮ ನಾಯಕತ್ವದಲ್ಲಿ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟು ಗೆಲ್ಲಿ ನೋಡೋಣ ಎಂದು ವಿಜಯೇಂದ್ರಗೆ ಬಹಿರಂಗ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್ ಇಂದು (ಜನವರಿ 29) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ತಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಮಾಡಿಕೊಂಡಿದ್ದಾರೆ. ಇವತ್ತಿನ ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬೇಸರ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿಯನ್ನು ನಂಬಿ ಇಲ್ಲಿ ಆಂತರಿಕ ಪ್ರಜಾಪ್ರಭುತ್ವ, ಆರ್​ಎಸ್​ಎಸ್ ಆದರ್ಶ ಇದೆ ಎಂದು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ. ಬಿಜೆಪಿಗೆ ಮರಳು ಭೂಮಿಯಂತಿದ್ದ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿಗೆ ಸೇರಿದ್ದೆ. ಯಡಿಯೂರಪ್ಪನವರನ್ನು ಸಿಎಂ ಮಾಡಬೇಕು ಅಂಎಂದು 17 ಜನ ಬಿಜೆಪಿಗೆ ಬಂದೆವು. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ‌ ಅವರ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ. ಅಂತಿಮವಾಗಿ ನನಗೆ ಬಿಜೆಪಿ ತತ್ವ ಸಿದ್ದಾಂತ ಅಷ್ಟೇ ಮುಖ್ಯ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಒಂದು ಬಾರಿ ನನಗೆ ಚಿಕ್ಕಬಳ್ಳಾಪುರದಲ್ಲಿ ಆಘಾತ ಆಯಿತು. ಇವತ್ತು ಪಕ್ಷ ಕಟ್ಟುತ್ತೇವೆ ಎಂದು ಹೊರಟಿದ್ದವರು ಟಾರ್ಗೆಟ್ ಮಾಡಿ ಎಷ್ಟು ಸೋಲಿಸುವಂತಹ ಪ್ರಯತ್ನ ಮಾಡಿದರು ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

2019ರಲ್ಲಿ ಸಾಕಷ್ಟು ಅಪಾದನೆಗಳನ್ನೂ ಎದುರಿಸಬೇಕಾಯಿತು. ಇವತ್ತು ಬಿಜೆಪಿಯಲ್ಲಿ ಸಂಘಟನಾ ಚುನಾವಣೆ ನಡೆಯುತ್ತಿದೆ. ವಂಶವಾದ ಇಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನಂಬಿದ್ದೇನೆ. ಎಷ್ಟೇ ಅಪಮಾನ ಆಗಿದ್ದರೂ ನಾವೆಲ್ಲರೂ ಒಂದೇ ಎಂದು ಕೆಲಸ ಮಾಡಿಕೊಂಡು ಬಂದಿದ್ದೇವೆ. 2024 ರಲ್ಲಿ ಸ್ವಾಭಾವಿಕವಾಗಿ ಟಿಕೆಟ್ ನನಗೇ ಬರಬೇಕಿತ್ತು. ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ನಾನು ಮಾಡಿದ್ದೇನೆ. ಇಂದು ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ. ಯಾವುದೇ ಚುನಾವಣೆ ಸಂವಿಧಾನ ಬದ್ಧವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಚುನಾವಣೆ ಮಾಡಲಿಲ್ಲ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ಆಗಿದೆ. ಏಕಚಕ್ರಾಧಿಪತ್ಯ ರೀತಿ ಆಗಿದೆ. ನಿಮಗೆ ಎಸ್ ಬಾಸ್, ಜೀ ಹುಜೂರ್ ಎನ್ನುವವರು ಬೇಕು ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

ಯಾರನ್ನೂ ವಿಶ್ವಾಸಕ್ಕೆ ತೆಗದುಕೊಳ್ಳುವ ಜಾಯಮಾನ ಇಲ್ಲ. ಇವರ ದರ್ಪ, ಇವರ ಅಹಂಕಾರ. ಅವರ ಹತ್ತಿರ ಸಾವಿರಾರು ಕೋಟಿ ಇರಬಹುದು. ಇವರ ಹಿಂಬಾಲಕರು ನನ್ನ ಸೋಲಿಸಲು ಪ್ರಯತ್ನ ಪಟ್ಟರು. ಜಿಲ್ಲಾಧ್ಯಕ್ಷರ ವಿಚಾರಕ್ಕೆ ಸೌಜನ್ಯಕ್ಕೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಫೋನ್ ಮಾಡಿದರೂ ರೆಸ್ಪಾಂಡ್ ಮಾಡಲ್ಲ. ನಡ್ಡಾ ಅವರಿಗೆ ಮೆಸೇಜ್ ಹಾಕಿದರೆ ಅಪಾಯಿಂಟ್ ಮೆಂಟ್ ಕೊಡುತ್ತಾರೆ. ಆದ್ರೆ, ಇವರು ಎರಡು ಮೂರು ಬಾರಿ ಅಪಾಯಿಂಟ್ ಮೆಂಟ್ ಫಿಕ್ಸ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ನಮ್ಮನ್ನು ತುಳಿಯಲು, ಸಮಾಧಿ ಮಾಡಲು ಹೊರಟಿದ್ದೀರಾ? ಎಂದು ವಿಜಯೇಂದ್ರರನ್ನು ಖಾರವಾಗಿಯೇ ಪ್ರಶ್ನಿಸಿದರು.

ಇನ್ನೇನಿದ್ದರೂ ಯುದ್ಧ

ನನ್ನ ಸಮಾಧಾನದ ದಿನ ಮುಗಿಯಿತು. ಇನ್ನೇನಿದ್ದರೂ ಯುದ್ಧ. ಸಿ.ಟಿ. ರವಿ, ಬೊಮ್ಮಾಯಿ‌, ರಮೇಶ್ ಜಾರಕಿಹೊಳಿ ಅವರನ್ನು ಏನು ಮಾಡಿದ್ದೀರಿ. ಅಂದು ರಮೇಶ್ ನಿಮಗೆ ಬಹಳ ಚೆನ್ನಾಗಿದ್ದರು. ಬಿಜೆಪಿ ಬಹಳ ಪ್ರಬಲವಾಗಿರುವ ಕಡೆ ನೀವು ರಾಜ್ಯಾಧ್ಯಕ್ಷರಾಗಿ ತಿಣುಕಾಡಿಕೊಂಡು ಗೆದ್ದಿದ್ದೀರಿ. ಅದು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲಿ. ಇನ್ನೊಬ್ಬರು ಅಭ್ಯರ್ಥಿ ಅಗಿರುತ್ತಿದ್ದರೆ ಗೊತ್ತಾಗಿರುತ್ತಿತ್ತು. ನೀವು ಯಾರನ್ನು ನಂಬಿಕೊಂಡಿದ್ದೀರಿ ಎಂದು ಗೊತ್ತಿದೆ. ಅವರು ನಿಮಗೆ ರಿಯಲ್ ಎಸ್ಟೇಟ್ ನಲ್ಲಿ ಕಾಸು ತಂದುಕೊಡಬಹುದು, ರಾಜಕೀಯ ‌ಮಾಡಲಾಗಲ್ಲ. ನಾನು ಇದನ್ನು ಎಲ್ಲಾ ಮೋದಿ, ಅಮಿತ್ ಷಾ, ನಡ್ಡಾ ಭೇಟಿ ಮಾಡಿ ಗಮನಕ್ಕೆ ತರುತ್ತೇನೆ. ನಿಮ್ಮ ವ್ಯವಹಾರ ಎಲ್ಲಾ ಗಮನಕ್ಕೆ ತರುತ್ತೇನೆ ಎಂದರು.

ಪಕ್ಷ ತೊರೆಯುವ ಎಚ್ಚರಿಕೆ ನೀಡಿದ ಸುಧಾಕರ್

ಕೇವಲ ಬಸವರಾಜ ಬೊಮ್ಮಾಯಿ‌ಯವರ ಜೊತೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂದು ನಮ್ಮ ಮೇಲೆ ದ್ವೇಷನಾ? ವಿಜಯೇಂದ್ರ‌ ಯಡಿಯೂರಪ್ಪನವರ ಮಗ ಆಗಿರಬಹುದು. ಆದರೆ ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಇವರದ್ದು ದ್ವೇಷದ ರಾಜಕಾರಣ. ಇವರು ಈ ರೀತಿ ಮಾಡಿದರೆ ನಮ್ಮ ರಾಜಕೀಯ ಅಳಿವು ಉಳಿವಿನ ದೃಷ್ಟಿಯಿಂದ ನಿರ್ಧಾರ ಮಾಡಬೇಕಾಗುತ್ತದೆ. ನಮಗೂ ರಾಜಕೀಯ ಶಕ್ತಿ ಇದೆ. ಲಾವಾ ಎಲ್ಲಾ ಒಳಗೆ ಇದೆ. ಯಾವಾಗ ಸ್ಫೋಟ ಆಗುತ್ತದೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಪಕ್ಷ ತೊರೆಯುವ ಎಚ್ಚರಿಕೆ ನೀಡಿದರು.

ಪಕ್ಷವನ್ನು ಒಂದೇ ಸಲ ಮುಗಿಸಲು ಹೊರಟಿದ್ದಾರೆ. ಇವರ ಧೋರಣೆ, ಅಹಂಕಾರಣ, ಮನಸ್ಥಿತಿಗೆ ನನ್ನ ಧಿಕ್ಕಾರ ಇದೆ. ಇವರ ಧೋರಣೆ ಬದಲಾಯಿಸಿ ಅಥವಾ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಿಗೆ ಮಾಡುತ್ತೇನೆ. ಅನೇ‌ಕ ಸಂಸದರು ನನ್ನ ಜೊತೆ ಭಾವನೆ ಹಂಚಿಕೊಂಡಿದ್ದಾರೆ. ಅಧಿವೇಶನ ಪ್ರಾರಂಭ ಆದ ಬಳಿಕ ನಾವು ಭೇಟಿ ಮಾಡುತ್ತೇವೆ. ಬಣಗಳಿಗೆ ನನಗೆ ಅನೇಕ ಬಾರಿ ಆಹ್ವಾನ ಇತ್ತು, ನಾನು ಹೋಗಿಲ್ಲ. ಹಾಗಂತ ಅವರು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಲ್ಲ. ನಮ್ಮ ಡೀಸೆನ್ಸಿಯನ್ನು ಅವರು ವೀಕ್ ನೆಸ್ ಅಂತಾ ತಿಳಿದುಕೊಂಡರು. ನಮ್ಮ ಶಕ್ತಿಯನ್ನು ಮುಂದೆ ತೋರಿಸುತ್ತೇವೆ. ಎಲ್ಲಾ ನಾಯಕರ ಹತ್ತಿರ ಕೂಡಾ ಮಾತಾಡಿದ್ದೇನೆ. ಕೆಲವರ ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತಾರೆ. ಆ ಕೆಟಗರಿಯವರು ಇವರು ಅನ್ನಿಸುತ್ತದೆ. ಸಮಯ ಕೊಡದ ಇವರಿಂದ ಪಕ್ಷದ ಸಂಘಟನೆ ಸಾಧ್ಯ ಏನ್ರೀ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರಿಷ್ಠರ ಭೇಟಿ ಬಳಿಕ ಮುಂದಿನ ತೀರ್ಮಾನ

ಯಡಿಯೂರಪ್ಪ ನವರ ಗಮನಕ್ಕೆ ಇನ್ನೂ ತಂದಿಲ್ಲ. ಅವರೇನು ಪಾಪ ಏನು ಮಾಡುತ್ತಾರೆ. ಅವರೇನೂ ಮಗನ ಸರಿ ಮಾಡುತ್ತಾರಾ ಇಲ್ಲ. ಇವರು ಅವರಿಗಿಂತ ಮೇಲೆ ಹೋಗಿದ್ದಾರೆ. ನಾನಂತೂ ಬಹಳ ಮನ ನೊಂದಿದ್ದೇನೆ. ನಮ್ಮ ರಾಜಕೀಯ ಭವಿಷ್ಯವನ್ನೇ ಮುಗಿಸಲು ಹೊರಟಿದ್ದಾರೆ. ಅಂತಿಮವಾಗಿ ನನ್ನ ರಾಜಕೀಯ ನಡೆ ಹೇಳುತ್ತೇನೆ. ನನಗೆ ಪದವಿ ಮುಖ್ಯ ಅಲ್ಲ, ಸ್ವಾಭಿಮಾನ ಮುಖ್ಯ. ಒಂದೇ ವರ್ಷದಲ್ಲೇ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದೆ. ವರಿಷ್ಠರ ಭೇಟಿ ಮಾಡಿದ ಬಳಿಕ ನನ್ನ ಬೆಂಬಲಿಗರ ಸಭೆ ಮಾಡಿ ಅಭಿಪ್ರಾಯ ಪಡೆಯುತ್ತೇನೆ. ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು, ಹೀಗೆಯೇ ಅಗುತ್ತದೆ ಎಂದು ಹೇಳಲಾಗುತ್ತಾ? ವರಿಷ್ಠರ ಭೇಟಿ ಮಾಡಿ ಚರ್ಚೆ ಮಾಡಿದ ಬಳಿಕ ಮುಂದಿನ ತೀರ್ಮಾನ ಮಾಡಿತ್ತೇನೆ ಎಂದು ಹೇಳಿದರು.

ಸರಿ ಮಾಡದೇ ಇದ್ದರೆ ನಮಗೆ ಯಾರಿಗೂ ಭವಿಷ್ಯ ಇಲ್ಲ

ನಾನು ಯಾವುದೇ ಸ್ಥಾ‌ನಮಾನಕ್ಕೆ ಲಾಬಿ ಮಾಡಿಲ್ಲ. ಪಕ್ಷ ಯಾರನ್ನು ನೇಮಕ ಮಾಡುತ್ತದೋ ಅದನ್ನು ಒಪ್ಪಿಕೊಳ್ಳುತ್ತೇನೆ. ನೀವು ಈಗ ಅಡ್ಡದಾರಿಯಲ್ಲಿ ರಾಜ್ಯಾಧ್ಯಕ್ಷರಾಗಬೇಕು. ಈಗ ರಾಷ್ಟ್ರೀಯ ನಾಯಕರು ಏನು ಹೇಳಿದ್ದಾರೋ ಅದನ್ನು ಮಾಡುತ್ತೇವೆ. ಆದರೆ ಅಂತರಿಕ ಪ್ರಜಾಪ್ರಭುತ್ವವನ್ನೇ ನೀವು ಕೊಲೆ ಮಾಡಿದ್ದೀರಿ. ಇಡೀ ಪಕ್ಷದ ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸಲಾಗಿದೆ. ರಾಜ್ಯಾಧ್ಯಕ್ಷ ಚುನಾವಣಾ ಪ್ರಕ್ರಿಯೆಯನ್ನೇ ಮ್ಯಾನುಪುಪೇಟ್ ಮಾಡಲಾಗಿದೆ. ನನ್ನ ಜಿಲ್ಲೆಯಲ್ಲೇ ನೀವು ಸಮಾಧಿ ಕಟ್ಟಲು ಹೋದರೆ ನೋಡಿಕೊಂಡು ಕಟ್ಟಿಸಿಕೊಳ್ಳಬೇಕಾ? ನಿಮಗೆ ಒಳ್ಳೆಯದು ಮಾಡಿದವರಿಗೇ ನೀವು ಸಮಾಧಿ ಕಟ್ಟುವುದಾದರೆ ಇನ್ನು ಬೇರೆಯವರಿಗೆ ಏನು ಮಾಡುತ್ತೀರಿ? ಸಿ.ಟಿ.ರವಿ, ಬೊಮ್ಮಾಯಿ‌, ‌ಅಶೋಕ್, ಸದಾನಂದ ಗೌಡ, ಡಾ. ಅಶ್ವಥ್ ನಾರಾಯಣ ಇವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾ? ಇಡೀ ಪಕ್ಷ ಬಹಳ ನೋವಿನಲ್ಲಿದೆ. ರಾಷ್ಟ್ರೀಯ ನಾಯಕರು ಈಗಲಾದರೂ‌ ಸರಿ ಮಾಡದೇ ಇದ್ದರೆ ನಮಗೆ ಯಾರಿಗೂ ಭವಿಷ್ಯ ಇಲ್ಲ ಎಂದು ತಿಳಿಸಿದರು.

Published On - 4:06 pm, Wed, 29 January 25

ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ
ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ
ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು
ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ