Wedding Ritual: ಈ ತಿಂಗಳಿನಲ್ಲಿ ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ, ಹಿಂದೂ ಶಾಸ್ತ್ರ ಹೇಳೋದೇನು?
16 ಸಂಸ್ಕಾರಗಳಲ್ಲಿ ಒಂದಾದ ಮದುವೆಯನ್ನು ಹಿಂದೂ ಧರ್ಮದಲ್ಲಿ ಒಂದು ಪವಿತ್ರ ವಿಧಿಯೆಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ಗಂಡು ಹೆಣ್ಣಿನ ಜಾತಕ ಕೂಡಿ ಬರುತ್ತದೆಯೇ ಎಂದು ನೋಡುವುದರ ಜೊತೆಗೆ ಪಂಚಾಂಗ, ತಿಥಿ, ಮದುವೆಗೆ ಶುಭ ಸಮಯ ಯಾವುದೆಂದು ಎಲ್ಲವನ್ನು ನೋಡಲಾಗುತ್ತದೆ. ಅದೇ ರೀತಿ ಶಾಸ್ತ್ರದಲ್ಲಿ ಈ ಕೆಲವೊಂದು ತಿಂಗಳು ಅಥವಾ ಮಾಸ ಮದುವೆಯಂತಹ ಪವಿತ್ರ ಕಾರ್ಯಗಳನ್ನು ಮಾಡಲು ಮಂಗಳಕರವಲ್ಲ ಎಂದು ಹೇಳಲಾಗಿದೆ. ಅದರಂತೆ ವರ್ಷದ ಈ ಕೆಲವೊಂದು ತಿಂಗಳಲ್ಲಿ ಮದುವೆಯಂತಹ ಯಾವುದೇ ಪವಿತ್ರ ಕಾರ್ಯಗಳನ್ನು ಮಾಡುವುದಿಲ್ಲ. ಅದು ಏಕೆ ಎಂಬುದನ್ನು ನೋಡೋಣ ಬನ್ನಿ.

ಮದುವೆ (Marriage) ಅನ್ನೋದು ಎರಡು ಜೀವಗಳನ್ನು ಒಂದು ಮಾಡೋ ಪವಿತ್ರ (sacred) ಬಂಧ (Bond). ಅದರಲ್ಲೂ ಹಿಂದೂ (Hindu) ಧರ್ಮದಲ್ಲಿ (religion) 16 ಸಂಸ್ಕಾರಗಳಲ್ಲಿ ಒಂದಾದ ವಿವಾಹ ಕಾರ್ಯವನ್ನು ಪವಿತ್ರ ವಿಧಿಯೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಮದುವೆಗೂ ಮುಂಚೆ ಗಂಡು ಹೆಣ್ಣಿನ ಜಾತಕ ಕೂಡಿ ಬರುತ್ತದೆಯೇ ಎಂದು ನೊಡುವುದರ ಜೊತೆಗೆ ಮದುವೆಗೆ ಸೂಕ್ತ ಸಮಯ, ಜಾಗ, ತಿಥಿ, ಪಂಚಾಂಗ, ಮುಹೂರ್ತ ಇವೆಲ್ಲವನ್ನು ನೋಡಲಾಗುತ್ತದೆ. ಅದರಂತೆ ಈ ಕೆಲವೊಂದು ತಿಂಗಳುಗಳಲ್ಲಿ (Months) ಮದುವೆ ಆಗ್ಲೇಬಾರ್ದು ಅಂತ ಹಿರಿಯರು ಹೇಳ್ತಾರೆ, ಅದೇ ರೀತಿ ಶಾಸ್ತ್ರಗಳಲ್ಲಿಯೂ ಕೂಡಾ ಇದನ್ನು ಉಲ್ಲೇಖಿಸಲಾಗಿದೆ. ಇದೇ ನಂಬಿಕೆಯ ಕಾರಣಕ್ಕೆ ಹೆಚ್ಚಿನವರು ವರ್ಷದ ಈ ಕೆಲವೊಂದು ತಿಂಗಳುಗಳಲ್ಲಿ ಮದುವೆ ಮಾಡಿಕೊಳ್ಳುವುದಿಲ್ಲ. ಹಾಗಾದ್ರೆ ಮದುವೆ ಕಾರ್ಯಕ್ಕೆ ಸೂಕ್ತವಲ್ಲದ ತಿಂಗಳು ಯಾವುದು, ಇದಕ್ಕೆ ಕಾರಣ ಏನು ಈ ಎಲ್ಲದರ ಕುರಿತು ನೋಡೋಣ ಬನ್ನಿ.
ಜನ ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ:
ಕೆಲವೊಂದು ತಿಂಗಳುಗಳಲ್ಲಿ ಮದುವೆ, ಗೃಹ ಪ್ರವೇಶ, ನಿಶ್ಚಿತಾರ್ಥದಂತಹ ಶುಭ ಕಾರ್ಯಗಳನ್ನು ಜನ ಏರ್ಪಡಿಸುವುದಿಲ್ಲ ಈ ಅಂಶವನ್ನು ನೀವು ಕೂಡಾ ಗಮನಿಸಿರುತ್ತೀರಿ ಅಲ್ವಾ. ಏಕೆ ಕೆಲವು ತಿಂಗಳುಗಳಲ್ಲಿ ಮದುವೆಯಂತಹ ಪವಿತ್ರ ಕಾರ್ಯಗಳನ್ನು ಮಾಡಲು ಜನ ಹಿಂದೇಟು ಹಾಕ್ತಾರೆ, ಇದರ ಹಿಂದಿನ ಕಾರಣ ಏನು, ವಿವಾಹ ಕಾರ್ಯಕ್ಕೆ ಸೂಕ್ತವಲ್ಲದ ತಿಂಗಳು ಯಾವುದು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ಈ ಎರಡು ತಿಂಗಳುಗಳ ಮಧ್ಯೆ ವಿವಾಹ, ಉಪನಯನ, ಸೀಮಂತ, ಗೃಹಪ್ರವೇಶ ಇತ್ಯಾದಿ ಮಂಗಳ ಕಾರ್ಯಗಳು ನಡೆಯೋದಿಲ್ಲ. ಆಷಾಢ ಮಾಸದ ಕಾರಣ ಈ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಹೇಳ್ತಾರೆ. ಏಕೆಂದರೆ ಈ ಮಾಸವು ಶೂನ್ಯ ಮಾಸವಾಗಿದ್ದು, ಈ ಮಾಸವನ್ನು ಅಶುಭವೆಂದು ಸಹ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಈ ತಿಂಗಳಿನಲ್ಲಿ ಮದುವೆಯಾಗಬಾರದು ಎಂದು ಹೇಳ್ತಾರೆ. ಹೆಚ್ಚುವರಿಯಾಗಿ ಇದು ಪಿತೃ ಪಕ್ಷದ ಸಮಯವಾಗಿರುವುದರಿಂದ ಮದುವೆಯಂತಹ ಪವಿತ್ರ ಕಾರ್ಯಗಳು ನಡೆಯುವುದಿಲ್ಲ.
ಇನ್ನೊಂದು ಕಾರಣವೆಂದರೆ, ಆಗಸ್ಟ್ ಮತ್ತು ಜುಲೈ ತಿಂಗಳಿನಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ಹಿಂದೆಲ್ಲಾ ಈ ಸಮಯದಲ್ಲಿ ಜನರಿಗೆ ಕೆಲಸ ಇರುತ್ತಿರಲಿಲ್ಲ, ಜೊತೆಗೆ ಊಟಕ್ಕೂ ತುಂಬಾ ಕಷ್ಟ ಪಡಬೇಕಾದಂತಹ ಪರಿಸ್ಥಿತಿ ಇತ್ತು. ಹೀಗೆ ವಿಪರೀತ ಮಳೆ, ಹಣದ ಕೊರತೆಯ ಕಾರಣದಿಂದ ಮದುವೆಯಂತಹ ಶುಭ ಕಾರ್ಯಗಳನ್ನು ನಡೆಸುವುದು ಕಷ್ಟಸಾಧ್ಯವಾಗುತ್ತಿತ್ತು. ಇದೇ ಕಾರಣಕ್ಕೆ ಹಿಂದೆಲ್ಲಾ ಆಗಸ್ಟ್, ಜುಲೈ ತಿಂಗಳಿನಲ್ಲಿ ಮದುವೆಯಂತಹ ಶುಭ ಕಾರ್ಯಗಳನ್ನು ನಡೆಸುತ್ತಿರಲಿಲ್ಲ.
ಇದರೊಂದಿಗೆ ವಿಷ್ಣುವು ಯೋಗ ನಿದ್ರೆಗೆ ಜಾರುವ ಚತುರ್ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸದ ನಾಲ್ಕು ತಿಂಗಳುಗಳಲ್ಲಿ ಅಷ್ಟಾಗಿ ಮದುವೆ ಕಾರ್ಯಕ್ರಮಗಳು ನಡೆಯುವುದಿಲ್ಲ. ಈ ಸಮಯದಲ್ಲಿ ಹೆಚ್ಚಿನ ಹಬ್ಬಗಳು, ಪೂಜಾ ಕೈಂಕರ್ಯಗಳು ನಡೆಯುತ್ತವೆ ಹಾಗಾಗಿ ಹೆಚ್ಚಾಗಿ ಈ ಸಮಯದಲ್ಲಿ ವಿವಾಹ ಸಮಾರಂಭ ನಡೆಯೊಲ್ಲ.
ಇದನ್ನೂ ಓದಿ: ನಿಮ್ಮ ವ್ಯಕ್ತಿತ್ವ ಎಂತಹದ್ದೆಂದು ಪರಿಚಯಿಸುತ್ತೆ ಈ ಚಿತ್ರ
ಮದುವೆಗೆ ಅತ್ಯಂತ ಶುಭ ತಿಂಗಳು ಯಾವುದು?
ಸಾಮಾನ್ಯವಾಗಿ ಕಾರ್ತಿಕ ಮಾಸದ ನಂತರ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾದ ಬಳಿಕ ಮದುವೆ, ಗೃಹ ಪ್ರವೇಶದಂತಹ ಮಂಗಳ ಕಾರ್ಯಗಳು ನಡೆಯುತ್ತವೆ. ಹೆಚ್ಚಾಗಿ ವೈಶಾಖ ಮತ್ತು ಜ್ಯೇಷ್ಠ ತಿಂಗಳಿನಲ್ಲಿ ವಿವಾಹಗಳು ನಡೆಯುತ್ತವೆ. ಹೀಗೆ ಹೆಚ್ಚಾಗಿ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ, ಏಪ್ರಿಲ್, ಮೇ ತಿಂಗಳುಗಳಲ್ಲಿ ಮದುವೆಯಂತಹ ಪವಿತ್ರ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ