Sign In

By signing in or creating an account, you agree with Associated Broadcasting Company's Terms & Conditions and Privacy Policy.

April Fool’s Day 2025: ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು? ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ?

ಏಪ್ರಿಲ್ 1 ಮೂರ್ಖರ ದಿನ, ಈ ದಿನ ಬಂತೆಂದರೆ ಕೆಲವರಿಗೆ ಏನೋ ಖುಷಿ, ಕೆಲವರಂತೂ ತಮ್ಮ ಆತ್ಮೀಯ ವ್ಯಕ್ತಿಗಳನ್ನು ಹೇಗೆ ಬಕ್ರಾ ಮಾಡಬಹುದು ಎಂದು ಯೋಚಿಸುತ್ತಾರೆ. ಭಾರತ ಮಾತ್ರವಲ್ಲದೆ ಎಲ್ಲಾ ದೇಶದಲ್ಲಿಯೂ ಏಪ್ರಿಲ್ 1 ರಂದು ಮೂರ್ಖರ ದಿನ ಆಚರಿಸಲಾಗುತ್ತದೆ. ಅಂದೇ ಈ ದಿನವನ್ನು ಏಕೆ ಆಚರಿಸುತ್ತೇವೆ, ಏಪ್ರಿಲ್ ಫೂಲ್ ದಿನ ಯಾವಾಗ ಪ್ರಾರಂಭವಾಯಿತು? ಇತಿಹಾಸ ಹಾಗೂ ಮಹತ್ವ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

April Fool's Day 2025: ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು? ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 31, 2025 | 3:30 PM

ಬೇರೆಯವರಿಗೆ ತಮಾಷೆ (funny) ಮಾಡಿ ಕಾಲೆಳೆಯುವುದರಲ್ಲಿ ಸಿಗುವ ಮಜಾನೇ ಬೇರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ತಮಾಷೆಯ ಬದಲಾಗಿ ಇದುವೇ ಜಗಳಕ್ಕೆ ಕಾರಣವಾಗುತ್ತದೆ. ಆದರೆ ಏಪ್ರಿಲ್ 1 ರಂದು ಏನೇ ತಮಾಷೆ ಮಾಡಿದರೂ ಕೂಡ ಬೈಯುವುದಿಲ್ಲ, ಏಕೆಂದರೆ ಏಪ್ರಿಲ್ 1 ರಂದು ಮೂರ್ಖರ ದಿನ (Fool Day). ಸಿಕ್ಕಿದ್ದೇ ಚಾನ್ಸ್ ಎಂದು ಬೇರೆಯವರನ್ನು ಬಕ್ರಾ ಮಾಡುತ್ತಾ ಅದರಲ್ಲೇ ಖುಷಿ ಕಾಣುವವರೇ ಹೆಚ್ಚು. ಹೀಗಾಗಿ ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಬಕ್ರಾ ಮಾಡಲು ಏನೇನೋ ಸುಳ್ಳು ಹೇಳುತ್ತಾರೆ. ಈ ವೇಳೆ ಯಾರಾದರೂ ಮೂರ್ಖರಾಗಿ ಬಿಟ್ಟರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಈ ದಿನ ಯಾರೊಂದಿಗೂ ಕೂಡ ಬಕ್ರಾ ಆಗಬಾರದು ಎಂದು ತುಂಬಾನೇ ಜಾಗರೂಕರಾಗಿರುವುದು ಇದೆ. ಈ ದಿನವು ಅನಿಯಮಿತ ನಗು, ಹಾಸ್ಯ ಮತ್ತು ಸಂತೋಷಕ್ಕೆ ಮೀಸಲಾಗಿದೆ. ಈ ದಿನದಂದು ಭಾರತ (India) ಮಾತ್ರವಲ್ಲ ಇತರ ದೇಶದ ಜನರು ಕೂಡ ಮೂರ್ಖರ ದಿನವನ್ನಾಗಿ ಆಚರಿಸುತ್ತಾರೆ.

ಮೂರ್ಖರ ದಿನದ ಇತಿಹಾಸ

ಏಪ್ರಿಲ್ ಫೂಲ್ ದಿನವನ್ನು ಮೊದಲು ಯಾವಾಗ ಆಚರಣೆ ಮಾಡಲಾಯಿತು ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಈ ದಿನದ ಆಚರಣೆಯ ಹಿಂದೆ ನೂರಾರು ಕಥೆಗಳಿವೆ. ಆದರೆ, ಇತಿಹಾಸಕಾರರು ಇದು 1582ರ ಹಿಂದೆಯೇ ಶುರುವಾಗಿದ್ದು ಎನ್ನುತ್ತಾರೆ. ಮೊದಲು ಫ್ರಾನ್ಸ್‌ನಲ್ಲಿ ಆರಂಭವಾಗಿ ಬಳಿಕ ಯುರೋಪ್ ದೇಶಗಳಲ್ಲಿ ಈ ದಿನದ ಆಚರಣೆ ಶುರುವಾಯಿತು. ಅಂದಹಾಗೆ, ಫ್ರಾನ್ಸ್‌ನಲ್ಲಿ ಮೊದಲು ಜೂಲಿಯನ್ ಕ್ಯಾಲೆಂಡರನ್ನು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವನ್ನು ಏಪ್ರಿಲ್ 1 ರಂದು ಆಚರಿಸಲಾಗುತ್ತದೆ. ಹಲವು ದಶಕಗಳ ಹಿಂದೆ ಇಡೀ ಜಗತ್ತು ಏಪ್ರಿಲ್ 1 ರಂದು ಹೊಸ ವರ್ಷವನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸುತ್ತಿತ್ತು.

ಹೀಗಿರುವಾಗ ಫ್ರಾನ್ಸ್ ದೇಶವೂ ಪೋಪ್ XIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತು. ಈ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಲಾಗುತ್ತಿದೆ. ಈ ಕಾರಣದಿಂದಾಗಿ ಜನವರಿ 1 ರ ಬದಲಾಗಿ ಏಪ್ರಿಲ್ 1 ರಂದು ಹೊಸ ವರ್ಷ ಆಚರಿಸುತ್ತಿದ್ದೆವು ಎಂದು ಅರಿತು ಫ್ರಾನ್ಸ್ ದೇಶವು ಎಷ್ಟು ದಿನಗಳ ಕಾಲ ನಾವು ಮೂರ್ಖರಾದೆವು ಎಂದಿತು. ಅಂದಿನಿಂದ ಈ ದಿನದ ಆಚರಣೆಯೂ ಆರಂಭವಾಯಿತು ಎನ್ನಲಾಗಿದೆ. ಆದರೆ ಈಗಲೂ ಏಪ್ರಿಲ್ 1 ರಂದು ಹೊಸ ವರ್ಷ ಆಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಈ ದಿನವನ್ನು ಜಾಗತಿಕವಾಗಿ ಮೂರ್ಖರ ದಿನವನ್ನಾಗಿ ಆಚರಿಸುತ್ತ ಬರಲಾಗುತ್ತಿದೆ.

ಇದನ್ನೂ ಓದಿ
Image
ರಾತ್ರಿ ಚಪಾತಿ ತಿನ್ನುತ್ತೀರಾ? ನಿಮ್ಮಲ್ಲಿ ಖಂಡಿತ ಈ ಬದಲಾವಣೆ
Image
ಕಣ್ಣಿಗೆ ಕಸ ಬಿದ್ದರೆ ತಕ್ಷಣ ಕಣ್ಣನ್ನು ಉಜ್ಜಬೇಡಿ, ಈ ಕೆಲಸ ಮೊದ್ಲು ಮಾಡಿ
Image
ನೀರಿಗೆ ಇದನ್ನು ಹಾಕಿ ಸ್ನಾನ ಮಾಡಿದ್ರೆ ಬೆವರಿನ ವಾಸನೆ ದೂರವಾಗುತ್ತೆ
Image
ನೀವು ಆಯ್ಕೆ ಮಾಡಿಕೊಳ್ಳುವ ಬೀಚ್ ಚಿತ್ರದಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಇದನ್ನೂ ಓದಿ: ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ

ಏಪ್ರಿಲ್ ಫೂಲ್ ದಿನದ ಮಹತ್ವ ಹಾಗೂ ಆಚರಣೆ

ಏಪ್ರಿಲ್ ತಿಂಗಳ ಮೊದಲ ದಿನ ಒಂದು ಕ್ಷಣ ಮೈ ಮೈಮರೆತರೆ, ಎಲ್ಲರೂ ನಿಮ್ಮನ್ನು ಮೂರ್ಖರನ್ನಾಗಿಸಿ ಬಿಡುತ್ತಾರೆ. ಆದರೆ ಈಗಿನ ಜನರಲ್ಲಿ ಹಾಸ್ಯ ಪ್ರವೃತ್ತಿ ಇಲ್ಲವೇ ಎನ್ನುವಂತಾಗಿದೆ. ಎಲ್ಲರೂ ಗಂಭೀರವಾಗಿ ಬದುಕುವುದನ್ನು ರೂಢಿಸಿಕೊಂಡು ನಗುವುದನ್ನೇ ಮರೆತಿದ್ದಾರೆ. ಹೀಗಾಗಿ ಮಾಷೆ, ಕುಚೇಷ್ಟೆ ಮಾಡುವ ಮೂಲಕ ಎಲ್ಲರ ಮುಖದಲ್ಲಿ ನಗು ತರಿಸುವ ಉದ್ದೇಶದಿಂದ ಈ ದಿನದ ಆಚರಣೆ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕುಚೇಷ್ಟೆ, ತಮಾಷೆಗಳನ್ನು ಮಾಡಿ ಮೂರ್ಖರನ್ನಾಗಿಸಿ ಈ ದಿನವನ್ನು ಎಂಜಾಯ್ ಮಾಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ