AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coconut Kulukki: ಈ ಬೇಸಿಗೆಯ ಉರಿ ಬಿಸಿಲಿಗೆ ದೇಹ ತಂಪಾಗಿರಿಸಲು ಟ್ರೈ ಮಾಡಿ ಎಳನೀರು ಕುಲುಕ್ಕಿ ಶರ್ಬತ್‌

ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಬಿಸಿಲ ಅಬ್ಬರ ಜೋರಾಗಿದೆ. ಈ ಉರಿ ಬಿಸಿಲಿಗೆ ದಾಹವೂ ಹೆಚ್ಚುತ್ತಿದ್ದು, ತಂಪಾದ ಪಾನೀಯ ಆಗಾಗ್ಗೆ ಕುಡಿಯಬೇಕೆನಿಸುತ್ತದೆ. ಹೀಗಿರುವಾಗ ಸಿಕ್ಕ ಸಿಕ್ಕ ತಂಪು ಪಾನೀಯವನ್ನು ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರವಾದ ರಿಫ್ರೆಶಿಂಗ್‌ ಪಾನೀಯಗಳನ್ನು ಕುಡಿಯುವುದು ಉತ್ತಮ. ಆದ್ರೆ ಮಿಲ್ಕ್‌ಶೇಕ್‌ ಲಸ್ಸಿಗಳನ್ನು ಕುಡಿದು ಬೋರ್‌ ಆಗಿದೆ ಅಂತಾದ್ರೆ ಕೇರಳದ ಈ ಸ್ಪೆಷಲ್‌ ಎಳನೀರು ಕುಲುಕ್ಕಿ ಶರ್ಬತ್‌ ಟ್ರೈ ಮಾಡಿ.

Coconut Kulukki: ಈ ಬೇಸಿಗೆಯ ಉರಿ ಬಿಸಿಲಿಗೆ ದೇಹ ತಂಪಾಗಿರಿಸಲು ಟ್ರೈ ಮಾಡಿ ಎಳನೀರು ಕುಲುಕ್ಕಿ ಶರ್ಬತ್‌
Coconut Kulukki
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Mar 30, 2025 | 5:32 PM

ಈ ಬಾರಿ ಮಾರ್ಚ್‌  ಆರಂಭದಲ್ಲಿಯೇ ಬೇಸಿಗೆಯ (Summer) ಬಿಸಿಲ ಅಬ್ಬರ ಬಲು ಜೋರಾಗಿಯೇ ಇದೆ. ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು, ದೇಹ (Body ತಂಪಾಗಿರಿಸಲು (cool), ದಾಹ (thirst) ತೀರಿಸಿಕೊಳ್ಳಲು ಹೆಚ್ಚಿನವರು ತಂಪು ಪಾನೀಯಗಳ  ಮೊರೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಸಿಕ್ಕ ಕೋಲ್ಡ್‌ ಡ್ರಿಂಕ್ಸ್‌ ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರವಾದ ರಿಫ್ರೆಶಿಂಗ್‌ ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವ ಮೂಲಕ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿಯೇ ನಾವು ನಿಮಗೆ ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಆರೋಗ್ಯಕರ ಪಾನೀಯ ರೆಸಿಪಿಯನ್ನು ಹೊತ್ತು ತಂದಿದ್ದೇವೆ. ಅದುವೇ ಕೇರಳದ (Kerala) ಸ್ಪೆಷಲ್‌ ಎಳನೀರು ಕುಲುಕ್ಕಿ (coconut kulukki) ಶರ್ಬತ್.‌ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ ಬನ್ನಿ.

ಕುಲುಕ್ಕಿ ಕೇರಳದ ತಂಪು ಪಾನೀಯವಾಗಿದೆ. ಕಿತ್ತಳೆ ಹಣ್ಣು, ಮಾವಿನ ಹಣ್ಣು, ನಿಂಬೆ ಇತ್ಯಾದಿ ಹಣ್ಣುಗಳಿಂದ ಈ ಕುಲುಕ್ಕಿ ಶರ್ಬತ್‌ ತಯಾರಿಸಬಹುದು. ಅದೇ ರೀತಿ ಎಳನೀರನ್ನು ಕೂಡಾ ಬಳಸಿ ರಿಫ್ರೆಶಿಂಗ್‌ ಕುಲುಕ್ಕಿ ಶರ್ಬತ್‌ ತಯಾರಿಸಬಹುದು. ಬೇಸಿಗೆಯ ದಾಹ ನೀಗಿಸಲು ಸಹಕಾರಿಯಾದ ಎಳನೀರು ಕುಲುಕ್ಕಿ ಶರ್ಬತ್‌ ರೆಸಿಪಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:

• ಎಳನೀರು • ನಿಂಬೆ ರಸ • ಜೇನುತುಪ್ಪ ಅಥವಾ ಸಕ್ಕರೆ • ಒಂದು ಹಸಿ ಮೆಣಸಿನಕಾಯಿ (ಐಚ್ಛಿಕ) • ಉಪ್ಪು ಅಥವಾ ಬ್ಲ್ಯಾಕ್‌ ಸಾಲ್ಟ್‌ • ಐಸ್‌ ಕ್ಯೂಬ್‌ • ನೆನೆಸಿಟ್ಟ ಸಬ್ಜಾ ಬೀಜಗಳು

ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

ತಯಾರಿಸುವ ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ತಾಜಾ ಎಳನೀರನ್ನು ಸುರಿದು ಅದಕ್ಕೆ ಭಾಗ ಮಾಡಿದ ಹಸಿ ಮೆಣಸಿನಕಾಯಿಯನ್ನು ಹಾಕಿ. ನಂತರ ಸ್ವಲ್ಪ ಉಪ್ಪು, ಸಿಹಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ, ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಎಲ್ಲವನ್ನು ಮಿಕ್ಸ್‌ ಮಾಡಿ ಕೊನೆಗೆ ಒಂದು ಲೋಟಕ್ಕೆ ನೆನೆಸಿಟ್ಟ ಸಬ್ಜಾ ಬೀಜ, ಐಸ್‌ ಕ್ಯೂಬ್‌ ಹಾಗೂ ಮೊದಲೇ ತಯಾರಿಸಿಟ್ಟ ಎಳನೀರಿನ ಮಿಶ್ರಣವನ್ನು ಸೇರಿಸಿದರೆ ಕುಡಿಯಲು ಸಿದ್ಧ ಎಳನೀರು ಕುಲುಕ್ಕಿ ಶರ್ಬತ್.‌

ಎಳನೀರು ಕುಲುಕ್ಕಿ ಶರ್ಬತ್‌ ಆರೋಗ್ಯಕರವೇ?

ಖಂಡಿತವಾಗಿಯೂ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಇದರಲ್ಲಿರುವ ಎಳನೀರು ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಸಾಕಷ್ಟು ಜಲಸಂಚಯನವನ್ನು (ಹೈಡ್ರೇಶನ್) ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಸಬ್ಜಾ ಬೀಜಗಳು ಫೈಬರ್‌ ಮತ್ತು ಸಸ್ಯ ಆಧಾರಿತ ಒಮೆಗಾ-3 ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?