Shiva Temples: ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು
ಭಾರತ ಹೊರತು ಪಡಿಸಿ ಬೇರೆ ರಾಷ್ಟ್ರಗಳಲ್ಲಿಯೂ ಶಿವನ ಆರಾಧಕರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಶ್ರೀಲಂಕಾದ ಮುನ್ನೇಶ್ವರಂ, ನೇಪಾಳದ ಪಶುಪತಿನಾಥ, ಆಸ್ಟ್ರೇಲಿಯಾದ ಮುಕ್ತಿ ಗುಪ್ತೇಶ್ವರ, ಪಾಕಿಸ್ತಾನದ ಕಟಾಸ್ ರಾಜ್, ಮಲೇಷ್ಯಾ ಮತ್ತು ಯುಎಸ್ಎಯಲ್ಲಿರುವ ದೇವಾಲಯಗಳ ಇತಿಹಾಸ ಮತ್ತು ವಿಶೇಷತೆಗಳನ್ನು ಈ ಲೇಖನ ವಿವರಿಸುತ್ತದೆ.

ಭಾರತದಲ್ಲಿ ಸಾಕಷ್ಟು ಶಿವ ದೇವಾಲಯಗಳಿವೆ. ಆದರೆ ಭಾರತ ಹೊರತು ಪಡಿಸಿ ಬೇರೆ ರಾಷ್ಟ್ರಗಳಲ್ಲಿಯೂ ಶಿವನ ಆರಾಧಕರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ವಿದೇಶಗಳಲ್ಲಿಯೂ ಲಕ್ಷಾಂತರ ಶಿವ ಭಕ್ತರಿದ್ದು, ಅಲ್ಲೂ ಕೂಡ ಸಾಕಷ್ಟು ಶಿವ ದೇವಾಲಯಗಳಿವೆ. ಆದ್ದರಿಂದ ವಿಶ್ವದ್ಯಾದಂತ ಇರುವ ಶಿವ ದೇವಾಲಯ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಶ್ರೀಲಂಕಾದ ಮುನ್ನೇಶ್ವರಂ ದೇವಾಲಯ:
ಈ ದೇವಾಲಯದ ಇತಿಹಾಸವು ರಾಮಾಯಣ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ದಂತಕಥೆಯ ಪ್ರಕಾರ, ರಾವಣನನ್ನು ಸೋಲಿಸಿದ ನಂತರ ರಾಮನು ಇಲ್ಲಿ ಶಿವನನ್ನು ಪೂಜಿಸಿದನು. ಶಿವನಿಗೆ ಅರ್ಪಿತವಾದ ಈ ದೇವಾಲಯ ಸಂಕೀರ್ಣವು ಸಾವಿರ ವರ್ಷಗಳಿಗೂ ಹಳೆಯದು ಎಂದು ನಂಬಲಾಗಿದೆ. ಪೋರ್ಚುಗೀಸರ ಆಕ್ರಮಣದಿಂದಾಗಿ ಈ ದೇವಾಲಯವು ಎರಡು ಬಾರಿ ನಾಶವಾಯಿತು. ಸ್ಥಳೀಯರ ಸಹಾಯದಿಂದ ದೇವಾಲಯಗಳನ್ನು ನವೀಕರಿಸಲಾಯಿತು. ಪ್ರತಿದಿನ ನೂರಾರು ಭಕ್ತರು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಪಶುಪತಿನಾಥ ದೇವಾಲಯ, ನೇಪಾಳ:
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಕಣಿವೆಗಳ ನಡುವೆ ಇರುವ ಪಶುಪತಿನಾಥ ದೇವಾಲಯವು ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಭಾಗಮತಿ ನದಿಯ ದಡದಲ್ಲಿರುವ ಪಶುಪತಿನಾಥವು ಶಿವನಿಗೆ ಅರ್ಪಿತವಾಗಿದೆ.ಈ ಸುಂದರವಾದ ದೇವಾಲಯವನ್ನು ನೋಡಲು ಪ್ರಪಂಚದಾದ್ಯಂತ ಜನರು ಬರುತ್ತಾರೆ. ಇದನ್ನು 1979 ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿದೆ.
ಮುಕ್ತಿ ಗುಪ್ತೇಶ್ವರ, ಆಸ್ಟ್ರೇಲಿಯಾ:
ಶಿವನಿಗೆ ಅರ್ಪಿತವಾದ ಈ ದೇವಾಲಯ ಸಂಕೀರ್ಣವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಗರದಲ್ಲಿದೆ. ಇದು ಮೊದಲ ಮತ್ತು ಏಕೈಕ ಮಾನವ ನಿರ್ಮಿತ ಗುಹಾ ದೇವಾಲಯವಾಗಿದೆ. ಈ ದೇವಾಲಯವು 13 ನೇ ಜ್ಯೋತಿರ್ಲಿಂಗಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇಲ್ಲಿಗೆ ಯಾತ್ರಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಕಟಾಸ್ ರಾಜ್ ದೇವಾಲಯ ಪಾಕಿಸ್ತಾನ:
ಭಾರತೀಯ ಉಪಖಂಡದಿಂದ ಬೇರ್ಪಟ್ಟ ನಂತರ ಪಾಕಿಸ್ತಾನ ರಚನೆಯಾಯಿತು. ಈ ದೇಶದಲ್ಲಿ ಸುಂದರವಾದ ಪ್ರಾಚೀನ ಹಿಂದೂ ದೇವಾಲಯಗಳಿವೆ. ಕಟಾಸ್ ರಾಜ್ ದೇವಾಲಯವು ಪಂಜಾಬ್ ಪ್ರಾಂತ್ಯದಲ್ಲಿರುವ ಒಂದು ಸುಂದರವಾದ ದೇವಾಲಯವಾಗಿದೆ. ಇಲ್ಲಿನ ನೀರಿನ ಕೊಳಗಳು, ಹಸಿರು ಮತ್ತು ಪ್ರಾಚೀನ ವಾಸ್ತುಶಿಲ್ಪವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಂತಕಥೆಯ ಪ್ರಕಾರ, ಇಲ್ಲಿರುವ ಕೊಳವು ಶಿವನು ತನ್ನ ಪತ್ನಿ ಸತಿಯ ಮರಣದಿಂದ ಶೋಕಿಸುತ್ತಿದ್ದಾಗ ಕಣ್ಣೀರಿನಿಂದ ಸೃಷ್ಟಿಯಾಯಿತು. ಈ ಕೊಳದ ನೀರು ಶಿವನ ಶಕ್ತಿಗಳ ಸಹಾಯದಿಂದ ಪಾಪಗಳನ್ನು ತೊಳೆಯುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಭಾರತದ ಪ್ರಮುಖ ಆಧ್ಯಾತ್ಮಿಕ ತಾಣಗಳು
ಅರುಲ್ಮಿಗು ಶ್ರೀರಾಜ ಕಾಳಿಯಮ್ಮನ್ ದೇವಸ್ಥಾನ (ಮಲೇಷ್ಯಾ):
ಈ ಪ್ರಸಿದ್ಧ ಶಿವ ದೇವಾಲಯವು ಮಲೇಷ್ಯಾದಲ್ಲಿದೆ. ಈ ದೇವಾಲಯವನ್ನು 1922 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ಸಂಪೂರ್ಣವಾಗಿ ಗಾಜಿನಿಂದ ಮಾಡಲ್ಪಟ್ಟಿದೆ. ಇದರ ಗೋಡೆಗಳ ಮೇಲೆ ಸುಮಾರು 30,00,000 ರುದ್ರಾಕ್ಷಿ ಮಣಿಗಳನ್ನು ಹುದುಗಿಸಲಾಗಿದೆ.
ಕೌಯಿ ಹಿಂದೂ ಮಠ (ಯುಎಸ್ಎ):
ಹವಾಯಿಯನ್ ದ್ವೀಪವಾದ ಕೌಯಿಯಲ್ಲಿ ಉಷ್ಣವಲಯದ ಮಳೆಕಾಡುಗಳು ಮತ್ತು ಭೋರ್ಗರೆಯುವ ಜಲಪಾತಗಳ ನಡುವೆ ನೆಲೆಗೊಂಡಿರುವ ಕೌಯಿ ಹಿಂದೂ ಮಠವು ಸುಂದರವಾದ ದೇವಾಲಯವಾಗಿದೆ. ಇಲ್ಲಿ ಶಿವನನ್ನು ಅವರ ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯರೊಂದಿಗೆ ಪೂಜಿಸಲಾಗುತ್ತಿದೆ. ಈ ದೇವಾಲಯವನ್ನು 1970 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Sun, 30 March 25