AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid-Ul-Fitr: ಭಾರತದಲ್ಲೂ ಅರ್ಧ ಚಂದ್ರ ದರ್ಶನ; ನಾಳೆ ದೇಶಾದ್ಯಂತ ಈದ್ ಆಚರಣೆ

ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ತಿಂಗಳು ಇಂದಿಗೆ ಅಂತ್ಯವಾಗಿದೆ. ಇಂದು ಸಂಜೆ ಭಾರತದಲ್ಲೂ ಅರ್ಧ ಚಂದ್ರ ದರ್ಶನವಾಗಿದ್ದು, ನಾಳೆ (ಮಾರ್ಚ್ 31) ದೇಶಾದ್ಯಂತ ಈದ್-ಉಲ್-ಫಿತರ್ ಆಚರಿಸಲಾಗುವುದು. ಜಗತ್ತಿನ ಹಲವು ದೇಶಗಳಲ್ಲಿ ಇಂದೇ ಈದ್ ಹಬ್ಬವನ್ನು ಆಚರಿಸಲಾಗಿದೆ. ಆದರೆ, ಭಾರತದಲ್ಲಿ ಇಂದು ಚಂದ್ರನ ದರ್ಶನವಾಗಿರುವುದರಿಂದ ನಾಳೆ ಆಚರಿಸಲಾಗುವುದು.

Eid-Ul-Fitr: ಭಾರತದಲ್ಲೂ ಅರ್ಧ ಚಂದ್ರ ದರ್ಶನ; ನಾಳೆ ದೇಶಾದ್ಯಂತ ಈದ್ ಆಚರಣೆ
Eid Celebration
ಸುಷ್ಮಾ ಚಕ್ರೆ
|

Updated on:Mar 30, 2025 | 8:25 PM

Share

ನವದೆಹಲಿ, ಮಾರ್ಚ್ 30: ಇಂದು ಅರ್ಧ ಚಂದ್ರನ ದರ್ಶನವಾಗಿರುವ ಹಿನ್ನೆಲೆಯಲ್ಲಿ ನಾಳೆ (ಮಾರ್ಚ್ 31) ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುವುದು. ರಂಜಾನ್ ಉಪವಾಸ ಮಾಸದ ಮುಕ್ತಾಯವನ್ನು ಸೂಚಿಸುವ ಈದ್-ಉಲ್-ಫಿತರ್ (Eid-Ul-Fitr) ಅನ್ನು ಇಂದು ಸಂಜೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ನಮ್ಮ ದೇಶದಲ್ಲಿ ಆಚರಿಸಲಾಗುವುದು. ರಂಜಾನ್ ಮುಸ್ಲಿಮರ ಪವಿತ್ರ ಮಾಸವಾಗಿದೆ. ಭಾರತದಲ್ಲಿ, ಪವಿತ್ರ ರಂಜಾನ್ ತಿಂಗಳು ಮಾರ್ಚ್ 2 ರಂದು ಪ್ರಾರಂಭವಾಗಿದ್ದು, ಈ ತಿಂಗಳು ಮುಸ್ಲಿಮರು ಉಪವಾಸ ವ್ರತ ಮಾಡುತ್ತಾರೆ. ನಾಳೆ ಆ ವ್ರತ ಅಂತ್ಯವಾಗಲಿದೆ.

ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರ್ರಮ್ ಅಹ್ಮದ್ ಪಿಟಿಐಗೆ ತಿಳಿಸಿದಂತೆ ಮಸೀದಿಯ ರೂಟ್-ಎ-ಹಿಲಾಲ್ ಸಮಿತಿಯು ಅನೇಕ ಸ್ಥಳಗಳನ್ನು ಸಂಪರ್ಕಿಸಿದೆ. ಅಲ್ಲಿನ ಹಲವಾರು ಸ್ಥಳಗಳಲ್ಲಿ ಅರ್ಧ ಚಂದ್ರ ದರ್ಶನವಾಗಿದೆ. ಹೀಗಾಗಿ, ಮಾರ್ಚ್ 31ರ ಸೋಮವಾರ ದೇಶದಲ್ಲಿ ಈದ್ ಆಚರಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್

ಇದನ್ನೂ ಓದಿ
Image
ಯುಗಾದಿ ಹಬ್ಬ: ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು
Image
ಪವಿತ್ರ ರಂಜಾನ್ ತಿಂಗಳಲ್ಲಿ ಈ ತಪ್ಪುಗಳನ್ನು ಮಾಡಬೇಡಿ
Image
ಮುಸ್ಲಿಂ ಪವಿತ್ರ ರಂಜಾನ್ ತಿಂಗಳು ಆರಂಭಕ್ಕೆ ದಿನಗಣನೆ: ದರ್ಶನವಾಗದ ಚಂದ್ರ
Image
ರಂಜಾನ್​ನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್​ನಿಂದ ಬೇಗ ಹೊರಡಲು ಅವಕಾಶ

ಈದ್-ಉಲ್-ಫಿತರ್ ಅನ್ನು ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಇದು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಶವ್ವಾಲ್ ತಿಂಗಳ ಆರಂಭವನ್ನು ಸೂಚಿಸುವ ಅರ್ಧಚಂದ್ರನ ದರ್ಶನದಿಂದ ನಿರ್ಧರಿಸಲ್ಪಡುತ್ತದೆ. ರಂಜಾನ್ ತಿಂಗಳು ಮುಗಿಯುತ್ತಿದ್ದಂತೆ, ನಗರ ಮತ್ತು ಭಾರತದಾದ್ಯಂತ ಮುಸ್ಲಿಮರು ಈದ್ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: Eid-Ul-Fitr 2025: ಶಾಂತಿ, ಸೌಹಾರ್ದ ಸಾರುವ ಪವಿತ್ರ ರಂಜಾನ್‌ ಹಬ್ಬದ ಆಚರಣೆಯ ಹಿಂದಿನ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

ಅರ್ಧಚಂದ್ರನ ದರ್ಶನವು ರಂಜಾನ್ ಉಪವಾಸದಿಂದ ಈದ್ ಹಬ್ಬಕ್ಕೆ ಪರಿವರ್ತನೆಯನ್ನು ಸೂಚಿಸುತ್ತದೆ. ಲಕ್ಷಾಂತರ ಜನರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಇದಾಗಿದೆ. “ಉಪವಾಸ ಮುರಿಯುವ ಹಬ್ಬ” ಎಂದೂ ಕರೆಯಲ್ಪಡುವ ಈದ್-ಉಲ್-ಫಿತರ್ ಆಧ್ಯಾತ್ಮಿಕ ಚಿಂತನೆ, ಉದಾರತೆ ಮತ್ತು ಕೋಮು ಸಾಮರಸ್ಯದ ಸಮಯವಾಗಿದೆ. ವಿಶೇಷ ಈದ್ ಪ್ರಾರ್ಥನೆಯೊಂದಿಗೆ ಈ ದಿನವು ಪ್ರಾರಂಭವಾಗುತ್ತದೆ, ಅಲ್ಲಿ ಕುಟುಂಬಗಳು ಮತ್ತು ಸ್ನೇಹಿತರು ಒಟ್ಟುಗೂಡುತ್ತಾರೆ. ದಾನ ಅಥವಾ ಜಕಾತ್ ಈ ಈದ್-ಉಲ್-ಫಿತರ್ ಆಚರಣೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sun, 30 March 25