AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಹಬ್ಬ: ಬೆಂಗಳೂರು, ಮೈಸೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು

ಯುಗಾದಿ ಮತ್ತು ರಂಜಾನ್ ಹಬ್ಬಗಳಿಗೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಮೈಸೂರಿನಿಂದ ಬೆಳಗಾವಿ, ಕಲಬುರಗಿ ಮತ್ತು ಕಾರವಾರಗಳಿಗೆ ವಿಶೇಷ ರೈಲುಗಳನ್ನು ಚಾಲನೆ ಮಾಡುತ್ತಿದೆ. ಈ ರೈಲುಗಳ ಸಮಯಾಚರಣೆ ಮತ್ತು ನಿಲುಗಡೆಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಸುಲಭವಾಗಿ ಮಾಡಿಕೊಳ್ಳಲು ಈ ಮಾಹಿತಿ ಸಹಾಯಕವಾಗಿದೆ.

ಯುಗಾದಿ ಹಬ್ಬ: ಬೆಂಗಳೂರು, ಮೈಸೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು
ರೈಲು
ವಿವೇಕ ಬಿರಾದಾರ
|

Updated on: Mar 26, 2025 | 5:46 PM

Share

ಬೆಂಗಳೂರು/ಮೈಸೂರು, ಮಾರ್ಚ್​ 26: ಯುಗಾದಿ (Ugadi) ಮತ್ತು ರಂಜಾನ್ (Ramzan) ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆಯು (South Western Railway) ಬೆಂಗಳೂರು ಮತ್ತು ಮೈಸೂರಿನಿಂದ ರಾಜ್ಯ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಬಿಟ್ಟಿದೆ. ಬೆಳಗಾವಿ, ಕಾರವಾರ ಮತ್ತು ಕಲಬುರಗಿ ನಿಲ್ದಾಣಗಳಿಗೆ ವಿಶೇಷ ರೈಲುಗಳನ್ನು ಬಿಡಲಾಗಿದೆ. ಈ ವಿಶೇಷ ರೈಲು ವಿವರಗಳು ಈ ಕೆಳಗಿನಂತಿದೆ.

ಬೆಂಗಳೂರು-ಬೆಳಗಾವಿ ವಿಶೇಷ ರೈಲು

  • ರೈಲು ಸಂಖ್ಯೆ 06511: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 28ರಂದು ಸಂಜೆ 7:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುಪಲಿದೆ.
  • ರೈಲು ಸಂಖ್ಯೆ 06512: ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 29 ರಂದು ಸಂಜೆ 5.00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
  • ರೈಲು ಸಂಖ್ಯೆ 06513: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 30 ರಂದು ಸಂಜೆ 7:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿಯನ್ನು ತಲುವಲಿದೆ.
  • ರೈಲು ಸಂಖ್ಯೆ 06514: ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಮಾರ್ಚ್ 31 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗಿನ ಜಾವ 04:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ನಿಲುಗಡೆ: ಈ ವಿಶೇಷ ರೈಲುಗಳು (06511/12 ಮತ್ತು 06513/14) ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ಳಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಇದನ್ನೂ ಓದಿ: ಯುಗಾದಿ,ರಂಜಾನ್​​ ಹಬ್ಬಕ್ಕೆ ಬೆಂಗಳೂರಿನಿಂದ ವಿಶೇಷ ಬಸ್‌ : ಮುಂಗಡ ಬುಕ್ಕಿಂಗ್‌ಗೆ ಡಿಸ್ಕೌಂಟ್‌

ಇದನ್ನೂ ಓದಿ
Image
ಯುಗಾದಿ, ರಂಜಾನ್​ಗೆ ಊರಿಗೆ ಹೋಗುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ
Image
2026ರ ಹೊತ್ತಿಗೆ ಭಾರತದಲ್ಲಿ ನಡೆಯಬಹುದಾದ ಅನಾಹುತಗಳಿವು; ಗಾಯತ್ರಿ ದೇವಿ
Image
ವಿಶ್ವಾವಸು ಸಂವತ್ಸರದಲ್ಲಿ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ- ಗಾಯತ್ರಿ ದೇವಿ
Image
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​

ಬೆಂಗಳೂರು-ಕಲಬುರಗಿ ವಿಶೇಷ ರೈಲು

  • ರೈಲು ಸಂಖ್ಯೆ 06519: ಎಸ್​ಎಮ್​ವಿಟಿ ಬೆಂಗಳೂರು-ಕಲಬುರಗಿ ಎಕ್ಸ್​ಪ್ರೆಸ್​ ರೈಲು ಮಾರ್ಚ್ 28 ರಂದು ರಾತ್ರಿ 9:15ಕ್ಕೆ ಎಸ್​ಎಮ್​ವಿಟಿ ಬೆಂಗಳೂರಿನಿಂದ ಹೊರಟು ಮರುದಿವಸ ಮಾರ್ಚ್​ 29 ರಂದು ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.
  • ರೈಲು ಸಂಖ್ಯೆ 06520: ಕಲಬುರಗಿ-ಎಸ್​ಎಮ್​ವಿಟಿ ಬೆಂಗಳೂರು ಎಕ್ಸ್​ಪ್ರೆಸ್​ ರೈಲು ಮಾರ್ಚ್​ 29 ರಂದು ಬೆಳಗ್ಗೆ 9:35ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ. ಮೈಸೂರು-ಕಾರವಾರ ವಿಶೇಷ ರೈಲು
  • ರೈಲು ಸಂಖ್ಯೆ 06203: ಮೈಸೂರು-ಕಾರವಾರ ವಿಶೇಷ ರೈಲು ಮಾರ್ಚ್​ 28 ರಂದು ರಾತ್ರಿ 9:35ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಟು, ಮರುದಿನ ಮಾರ್ಚ್​ 29 ರಂದು ಸಂಜೆ 4 ಗಂಟೆಗೆ ಕಾರವಾರ ತಲುಪಲಿದೆ.
  • ರೈಲು ಸಂಖ್ಯೆ 06204: ಕಾರವಾರ-ಮೈಸೂರು ವಿಶೇಷ ರೈಲು ಮಾರ್ಚ್​ 29 ರಂದು ರಾತ್ರಿ 11:30 ಕ್ಕೆ ಕಾರವಾರ ರೈಲು ನಿಲ್ದಾಣದಿಂದ ಹೊರಟು, ಮರುದಿನ ಮಾರ್ಚ್​ 30 ರಂದು ಸಂಜೆ 4:40ಕ್ಕೆ ಮೈಸೂರು ತಲುಪಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ