Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ, ರಂಜಾನ್​ಗೆ ಊರಿಗೆ ಹೊರಡುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ, ಇಲ್ಲಿದೆ ವಿವರ

Bus ticket price hike: ಸಾಲು-ಸಾಲು ರಜೆ ಬಂತು ಎಂದರೆ ಬಸ್​ ಗಳಿಗೆ ಹಬ್ಬವೋ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ವಸೂಲಿ ಶುರುವಾಗುತ್ತದೆ. ಈಗ ಮತ್ತದೇ ಚಾಳಿ ಮುಂದುವರಿಕೆಯಾಗಿದೆ. ಹಿಂದೂಗಳ ಪಾಲಿನ ಹೊಸವರ್ಷ ಯುಗಾದಿ, ಮುಸ್ಲಿಮರ ರಂಜಾನ್ ಹಬ್ಬಕ್ಕೆ ಊರಿಗೆ ಹೊರಡುವ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ಬಸ್ ಟಿಕೆಟ್ ದರ ಬೆಂಗಳೂರಿನಿಂದ ಯಾವ ಊರಿಗೆ ಎಷ್ಟು ಹೆಚ್ಚಾಗಿದೆ ಎಂಬ ವಿವರ ಇಲ್ಲಿದೆ.

ಯುಗಾದಿ, ರಂಜಾನ್​ಗೆ ಊರಿಗೆ ಹೊರಡುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Kiran Surya
| Updated By: Ganapathi Sharma

Updated on:Mar 25, 2025 | 8:51 AM

ಬೆಂಗಳೂರು, ಮಾರ್ಚ್ 25: ಯುಗಾದಿ, ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ (Festival Season) ಬಂತು ಅಂದರೆ ಖಾಸಗಿ ಬಸ್ (Private Bus) ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ದುಪ್ಪಟ್ಟು ವಸೂಲಿಗೆ ಇಳಿದು ಬಿಡುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಗುನ್ನಾ ಇಡುತ್ತಾರೆ. ಇದೀಗ ಯುಗಾದಿ (Ugadi) ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ (Private Bus Fare Hike) ಶಾಕ್ ಎದುರಾಗಿದೆ. ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಸಿಗುತ್ತದೆ. ಹೀಗಾಗಿ ಮಾರ್ಚ್ 28 ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?

(ಎಸಿ ಮತ್ತು ನಾರ್ಮಲ್ ಬಸ್ ದರ ವಿವರ ರೂಪಾಯಿಗಳಲ್ಲಿ)

ಬೆಂಗಳೂರು-ದಾವಣಗೆರೆ

  • ಪ್ರಸ್ತುತ ದರ = 450-1300
  • ಹಬ್ಬದ ದರ = 750-5500

ಬೆಂಗಳೂರು-ಧಾರವಾಡ

  • ಪ್ರಸ್ತುತ ದರ = 600-1100
  • ಹಬ್ಬದ ದರ = 1069-5500

ಬೆಂಗಳೂರು – ಹುಬ್ಬಳ್ಳಿ

  • ಪ್ರಸ್ತುತ ದರ=475-1100
  • ಹಬ್ಬದ ದರ=1200-4200

ಬೆಂಗಳೂರು-ಬೆಳಗಾವಿ

  • ಪ್ರಸ್ತುತ ದರ=389-1200
  • ಹಬ್ಬದ ದರ=1129-5500

ಬೆಂಗಳೂರು-ಮಂಗಳೂರು

  • ಪ್ರಸ್ತುತ ದರ=650-1300
  • ಹಬ್ಬದ ದರ=1200-4500

ಬೆಂಗಳೂರು-ಕಲ್ಬುರ್ಗಿ

  • ಪ್ರಸ್ತುತ ದರ=750-1000
  • ಹಬ್ಬದ ದರ=1200-2200

ಬೆಂಗಳೂರು-ರಾಯಚೂರು

  • ಪ್ರಸ್ತುತ ದರ=650-990
  • ಹಬ್ಬದ ದರ=1100-2990

ಬೆಂಗಳೂರು-ಹಾಸನ

  • ಪ್ರಸ್ತುತ ದರ=463-1000
  • ಹಬ್ಬದ ದರ=750-1600

ಬೆಂಗಳೂರು-ಯಾದಗಿರಿ

  • ಪ್ರಸ್ತುತ ದರ=699-900
  • ಹಬ್ಬದ ದರ=1300-2200

ಬೆಂಗಳೂರು-ಶಿವಮೊಗ್ಗ

  • ಪ್ರಸ್ತುತ ದರ =500-990
  • ಹಬ್ಬದ ದರ =1199-1800

ಖಾಸಗಿ ಬಸ್​ಗಳ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ ಅವರನ್ನು ಪ್ರಶ್ನಿಸಿದಾಗ, ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಖಾಸಗಿ ಬಸ್​​ನವರಿಗೆ ಒಂದು ರೂಪಾಯಿ ಕೂಡ ಮೀಸಲಿಡಲಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಬಸ್ ಮಾಲೀಕರು ಹಬ್ಬ ಮಾಡಬೇಕಲ್ಲವೇ? ರೋಡ್ ಟ್ಯಾಕ್ಸ್, ಇನ್ಸುರೆನ್ಸ್, ಹೊಸ ಬಸ್ ಗಳ ಬೆಲೆ, ಸ್ಪೇರ್ ಪಾರ್ಟ್ಸ್ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಾಗಿದೆ. ಹಾಗಾಗಿ ಹಬ್ಬಗಳ ವೇಳೆ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ
Image
ಯುಗಾದಿ, ರಂಜಾನ್: ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲು
Image
ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
Image
ಭಾರತದಲ್ಲಿ ವಿಶ್ವದ ಅತಿಶಕ್ತಿಶಾಲಿ ಹೈಡ್ರೋಜನ್ ರೈಲು
Image
ಎಕ್ಸಪ್ರೆಸ್​ ರೈಲು ತುಮಕೂರಿನ ಸಂಪಿಗೆ ರಸ್ತೆ ಮತ್ತು ತಿಪಟೂರಿನಲ್ಲೂ ನಿಲುಗಡೆ

ಇದನ್ನೂ ಓದಿ: ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ರಾಜ್ಯದ ಈ ಜಿಲ್ಲೆಗಳಿಗೆ ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲು

ಒಟ್ಟಿನಲ್ಲಿ ಈ ಬಾರಿಯ ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ಏರಿಕೆ ಮಾಡಿ ಶಾಕ್ ಕೊಟ್ಟಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 am, Tue, 25 March 25