AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಿಂದ ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋಜನ್ ಟ್ರೈನ್: ಅಶ್ವಿನಿ ವೈಷ್ಣವ್

India has world's longest and most powerful hydrogen train: ವಿಶ್ವದಲ್ಲೇ ಅತಿ ಉದ್ದದ ಮತ್ತು ಶಕ್ತಿಶಾಲಿಯಾದ ಹೈಡ್ರೋಜನ್ ಟ್ರೈನು ಭಾರತದಲ್ಲಿ ಸಿದ್ಧವಾಗುತ್ತಿದೆ. ಸದ್ಯದಲ್ಲೇ ಪ್ರಯೋಗಾರ್ಥ ಚಾಲನೆ ಆಗಲಿದೆ. ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಚೀನಾ, ಜರ್ಮನಿ, ಬ್ರಿಟನ್ ಮತ್ತು ಫ್ರಾನ್ಸ್ ನಂತರ ಭಾರತ ಮಾತ್ರವೇ ಹೈಡ್ರೋಜನ್ ಟ್ರೈನ್ ಅನ್ನು ಹೊಂದಿರುವುದು.

ಭಾರತದಿಂದ ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋಜನ್ ಟ್ರೈನ್: ಅಶ್ವಿನಿ ವೈಷ್ಣವ್
ಹೈಡ್ರೋಜನ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 10, 2025 | 10:55 AM

Share

ನವದೆಹಲಿ, ಫೆಬ್ರುವರಿ 10: ಭಾರತೀಯ ರೈಲ್ವೆಯಿಂದ ವಿಶ್ವದಲ್ಲೇ ಅತಿ ಉದ್ದದ ಮತ್ತು ಅತಿಶಕ್ತಿಶಾಲಿ ಎನಿಸುವ ಹೈಡ್ರೋಜನ್ ಟ್ರೈನ್ ಸಿದ್ಧವಾಗುತ್ತಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳನ್ನು ನಿರ್ಮಿಸಲಾಗುತ್ತಿದ್ದು ಸದ್ಯದಲ್ಲೇ ಪ್ರಾಯೋಗಿಕವಾಗಿ ಇದರ ಸಂಚಾರ ನಡೆಯಲಿದೆ. ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಈ ಬಗ್ಗೆ ವಾರಾಂತ್ಯದಲ್ಲಿ ರಾಜ್ಯಸಭೆಗೆ ಲಿಖಿತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೈಡ್ರೋಜನ್ ರೈಲು ಸಂಪೂರ್ಣ ಮಾಲಿನ್ಯರಹಿತ ಸಂಚಾರ ವಾಹನವಾಗಿದೆ. ಭಾರತೀಯ ರೈಲ್ವೆ ಸಂಸ್ಥೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್ (ಆರ್​ಡಿಎಸ್​ಒ) ಈ ರೈಲಿನ ಎಂಜಿನ್ ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಿದೆ. ಜಿಂದ್ ಮತ್ತು ಸೋನೆಪತ್ ಸೆಕ್ಷನ್​ನ 89 ಕಿಮೀ ಉದ್ದದ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ರೈಲು ಪ್ರಾಯೋಗಿಕವಾಗಿ ಸಂಚರಿಸಲಿದೆ.

ಇದನ್ನೂ ಓದಿ: ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ಮೇಲೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ

ಜರ್ಮನಿ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಬಳಿಕ ಭಾರತವೇ ಹೈಡ್ರೋಜನ್ ಟ್ರೈನ್ ಅನ್ನು ಅಭಿವೃದ್ಧಿಪಡಿಸಿರುವುದು. ಆದರೆ, ಈ ಮೇಲಿನ ದೇಶಗಳಲ್ಲಿರುವ ಹೈಡ್ರೋಜನ್ ರೈಲುಗಳ ಸಾಮರ್ಥ್ಯ 500ರಿಂದ 600 ಹಾರ್ಸ್​ಪವರ್ (ಎಚ್​ಪಿ) ಮಾತ್ರವೇ ಇರುವುದು. ಭಾರತದ ಹೈಡ್ರೋಜನ್ ರೈಲಿನ ಕೆಪಾಸಿಟಿ 1,200 ಎಚ್​ಪಿಯಷ್ಟಿದೆ. ಇದು ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲೂ ಎನ್ನಲಾಗಿದೆ.

ಹೈಡ್ರೋಜನ್ ರೈಲುಗಳು ಹೇಗೆ ಕೆಲಸ ಮಾಡುತ್ತವೆ?

ಹೈಡ್ರೋಜನ್ ರೈಲುಗಳಲ್ಲಿ ಫುಯಲ್ ಸೆಲ್​ಗಳನ್ನು ಇರಿಸಲಾಗುತ್ತದೆ. ಇಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಎರಡೂ ಸಂಯೋಜನೆಗೊಂಡಾಗ ವಿದ್ಯುತ್ ಉತ್ಪಾದನೆ ಆಗುತ್ತದೆ. ಈ ವಿದ್ಯುತ್​ನಿಂದ ಮೋಟಾರು ಶಕ್ತಿ ಪಡೆದು ರೈಲನ್ನು ಚಲಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0

ಈ ಪ್ರಕ್ರಿಯೆಯಲ್ಲಿ ಮಾಲಿನ್ಯ ಹೊರಬರುವುದಿಲ್ಲ. ನೀರು ಬೈಪ್ರಾಡಕ್ಟ್ ಆಗಿರುತ್ತದೆ. ಡೀಸಲ್ ಚಾಲಿತ ರೈಲಿಗೆ ಹೋಲಿಸಿದರೆ ಇದರ ಶಬ್ದ ಮಾಲಿನ್ಯವೂ ಕಡಿಮೆಯೇ. ಹೀಗಾಗಿ, ಹೈಡ್ರೋಜನ್ ರೈಲು ಗಮನ ಸೆಳೆಯುತ್ತದೆ. ಇದಕ್ಕೆ ರೀಫುಯಲಿಂಗ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. 20 ನಿಮಿಷದಲ್ಲಿ ರೀಫುಯೆಲಿಂಗ್ ಮಾಡಿದರೆ 18 ಗಂಟೆ ಕಾಲ ಇದು ಸಂಚರಿಸಬಲ್ಲುದು ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ