Indian Railway: ಎಕ್ಸಪ್ರೆಸ್​ ರೈಲು ತುಮಕೂರಿನ ಸಂಪಿಗೆ ರಸ್ತೆ ಮತ್ತು ತಿಪಟೂರಿನಲ್ಲೂ ನಿಲುಗಡೆ

ನೈಋತ್ಯ ರೈಲ್ವೆ ಇತ್ತೀಚೆಗೆ ಪ್ರಮುಖ ಬೆಳವಣಿಗೆಯನ್ನು ಘೋಷಿಸಿದೆ. ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು ಇಂದಿನಿಂದ ಸಂಪಿಗೆ ರಸ್ತೆಯಲ್ಲಿ ನಿಲ್ಲಲಿದೆ. ಹಾಗೆಯೇ, ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ತಿಪಟೂರಿನಲ್ಲಿ ನಿಲ್ಲಲಿವೆ.

Indian Railway: ಎಕ್ಸಪ್ರೆಸ್​ ರೈಲು ತುಮಕೂರಿನ ಸಂಪಿಗೆ ರಸ್ತೆ ಮತ್ತು ತಿಪಟೂರಿನಲ್ಲೂ ನಿಲುಗಡೆ
ಸಂಪಿಕೆ ರಸ್ತೆ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Nov 15, 2024 | 8:02 AM

ಬೆಂಗಳೂರು, ನವೆಂಬರ್​ 15: ಎಕ್ಸ್​​ಪ್ರೆಸ್​​ ರೈಲುಗಳು (Express Trains) ಇನ್ಮುಂದೆ ತುಮಕೂರಿನ (Tumakur) ಸಂಪಿಗೆ ರಸ್ತೆ (Sampige Road) ಮತ್ತು ತಿಪಟೂರಿನಲ್ಲೂ (Tipatur) ನಿಲುಗಡೆಯಾಗಲಿವೆ. ಈ ಕುರಿತು ನೈಋತ್ಯ ರೈಲ್ವೆ ಸಾಮಾಜಿ ಮಾಧ್ಯಮ ಎಕ್ಸ್​ ಮೂಲಕ ಮಾಹಿತಿ ನೀಡಿದೆ. ಯಶವಂತಪುರ ಮತ್ತು ಚಿಕ್ಕಮಗಳೂರು ನಡುವೆ ಸಂಚರಿಸುವ ಎಕ್ಸೆಸ್ ರೈಲು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಇಂದಿನಿಂದ (ನ.15) ನಿಲುಗಡೆಯಾಗಲಿದೆ.

ಕೆಎಸ್‌ಆರ್ ಬೆಂಗಳೂರು ಮತ್ತು ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಮತ್ತು ಶಿವಮೊಗ್ಗ ಟೌನ್ ನಡುವೆ ಚಲಿಸುವ ಜನಶತಾಬಿ ಎಣ್ಣೆಸ್ ರೈಲುಗಳು ತಿಪಟೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ರೈಲು ಸಮಯ ಬದಲಾವಣೆ

ರೈಲು ನಿಲುಗಡೆಯ ಸಮಯ

  1. ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್​ಪ್ರೆಸ್​​ ರೈಲು ಸಂಜೆ 05:04ಕ್ಕೆ ಸಂಪಿಗೆ ರಸ್ತೆ ನಿಲ್ದಾಣವನ್ನು ತಲುಪಿ ಮತ್ತೆ 05:05ಕ್ಕೆ ಹೊರಡಲಿದೆ.
  2. ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್​ಪ್ರೆಸ್​ ರೈಲು ಬೆಳಗ್ಗೆ 11:13ಕ್ಕೆ ಸಂಪಿಗೆ ರಸ್ತೆ ನಿಲ್ದಾಣವನ್ನು ತಲುಪಿ ನಂತರ 11:14ಕ್ಕೆ ಹೊರಡಲಿದೆ.
  3. ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್ಎಸ್ ಹುಬ್ಬಳ್ಳಿ ಜನಶತಾಬಿ ಎಕ್ಸ್​ಪ್ರೆಸ್​ ರೈಲು ಬೆಳಗ್ಗೆ 07:49 ತಿಪಟೂರು ನಿಲ್ದಾಣವನ್ನು ತಲುಪಿ ನಂತರ 07:50ಕ್ಕೆ ಹೊರಡಲಿದೆ.
  4. ರೈಲು ಸಂಖ್ಯೆ 12080 ಎಸ್‌ಎಸ್‌ಎಸ್‌ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು ಜನಶತಾಬಿ ಎಕ್ಸ್​ಪ್ರೆಸ್​ ರೈಲು ಸಂಜೆ 06:34ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ನಂತರ 06:35ಕ್ಕೆ ಹೊರಡಲಿದೆ.
  5. ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬಿ ಎಕ್ಸ್​ಪ್ರೆಸ್​ ರೈಲು ರಾತ್ರಿ 07:09ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ನಂತರ 07:10ಕ್ಕೆ ಹೊರಡಲಿದೆ.
  6. ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬಿ ಎಕ್ಸ್​ಪ್ರೆಸ್​ ರೈಲು ಬೆಳಗ್ಗೆ 07:14ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ನಂತರ 07:15ಕ್ಕೆ ಹೊರಡಲಿದೆ.

ಟ್ವಿಟರ್​ ಪೋಸ್ಟ್​

ಈ ಹೆಚ್ಚುವರಿ ನಿಲುಗಡೆಯು ಸಂಪಿಗೆ ರಸ್ತೆ ಮತ್ತು ತಿಪಟೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಪ್ರವೇಶವನ್ನು ಒದಗಿಸುತ್ತದೆ. ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:58 am, Fri, 15 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ