ರಾಜಣ್ಣ ಪ್ರಸ್ತಾಪಿಸಿದ ಹನಿ ಟ್ರ್ಯಾಪ್ ಪ್ರಕರಣ ಕರ್ನಾಟಕ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣ: ಸುರೇಶ್ ಗೌಡ
ಪೀಠಕ್ಕೆ ಆಗೌರವ ತೋರುವ ಕೆಲಸ ಬಿಜೆಪಿ ಶಾಸಕರಿಂದ ನಡೆದಿಲ್ಲ, ಅದರ ಬಗ್ಗೆ ತಮಗೆ ಆಪಾರವಾದ ಗೌರವವಿದೆ, ವಿಧಾನ ಸಭೆಯ ಮೇಲ್ಮನೆ ಮತ್ತು ಕೆಳಮನೆಯನ್ನು ಬಿಜೆಪಿ ಪ್ರಜಾಪ್ರಭುತ್ವದ ದೇಗುಲಗಳೆಂದು ಭಾವಿಸುತ್ತದೆ, ಸದನವನ್ನು ನಿರ್ವಹಿಸುವುದು ಕಷ್ಟದ ಕೆಲಸವೆಂದು ತಮಗೂ ಗೊತ್ತಿದೆ, ಆದರೆ ಸ್ಪೀಕರ್ ತಮ್ಮನ್ನು ಸಸ್ಪೆಂಡ್ ಮಾಡಿದ್ದು ರಾಜ್ಯ ಸಂಸದೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಸುರೇಶ್ ಗೌಡ ಹೇಳಿದರು.
ಬೆಂಗಳೂರು, 26 ಮಾರ್ಚ್: ಮಾರ್ಚ್ 21 ರಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ಅವರು 6 ತಿಂಗಳು ಕಾಲ ಅಮಾನತುಗೊಳಿಸಿರುವ 18 ಬಿಜೆಪಿ ಶಾಸಕರಲ್ಲಿ ಒಬ್ಬರಾಗಿರುವ ಬಿ ಸುರೇಶ್ ಗೌಡ, ಹನಿ ಟ್ರ್ಯಾಪ್ ಮತ್ತು ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ನೀಡಿರುವ ಮೀಸಲಾತಿ ಹಿನ್ನೆಲೆ ಹೋರಾಟ ನಡೆಸುತ್ತಿರುವಾಗ ಸಸ್ಪೆಂಡ್ ಮಾಡಿರುವುದು ವಿಷಾದಕರ ಎಂದು ಹೇಳಿದರು. ಸಚಿವ ಕೆಎನ್ ರಾಜಣ್ಣ ಅವರು ಸದನಲ್ಲಿ ಪ್ರಸ್ತಾಪ ಮಾಡಿದ್ದು ಕರ್ನಾಟಕ ಇತಿಹಾಸದಲ್ಲಿ ಕಾಮಕೇಳಿಗೆ ಸಂಬಂಧಿಸಿದ ಅತಿ ದೊಡ್ಡ ಸ್ಕ್ಯಾಮ್, ಸಂಪುಟದಲ್ಲಿ ಕೂಡ ಚರ್ಚಿಸದೆ ಸಚಿವರು ಸದನದಲ್ಲಿ ಹೇಳಿದ್ದನ್ನು ಖಾದರ್ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಸುರೇಶ್ ಗೌಡ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗುವ ಆಸೆ ನನಗಿಲ್ಲ, ಬಸನಗೌಡ ಯತ್ನಾಳ್ಗೆ ಪಟ್ಟ ಕಟ್ಟಿದರೆ ತಕರಾರಿಲ್ಲ: ಸುರೇಶ್ ಗೌಡ, ಬಿಜೆಪಿ ಶಾಸಕ