ರಾಜ್ಯಾಧ್ಯಕ್ಷನಾಗುವ ಆಸೆ ನನಗಿಲ್ಲ, ಬಸನಗೌಡ ಯತ್ನಾಳ್ಗೆ ಪಟ್ಟ ಕಟ್ಟಿದರೆ ತಕರಾರಿಲ್ಲ: ಸುರೇಶ್ ಗೌಡ, ಬಿಜೆಪಿ ಶಾಸಕ
ಮೋಸಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್, ಚುನಾವಣೆ ಸಮಯದಲ್ಲಿ ಶ್ರೀನಿವಾಸ್ ಮತ್ತು ವಾಸು ಅವರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಜೆಡಿಎಸ್ ನಿಂದ ಸೆಳೆದುಕೊಂಡರು, ಇಬ್ಬರಿಗೂ ಭ್ರಮನರಸನವಾಗಿದೆ., ವಾಸು ಮಂತ್ರಿ ಸ್ಥಾನವನ್ನೇನೂ ಕೇಳಿರಲಿಲ್ಲ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಕಾದಿದೆ ಎಂದು ಸುರೇಶ್ ಗೌಡ ಹೇಳಿದರು.
ತುಮಕೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ತಾನು ಪಕ್ಷದ ಒಳಿತನ್ನು ಬಯಸುವವನು, ಬಣ ರಾಜಕೀಯದಲ್ಲಿ ಯಾವತ್ತೂ ವಿಶ್ವಾಸವಿಟ್ಟವನಲ್ಲ, ಪಕ್ಷದ ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ ಅವರನ್ನು ಮುಂದುವರಿಸಿದರೆ ತನಗೇನೂ ಸಮಸ್ಯೆಯಿಲ್ಲ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೂ ತಕರಾರಿಲ್ಲ ಎಂದು ಹೇಳಿದರು. ಅಧ್ಯಕ್ಷನನ್ನು ಆಯ್ಕೆ ಮಾಡುವ ಅಧಿಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಟ್ಟಿದ್ದು, ತನಗೆ ರಾಜ್ಯಾಧ್ಯಕ್ಷನಾಗುವ ಆಸೆ ಖಂಡಿತ ಇಲ್ಲ ಎಂದು ಸುರೇಶ್ ಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:ನನ್ನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒಂದು ರೂ. ಯನ್ನೂ ನೀಡಿಲ್ಲ: ಸುರೇಶ್ ಗೌಡ