ಮತ್ತೆ ಹುಟ್ಟಿ ಬರ್ತಿನಿ: ಗೋಡೆ ಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಯುವತಿ!
ಎಂಬಿಎ ಪದವೀಧರೆಯೊಬ್ಬಳು ಪಿ.ಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ (Belagavi) ನಡೆದಿದೆ. ವಿಜಯಪುರ (Vijayapura) ಜಿಲ್ಲೆಯ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿ. ವಿಜಯಪುರದಲ್ಲಿಯೇ ಎಂಬಿಎ ಪದವಿ ಓದಿದ್ದ ಐಶ್ವರ್ಯ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದಳು. ಆದರೆ, ಅದೇನಾಯ್ತೋ ಏನೋ ಇಂದು (ಮಾರ್ಚ್ 26) ಬೆಳಗ್ಗೆ ಪಿಜಿಯಲ್ಲಿ ನೇಣಿಗೆ ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದರ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಗೋಡೆ ಮೇಲೆ ಬರಹ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ, (ಮಾರ್ಚ್ 26): ಎಂಬಿಎ ಪದವೀಧರೆ ಐಶ್ವರ್ಯ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಇಂದು(ಮಾರ್ಚ್ 26) ಬೆಳಕಿಗೆ ಬಂದ ಬೆನ್ನಲ್ಲೇ ಇದೇ ಬೆಳಗಾವಿ(Belagavi) ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 22 ವರ್ಷದ ಜಾಹ್ನವಿ, ನನ್ನ ಸಾವಿಗೆ ನಾನೇ ಕಾರಣವೆಂದು ಗೋಡೆ ಮೇಲೆ ಬರೆದು ಬಳಿಕ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಮನೆಯಲ್ಲೇ ನೇಣಿಗೆ ಶರಣಾಗಿದ್ದು, ನನ್ನ ಸಾವಿಗೆ ನಾನೇ ಕಾರಣ. ಮತ್ತೆ ಹುಟ್ಟಿ ಬರುತ್ತೇನೆಂದು ಗೋಡೆ ಮೇಲೆ ಬರೆದು ಆತ್ಮಹತ್ಯೆ ಶರಣಾಗಿದ್ದಾಳೆ.
ನನ್ನ ಸಾವಿಗೆ ನಾನೇ ಕಾರಣ, ನನ್ನ ಮೇಲೆ ಯಾರೂ ವಿಶ್ವಾಸವಿಡುತ್ತಿಲ್ಲ. ನನಗೆ ಯಾರೂ ಸ್ನೇಹಿತರು ಇಲ್ಲ, ಅಪ್ಪ ಅಮ್ಮ ಕೂಡ ನಂಬುತ್ತಿಲ್ಲ. ಪೋಷಕರು ನನ್ನ ಮಾತಿಗೆ ಸ್ಪಂದಿಸುತ್ತಿಲ್ಲ, ಕಾಳಜಿ ವಹಿಸುತ್ತಿಲ್ಲ. ಮತ್ತೆ ಹುಟ್ಟಿ ಬರುತ್ತೇನೆ ಎಂದು ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ತುಮಕೂರು: ಗರ್ಭಿಣಿಯಾಗಿದ್ದಾಗ್ಲೇ ಪರಪುರುಷನ ಜತೆ ಓಡಿಹೋಗಿದ್ದ ಮಹಿಳೆ, ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ಮಗುವಿನ ಕೊಂದ ಮಲತಂದೆ
ಪೋಷಕರು ಹಾಸನದಲ್ಲಿ ಕೆಲಸ ಮಾಡುತ್ತಿದ್ದರೆ, ಜಾಹ್ನವಿ ಓದಲು ಬೆಳಗಾವಿಯಲ್ಲಿ ಚಿಕ್ಕಪ್ಪನ ಮನೆ ಮೇಲೆ ರೂಮ್ ಮಾಡಿಕೊಂಡಿದ್ದಳು. ಆದ್ರೆ, ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿ ಜಾಹ್ನವಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿಲಾಗಿದ್ದು, ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಬಿಎ ಪದವೀಧರೆ ಆತ್ಮಹತ್ಯೆ
ಬೆಳಗಾವಿ: ಮತ್ತೊಂದೆಡೆ ಇದೇ ಬೆಳಗಾವಿಯಲ್ಲಿ ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು (ಮಾರ್ಚ್ 26) ಬೆಳಕಿಗೆ ಬಂದಿದೆ. ವಿಜಯಪುರ (Vijayapura) ಜಿಲ್ಲೆಯ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿ. ವಿಜಯಪುರದಲ್ಲಿಯೇ ಎಂಬಿಎ ಪದವಿ ಓದಿದ್ದ ಐಶ್ವರ್ಯ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದಳು. ಬೆಳಗಾವಿಯ ಕಂಪನಿಯೊಂದರಲ್ಲಿ ಕಲಿಕಾ ತರಬೇತಿಯಲ್ಲಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ನೆಹರು ನಗರದ ಪಿ.ಜಿಯಲ್ಲಿ ವಾಸವಿದ್ದಳು. ಆದ್ರೆ, ಈಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇನ್ನು ಆತ್ಮಹತ್ಯೆಗೆ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಂಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾತ್ರವಲ್ಲದೇ ಯುವತಿ ಸ್ನೇಹಿತ ಕೂಡ ಪಿ.ಜಿಗೆ ಬಂದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲವ್ ಬ್ರೇಕಪ್ ಯುವತಿ ಆತ್ಮಹತ್ಯೆಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.