ಬೆಳಗಾವಿ: ಸಾರ್ವಜನಿಕವಾಗಿ ಬಟ್ಟೆ ಹರಿದು ಅತ್ತೆ ಮೇಲೆ ಅಳಿಯನಿಂದ ಹಲ್ಲೆ
ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಅಳಿಯನೊಬ್ಬ ತನ್ನ ಅತ್ತೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದಿದ್ದಾನೆ. ಪತ್ನಿಯನ್ನು ಕಳುಹಿಸುವಂತೆ ಪತಿ ಒತ್ತಾಯಿಸಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ ಮತ್ತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ, ಮಾರ್ಚ್ 26: ಸಾರ್ವಜನಿಕವಾಗಿ ಬಟ್ಟೆ ಹರಿದು ಅತ್ತೆ (Mother-in-law) ಮೇಲೆ ಅಳಿಯ ಹಲ್ಲೆ ಮಾಡಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಅಳಿಯ ಭೈರು ಮೇತ್ರಿ ಹಾಗೂ ಕುಟುಂಬಸ್ಥರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹರಿದ ನೈಟಿಯಲ್ಲೇ ಮಹಿಳೆ ಕಮಿಷನರ್ ಕಚೇರಿಗೆ ತೆರಳಿ, “ನನ್ನ ಅಳಿಯ ಹಾಗೂ ಅವರ ಕುಟುಂಬಸ್ಥರು ನನ್ನ ಬಟ್ಟೆ ಹರಿದು, ರಸ್ತೆಯಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ” ಎಂದು ದೂರು ನೀಡಿದ್ದಾರೆ.
ಮಹಿಳೆಯ ಪುತ್ರಿ ಗರ್ಭಿಣಿಯಿದ್ದ, 12 ದಿನಗಳ ಹಿಂದೆ ಮಗಳಿಗೆ ಹೆರಿಗೆಯಾಗಿತ್ತು. ಗಂಡು ಮಗು ಜನಿಸುವಂತೆ ಪತ್ನಿಯನ್ನು ಕಳುಹಿಸುವಂತೆ ಪತಿ ಒತ್ತಾಯ ಮಾಡುತ್ತಿದ್ದನು. 4 ತಿಂಗಳ ಬಳಿಕ ಕಳುಹಿಸ್ತೇವೆ ಎಂದು ಅತ್ತೆ, ಅಳಿಯನಿಗೆ ಹೇಳಿದ್ದಾರೆ. ಇಷ್ಟಕ್ಕೆನೇ ಅಳಿಯ, ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಮತ್ತು ಇಬ್ಬರು ಬಾಲಕಿಯರು ಸೇರಿದಂತೆ ಐವರ ಮೇಲೆ ಹಲ್ಲೆ ಮಾಡುರುವ ಮಾಡುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಸುಂಡೆ ಬರುವ ಹಾಗೆ ಹೊಡೆದ ಆರೋಪ
ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಬಾಸುಂಡೆ ಬರುವ ಹಾಗೆ ಹೊಡೆದ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕರಾದ ರೂಪಾ ಹಾಗೂ ಪ್ರಸನ್ನ ವಿರುದ್ಧ ಥಳಿಸಿದ ಆರೋಪವಿದೆ. ಸಮವಸ್ತ್ರ ಬಿಚ್ಚಿ ನೋಡಿದಾಗ ವಿದ್ಯಾರ್ಥಿ ಮೈತುಂಬ ಬಾಸುಂಡೆ ಮೂಡಿದೆ. ಶಿಕ್ಷಕರ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗೆ ಹೊಡೆದಿರುವ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧ ಮುಚ್ಚಿಟ್ಟುಕೊಳ್ಳಲು ಹುಟ್ಟಿದ ಕೂಸು ತಿಪ್ಪೆಗೆ: ಇಬ್ಬರು ಅರೆಸ್ಟ್
ಅತ್ತೆ ಮೇಲೆ ಸೊಸೆಯಿಂದ ಹಲ್ಲೆ
ಸೊಸೆ, ಅತ್ತೆ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ನಡೆದಿತ್ತು. ಅತ್ತೆ ಜಾನವ್ವ ಹುದಲಿ (80) ಮೇಲೆ ಸೊಸೆ ಶಿಲ್ಪಾ ನಾಗರಾಜ್ ಹುದಲಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ತಾಯಿ ಜಾನವ್ವ ಮನೆಗೆ ಪುತ್ರ ನಾಗರಾಜ್ ಊಟಕ್ಕೆ ಹೋಗಿದ್ದರು. ಇದನ್ನೇ ಪ್ರಶ್ನಿಸಿ ಪತಿಯೊಂದಿಗೆ ಪತ್ನಿ ಶಿಲ್ಪಾ ಗಲಾಟೆ ಆರಂಭಿಸಿದ್ದರು. ಗಂಡ, ಹೆಂಡತಿ ಜಗಳದ ನಡುವೆ ಮಾಡಿದ ಅತ್ತೆ ಜಾನವ್ವ ಹುದಲಿ ಮತ್ತು ನಾದಿನಿ ಪ್ರವೇಶಿಸಿದ್ದರು. ಈ ವೇಳೆ ಸೊಸೆ ಶಿಲ್ಪಾ ನಾಗರಾಜ್ ಮೇಲೆ ಕೈಗೆ ಸಿಕ್ಕ ಕುಡುಗೋಲಿನಿಂದ ಅತ್ತೆ ಜಾನವ್ವ ಹುದಲಿ ಮೇಲೆ ಹಲ್ಲೆ ಮಾಡಿದ್ದರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.