Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಿಗೆ ಮಾತಾಡಿದ್ರೆ ನಿನ್ನನ್ನೂ ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕ್ತೀನಿ, ಗಂಡನಿಗೆ ಪತ್ನಿಯ ಬೆದರಿಕೆ

ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಘಟನೆಯಂತೆ ಅತಿಯಾಗಿ ಮಾತಾಡಿದ್ರೆ ನಿನ್ನನ್ನೂ ಕೂಡ ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕುತ್ತೀನಿ ಎಂದು ಮಹಿಳೆಯೊಬ್ಬಳು ತನ್ನ ಪತ್ನಿಗೆ ಬೆದರಿಕೆ ಹಾಕಿರುವ ಘಟನೆ ಗೊಂಡಾದಲ್ಲಿ ನಡೆದಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್​ನಲ್ಲಿ ಸೌರಭ್ ರಜಪೂತ್ ಎಂಬಾತನನ್ನು ಆತನ ಪತ್ನಿ ಮುಸ್ಕಾನ್ ಹಾಗೂ ಮತ್ತವಳ ಪ್ರೇಮಿ ಸಾಹಿಲ್ ಸೇರಿಕೊಂಡು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್​ ಡ್ರಮ್​ನಲ್ಲಿ ಹಾಕಿ ಸೀಲ್ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶಕ್ಕೆ ಟ್ರಿಪ್​ಗೆ ಹೋಗಿದ್ದರು. ಇದೇ ರೀತಿಯಲ್ಲಿ ನಿನ್ನನ್ನು ಕೂಡ ಕಲೆ ಮಾಡುತ್ತೀನಿ ಎಂದು ಗೊಂಡಾದ ಮಹಿಳೆಯೊಬ್ಬಳು ಬೆದರಿಕೆ ಹಾಕಿದ್ದು, ಇದೀಗ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಹೆಚ್ಚಿಗೆ ಮಾತಾಡಿದ್ರೆ ನಿನ್ನನ್ನೂ ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕ್ತೀನಿ, ಗಂಡನಿಗೆ ಪತ್ನಿಯ ಬೆದರಿಕೆ
ಪೊಲೀಸ್ Image Credit source: Hindustan Times
Follow us
ನಯನಾ ರಾಜೀವ್
|

Updated on: Mar 31, 2025 | 7:54 AM

ಗೊಂಡಾ, ಮಾರ್ಚ್​ 31: ‘‘ಹೆಚ್ಚಿಗೆ ಮಾತಾಡಿದ್ರೆ ನಿನ್ನನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕ್ತೀನಿ’’ ಎಂದು ಮಹಿಳೆಯೊಬ್ಬಳು ಗಂಡನಿಗೆ ಬೆದರಿಕೆ(Threat) ಹಾಕಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ. ಶನಿವಾರ ಎರಡೂ ಕಡೆಯಿಂದ ದೂರುಗಳು ಬಂದಿದ್ದು, ತನಿಖೆಯ ನಂತರ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್​ನಲ್ಲಿ ಸೌರಭ್ ರಜಪೂತ್ ಎಂಬಾತನನ್ನು ಆತನ ಪತ್ನಿ ಮುಸ್ಕಾನ್ ಹಾಗೂ ಮತ್ತವಳ ಪ್ರೇಮಿ ಸಾಹಿಲ್ ಸೇರಿಕೊಂಡು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸಿಮೆಂಟ್​ ಡ್ರಮ್​ನಲ್ಲಿ ಹಾಕಿ ಸೀಲ್ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶಕ್ಕೆ ಟ್ರಿಪ್​ಗೆ ಹೋಗಿದ್ದರು. ಇದೇ ರೀತಿಯಲ್ಲಿ ನಿನ್ನನ್ನು ಕೂಡ ಕಲೆ ಮಾಡುತ್ತೀನಿ ಎಂದು ಗೊಂಡಾದ ಮಹಿಳೆಯೊಬ್ಬಳು ಬೆದರಿಕೆ ಹಾಕಿದ್ದು, ಇದೀಗ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಮೂಲತಃ ಝಾನ್ಸಿ ನಿವಾಸಿ ಮತ್ತು ಪ್ರಸ್ತುತ ಗೊಂಡಾದಲ್ಲಿ ಜಲ ನಿಗಮ್‌ನಲ್ಲಿ ಉದ್ಯೋಗದಲ್ಲಿರುವ ಜೆಇ ಧರ್ಮೇಂದ್ರ ಕುಶ್ವಾಹ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಮ್ಮ ಪತ್ನಿ ಮಾಯಾ ಮೌರ್ಯ ಮತ್ತು ಆಕೆಯ ಪ್ರಿಯಕರ ನೀರಜ್ ಮೌರ್ಯ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ
Image
ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ?
Image
ಪ್ರೇಯಸಿಯನ್ನು ಕೊಂದ ಹೈದರಾಬಾದ್ ಅರ್ಚಕನಿಗೆ ಜೀವಾವಧಿ ಶಿಕ್ಷೆ
Image
ಮೀರತ್​ ಕೊಲೆ ಪ್ರಕರಣ: ಮುಸ್ಕಾನ್​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ
Image
ಗರ್ಭಿಣಿಯಾಗಿದ್ದಾಗ್ಲೇ ಬೇರೊಬ್ಬನ ಓಡಿಹೋಗಿದ್ದ ಮಹಿಳೆ, ಮಗುವಿನ ಕೊಂದ ಮಲತಂದೆ

ಮತ್ತಷ್ಟು ಓದಿ: 2ನೇ ಮದ್ವೆಯಾದ ಪತಿ: ಮೊದಲ ಹೆಂಡ್ತಿ ಜೀವನಾಂಶ ಕೇಳಿದ್ದಕ್ಕೆ ಗಂಡ ರಾಕ್ಷಸ ಅವತಾರ

ಧರ್ಮೇಂದ್ರ ಅವರ ಪ್ರಕಾರ, 2016 ರಲ್ಲಿ, ಅವರು ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಅವರನ್ನು ಪ್ರೇಮ ವಿವಾಹವಾಗಿದ್ದರು ಮತ್ತು 2022 ರಲ್ಲಿ, ಅವರು ಮಾಯಾ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿ, ಮನೆ ನಿರ್ಮಾಣದ ಒಪ್ಪಂದವನ್ನು ಅವರ ಪತ್ನಿಯ ಸಂಬಂಧಿ ನೀರಜ್ ಮೌರ್ಯ ಅವರಿಗೆ ನೀಡಿದರು. ಈ ಸಮಯದಲ್ಲಿ, ಮಾಯಾ ಮತ್ತು ನೀರಜ್ ನಡುವಿನ ಆತ್ಮೀಯತೆ ಹೆಚ್ಚಾಯಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನೀರಜ್ ಅವರ ಪತ್ನಿಯ ಮರಣದ ನಂತರ ಇಬ್ಬರ ನಡುವಿನ ಸಂಬಂಧವು ಗಾಢವಾಯಿತು.

2024ರ ಜುಲೈ 7ರಂದು ಅವರಿಬ್ಬರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಅವಳನ್ನು ಥಳಿಸಿದೆ ಆಕೆ ಮನೆ ಬಿಟ್ಟು ಹೋಗಿದ್ದಳು. ಆಗಸ್ಟ್​ 25ರಂದು ಆಕೆ ನೀರಜ್​ ಜತೆ ಮನೆಗೆ ಬಂದು ಬಲವಂತವಾಗಿ ಪ್ರವೇಶಿಸಿದ್ದಾಳೆ. ನಂತರ ಆಕೆ 15 ಗ್ರಾಂ ತೂಕದ ಚಿನ್ನದ ಸರ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾಳೆ. ಇದರ ಬಗ್ಗೆ ಧರ್ಮೇಂದ್ರ ಸೆಪ್ಟೆಂಬರ್ 1, 2024 ರಂದು ಲಿಖಿತ ದೂರು ನೀಡಿದ್ದರು.

ಮಾಯಾ ಧರ್ಮೇಂದ್ರನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳು ಮತ್ತು ಅವಳು ಪ್ರತಿಭಟಿಸಿದಾಗ,  ತನ್ನ ಪ್ರಿಯಕರ ನೀರಜ್ ಜೊತೆಗೂಡಿ ಇಬ್ಬರನ್ನೂ (ತಾಯಿ-ಮಗ) ಥಳಿಸಿದ್ದಳು . ಈ ಸಮಯದಲ್ಲಿ ಮಾಯಾ ನೀನು ಹೆಚ್ಚು ಮಾತನಾಡಿದರೆ ಮೀರತ್ ಕೊಲೆ ಪ್ರಕರಣದಂತೆ ನಿನ್ನನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ವಾಸ್ತವವಾಗಿ ಧರ್ಮೇಂದ್ರ ಆಕೆಗೆ ಕಿರುಕುಳ ನೀಡುತ್ತಿದ್ದಾನೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆಕೆ ದೂರು ಕೊಟ್ಟಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
ಸಮಾಜ ಸ್ವಾಮೀಜಿಯನ್ನು ಕಡೆಗಣಿಸಿಲಾರಂಭಿಸಿದರೆ ಅಚ್ಚರಿಯಿಲ್ಲ: ವಿಜುಗೌಡ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ