Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ? ಆ ರಾತ್ರಿ ನಡೆದಿದ್ದೇನು? ಕೊಲೆಗೆ ಕಾರಣ ಬಹಿರಂಗ

ಬೆಂಗಳೂರಿನ ಹುಳಿಮಾವು ಸಮೀಪದಲ್ಲಿ ನಡೆದ ಗೌರಿ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಹಲವು ವಿಚಾರಗಳು ತಿಳಿದಿವೆ.ಗೌರಿ ಮತ್ತು ರಾಕೇಶ್ ಪ್ರೀತಿಸಿ ಮದುವೆಯಾಗಿದ್ದಾರೆ.ಕುಟುಂಬದ ವಿರೋಧದ ನಡುವೆಯೋ ಗೌರಿ ಮತ್ತು ರಾಕೇಶ್​ ಮದುವೆಯಾದರೂ, ಅವರ ಮಧ್ಯೆ ಗಲಾಟೆಯಾಗಿದ್ದು ಏಕೆ? ಇಲ್ಲಿದೆ ವಿವರ

ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ? ಆ ರಾತ್ರಿ ನಡೆದಿದ್ದೇನು? ಕೊಲೆಗೆ ಕಾರಣ ಬಹಿರಂಗ
ಆರೋಪಿ ರಾಕೇಶ್​, ಮೃತ ಗೌರಿ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on: Mar 28, 2025 | 5:33 PM

ಬೆಂಗಳೂರು, ಮಾರ್ಚ್​ 28: ಬೆಂಗಳೂರಿನ (Bengaluru) ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ (Gowri) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ತನಿಖೆ ವೇಳೆ ಹಲವು ವಿಚಾರಗಳು ಬಹಿರಂಗಗೊಂಡಿವೆ. ಮೃತ ಗೌರಿ ಮೂಲತಃ ಬೆಳಗಾವಿದವರು (Belagavi). ಗೌರಿ ಪತಿ, ಆರೋಪಿ ರಾಕೇಶ್​ ಮುಂಬೈ ಮೂಲದವನು. ಗೌರಿ ಐದು ವರ್ಷದ ಮಗುವಿದ್ದಾಗ ತಂದೆ ಮೃತಪಟ್ಟಿದ್ದಾರೆ. ಗೌರಿ ತಾಯಿಯ ಆಶ್ರಯದಲ್ಲಿ ಬೆಳದಿದ್ದರು. ಆರೋಪಿ ರಾಕೇಶ್ ಮೃತ ಗೌರಿಯ ತಾಯಿಯ ಅಣ್ಣನ ಮಗನಾಗಿದ್ದಾನೆ. ಅಂದ್ರೆ, ವರಸೆಯಲ್ಲಿ ಗೌರಿಗೆ ರಾಕೇಶ್​ ಸೋದರಮಾವನ ಮಗನಾಗುತ್ತಾನೆ. ಗೌರಿ ಮತ್ತು ರಾಕೇಶ್​ ಪ್ರೀತಿಸಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಗೌರಿ ತಾಯಿ ಮತ್ತು ಸಹೋದರ ಗಣೇಶ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಗೌರಿ ಮತ್ತು ಗಣೇಶ ವಿವಾಹವಾಗಿದ್ದರು.

ಮದುವೆಯ ನಂತರ ಗಂಡನ ಮನೆಯವರಿಗೂ ಗೌರಿಗೂ ಹೊಂದಾಣಿಕೆಯಾಗಿರಲಿಲ್ಲ. ಆಗ, ನಾವಿಬ್ಬರೂ ಬೇರೆ ಹೋಗಿ ಜೀವನ ಮಾಡುತ್ತೇವೆ ಎಂದು ಗೌರಿ ಹಾಗೂ ರಾಕೇಶ್ ಹೇಳಿದ್ದಾರೆ. ಮೃತ ಗೌರಿ ಮಾಸ್ ಕಮ್ಯೂನಿಕೇಷನ್ ಪದವಿಧರೆಯಾಗಿದ್ದರು. ಆರೋಪಿ ರಾಕೇಶ್ ಬಿಕಾಂ ಪದವಿಧರನಾಗಿದ್ದಾನೆ.

ಕೆಲಸದ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

ರಾಕೇಶ್ ಹಾಗೂ ಗೌರಿ ದಂಪತಿ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ರಾಕೇಶ್​ಗೆ ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತ್ತು. ರಾಕೇಶ್ ವರ್ಕ್​ಫ್ರಮ್ ಹೋಮ್​ ಮಾಡುತ್ತಿದ್ದನು. ಮೃತ ಗೌರಿ ಸಹ ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಗೌರಿ ಕೆಲಸ ಬಿಟ್ಟಿದ್ದರು. ಗೌರಿ ಹೊಸದಾಗಿ ಕೆಲಸ ಹುಡುಕುತಿದ್ದರು.

ಇದನ್ನೂ ಓದಿ
Image
ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್​ನಲ್ಲಿ ತುಂಬಿಟ್ಟ ಪತಿ!
Image
ಉದ್ಯಮಿ ಕೊಲೆಗೆ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯೇ ಕತ್ತು ಸೀಳಿ ಹತ್ಯೆ!
Image
ಮುಗ್ಧ ಮಗುವಿನಿಂದ ಬಯಲಾಯ್ತಾ ಸೌರಭ್ ಕೊಲೆಯ ಭಯಾನಕ ಸತ್ಯ
Image
ಪತಿಯನ್ನು ಕೊಲೆ ಮಾಡಿ, ಕತ್ತರಿಸಿ ಡ್ರಮ್​ನಲ್ಲಿ ತುಂಬಿಟ್ಟಿದ್ದ ಮಹಿಳೆ

ಪತ್ನಿ ಎಸೆದ ಚಾಕುವಿನಿಂದ ಕೊಲೆ

ಇದೇ, ಕೆಲಸ ಹುಡುಕುವ ವಿಚಾರಕ್ಕೆ ಇಬ್ಬರ ನಡುವೆ ಮಾರ್ಚ್ 26 ರಂದು ಕೆಲಸ ನಡೆದಿತ್ತು. ಕೋಪದಲ್ಲಿ ಗೌರಿ ಅಡುಗೆ ಮನೆಯಲ್ಲಿನ ಚಾಕುವನ್ನು ರಾಕೇಶ್ ಮೇಲೆ ಎಸೆದಿದ್ದಾರೆ. ಚಾಕು ರಾಕೇಶ್​ ಕೈಗೆ ತಗುಲಿ ಗಾಯವಾಗಿತ್ತು. ಆಗ ರೊಚ್ಚಿಗೆದ್ದ ಪತಿ ರಾಕೇಶ್​, ಪತ್ನಿ ಎಸೆದ ಚಾಕುವಿನಿಂದಲೇ ಗೌರಿಯ ಕುತ್ತಿಗೆಗೆ ಚಾಕು ಇರಿದು ಹತ್ಯೆಗೈದಿದ್ದಾನೆ. ಹತ್ಯೆ ಮಾಡಿದ ಬಳಿಕ ರಾಕೇಶ್​, ಪತ್ನಿ ಗೌರಿಯ ದೇಹವನ್ನು ಟ್ಯ್ರಾಲಿ ಬ್ಯಾಗ್ ರೀತಿಯ ಸೂಟ್​ ಕೇಸ್​ಗೆ ತುಂಬಿದ್ದಾನೆ. ಸೂಟ್​ಕೇಸ್​ಗೆ ತುಂಬುವ ವೇಳೆ ಪತ್ನಿಯ ಮೃತದೇಹದ ಕಾಲುಗಳನ್ನು ಮುರಿದಿದ್ದಾನೆ. ಮೃತದೇಹದವನ್ನು ಸೂಟ್​ಕೇಸ್ ಕೊಂಡೊಯ್ಯುವ ವೇಳೆ ಸೂಟ್​ಕೇಸ್ ಹ್ಯಾಂಡಲ್ ಕಟ್ ಆಗಿದೆ. ಆಗ, ಸೂಟ್​ಕೇಸ್​ ಅನ್ನು ಮನೆಯಲ್ಲಿ ಬಿಟ್ಟು, ಕಾರಿನಲ್ಲಿ ಪರಾರಿಯಾಗಿದ್ದಾನೆ.

ಹತ್ಯೆ ಮಾಡಿದ ಮರುದಿನ ಮಾರ್ಚ್ 27 ರ ಮಧ್ಯಾಹ್ನ ರಾಕೇಶ್​, ಗೌರಿ ಅಣ್ಣನಿಗೆ ಕರೆ ಮಾಡಿ, “ನಿನ್ನ ತಂಗಿಯನ್ನು ಹತ್ಯೆ ಮಾಡಿದ್ದೇನೆ. ನಂತರ ಮನೆಯ ನೆಲಮಡಿಯಲ್ಲಿ ವಾಸವಿರುವವರಿಗೆ ಕರೆ ಮಾಡಿ, “ ನನ್ನ ಪತ್ನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಮನೆ ಮಾಲೀಕರಿಗೆ ತಿಳಿಸಿ” ಎಂದಿದ್ದಾನೆ. ನಂತರ ರಾಕೇಶ್​, ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಬಳಿಕ, ಮನೆ ಮಾಲೀಕರು ಪೊಲೀಸರಿಗೆ ವಿ‍ಚಾರ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿಟ್ಟ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ? ಬೆಂಗಳೂರು ಪೊಲೀಸರು ಹೇಳಿದ್ದಿಷ್ಟು

ಪುಣೆಗೆ ಹೊರಟ್ಟಿದ್ದವ ಆತ್ಮಹತ್ಯೆಗೆ ಯತ್ನ

ರಾಕೇಶ್ ಕಾರಿನಲ್ಲಿ ಮುಂಬಯಿಗೆ ಹೋಗುತ್ತಿದ್ದನು. ದಾರಿ ಮಧ್ಯೆ ರಾಕೇಶ್​, ಪುಣೆಯ ಶಿರವಾರ ಪೋಲಿಸ್ ಠಾಣೆಗೆ ಜಿರಳೆ ಔಷಧಿ ಸೇವಿಸಿ ತೆರಳಿದ್ದಾನೆ. ಠಾಣೆಯಲ್ಲಿ ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಬಳಿಕ, ಆರೋಪಿ ರಾಕೇಶ್​ನನ್ನು ಸತಾರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಡರಾತ್ರಿ ಪುಣೆಯ ಸಸೂನ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಸೂನ್ ಆಸ್ಪತ್ರೆಗೆ ಹುಳಿಮಾವು ಪೊಲೀಸರ ತಂಡ ಭೇಟಿ ನೀಡಿ, ಆರೋಪಿ ರಾಕೇಶ್​ನನ್ನು ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ