ಉದ್ಯಮಿ ಲೋಕನಾಥ್ ಕೊಲೆಗೆ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯೇ ಕತ್ತು ಸೀಳಿ ಹತ್ಯೆ
ರಿಯಲ್ ಎಸ್ಟೇಟ್ ಉದ್ಯಮಿ, ಶಾಸಕ ಎಚ್ ಸಿ ಬಾಲಕೃಷ್ಣ ಆಪ್ತ ಲೋಕನಾಥ್ ಸಿಂಗ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಹೆಣ್ಣು ಕೊಟ್ಟ ಅತ್ತೆಯೇ ಪಾರ್ಟಿ ಆಯೋಜಿಸಿ ಪಕ್ಕಾ ಪ್ಲ್ಯಾನ್ ಮಾಡಿಯೇ ಲೋಕನಾಥ್ ಸಿಂಗ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಮಗಳೊಂದಿಗೆ ಸೇರಿಕೊಂಡು ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾಳೆ. ಮಗಳೊಂದೊಗೆ ಸೇರಿ ಅತ್ತೆಯೇ ಅಳಿಯನ್ನು ಈ ರೀತಿ ಭೀಕರವಾಗಿ ಕೊಲೆಮಾಡಿದ್ದೇಕೆ ಅಂತೀರಾ? ಇಲ್ಲಿದೆ ನೋಡಿ.

ಬೆಂಗಳೂರು, (ಮಾರ್ಚ್ 24): ಕಳೆದ ಮಾರ್ಚ್ 22 ರಂದು ಬೆಂಗಳೂರಿನ(Bengaluru) ಹೆಸರುಘಟ್ಟ ಬಳಿಯ ಬಿಜಿಎಸ್ ಲೇಔಟ್ ಬಳಿ ಮಾಗಡಿ ಶಾಸಕ ಎಚ್ .ಸಿ.ಬಾಲಕೃಷ್ಣ ಆಪ್ತ ಉದ್ಯಮಿ ಲೋಕನಾಥ್ ಸಿಂಗ್ ನ(Lokanat Singh murder case) ಕೊಲೆಯಾಗಿತ್ತು. ಇದೀಗ ಕೊಲೆ ಮಾಡಿದ್ದು ಹಳೇ ದುಷ್ಮನ್ಗಳು, ಯಾವುದೇ ರೌಡಿಶೀಟರ್ ಗಳಲ್ಲ. ಲೋಕಸನಾಥ್ ಸಿಂಗ್ ನನ್ನು ಅತ್ತೆಯೇ ಕೊಲೆ ಮಾಡಿದ್ದಾಳೆ. ಇನ್ನು ಅಚ್ಚರಿ ಅಂದ್ರೆ, ತನ್ನ ಗಂಡನ ಕೊಲೆಗೆ ಹೆಂಡ್ತಿಯೇ ಅಮ್ಮನ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಅಮ್ಮ ಮಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಕೃಷ್ಣ ಸಿಂಗ್ ಹಾಗೂ ಹೇಮ ದಂಪತಿಯ ಮಗಳು ಎಂಬಿಎ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಯಶಸ್ವಿನಿಯನ್ನ 37 ವರ್ಷದ ಲೋಕನಾಥ್ ಸಿಂಗ್ ಕುಣಿಗಲ್ ಗೆ ಕರೆದೊಯ್ದು ರಿಜಿಸ್ಟರ್ ಮದುವೆಯಾಗಿದ್ದ. ಆದರೆ ಮದುವೆ ವಿಚಾರ ಹುಡುಗಿ ಕುಟುಂಬಕ್ಕೆ ಪೋಷಕರಿಗೆ ಇಷ್ಟ ಇಲ್ಲದ ಕಾರಣ, ಕುಣಿಗಲ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿ, ಪತ್ನಿಯನ್ನ ಅವರ ಪೋಷಕರ ಜೊತೆಯೇ ಬಿಟ್ಟಿದ್ದ. ಕೆಲ ದಿನಗಳ ಬಳಿಕ ಲೋಕನಾಥ್ ಸಿಂಗ್ನ ವ್ಯವಹಾರ, ಅಕ್ರಮ ಸಂಬಂಧಗಳ ಬಗ್ಗೆ ಪತ್ನಿ ಯಶಸ್ವಿನಿಗೆ ತಿಳಿದಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ಪತ್ನಿ ಜೊತೆ ಜಗಳ ಕೂಡ ಆಗಿದೆ. ಎರಡು ವಾರದ ಹಿಂದೆ ಪತ್ನಿಯ ಕುಟುಂಬಕ್ಕೆ ಮದುವೆಯಾಗಿರೋ ವಿಚಾರ ಗೊತ್ತಾಗಿದೆ. ಈ ವೇಳೆ ಪತ್ನಿ ಕುಟುಂಬಸ್ಥರು ಜೊತೆ ಲೋಕನಾಥ್ ಸಿಂಗ್ ಗೆ ಗಲಾಟೆಯಾಗಿದೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಯನ್ನ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು: ಕೊಲೆ ಹಿಂದಿದ್ಯಾ ಪ್ರೇಮ್ ಕಹಾನಿ?
ಬಳಿಕ ಲೋಕನಾಥ್ ಪತ್ನಿ ಯಶಸ್ವಿನಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಮಗಳ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ನೊಂದ ಯಶಸ್ವಿ ತಾಯಿ ಹೇಮ, ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಮೂಹರ್ತ ಫಿಕ್ಸ್ ಮಾಡಿದ್ದರು. ಹೇಮ ಹಾಗೂ ಮಗಳು ಯಶಸ್ವಿನಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಯಶ್ವಿನಿ ನಿನ್ನ ಜೊತೆ ಮಾತನಾಡಬೇಕೆಂದು ಲೋಕನಾಥನನ್ನು ಚಿಕ್ಕಬಾಣವರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಇವರ ಹಿಂದೆಯೇ ಯಶಸ್ವಿ ತಾಯಿ ಹೇಮ ಸಹ ಆಟೋದಲ್ಲಿ ಕಾರನ್ನು ಫಾಲೋ ಮಾಡಿಕೊಂಡು ಹೋಗಿದ್ದಳು. ಬಳಿಕ ನಿರ್ಜನ ಪ್ರದೇಶದಲ್ಲಿ ನಿದ್ದೆ ಮಾತ್ರೆ ಬೆರಸಿದ್ದ ಊಟವನ್ನು ತಿನ್ನಿಸಿದ್ದಾಳೆ. ಹಾಗೇ ಪತಿಗೆ ಮದ್ಯ ಕುಡಿಸಿದ್ದಾಳೆ. ನಂತರ ಲೋಕನಾಥ್ ಮತ್ತಿನಲ್ಲಿ ತೇಲಾಡಿದ್ದಾನೆ. ಆಗ ಹೇಮ ಲೋಕನಾಥನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಚೆನ್ನಾಗಿ ಎಣ್ಣೆ ಹೊಡೆದು ಟೈಟ್ ಆಗಿದ್ದ ಅಳಿಯ ಲೋಕನಾಥ್ ಸಿಂಗ್ ಗೆ ಅತ್ತೆ ಹೇಳಿಕೊಟ್ಟಿದ್ದ ಪ್ರಿಪ್ಲಾನ್ ನಂತೆ ಮಗಳು ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಳು. ಯಾವಾಗ ನಿದ್ರೆಗೆ ಜಾರಿದ್ನೋ ಆಗ ಹರಿತವಾದ ಆಯುಧದಿಂದ ಅತ್ತೆ ಹೇಮ ಕುತ್ತಿಗೆ ಕುಯ್ದಿದ್ದಾಳೆ. ಕೂಡಲೇ ಅಲ್ಲಿಂದ ಕಾಲ್ಕಿತ್ತ ಇಬ್ಬರು ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ಬಂದು ತಲೆಮರಿಸಿಕೊಂಡಿದ್ದರು. ಸದ್ಯ ಅಮ್ಮ ಮಗಳನ್ನ ಸೋಲದೇವನಹಳ್ಳಿ ಪೊಲೀಸ್ರು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ.
ಹಂತಕರ ಪ್ಲ್ಯಾನ್ ಬಿಚ್ಚಿಟ್ಟ ಉತ್ತರ ವಿಭಾಗ ಡಿಸಿಪಿ
ಇನ್ನು ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಮಾಹಿತಿ ನೀಡಿದ್ದು, ಮಾರ್ಚ್ 22 ರಂದು ಸಂಜೆ 5:30 ಕ್ಕೆ ಲೋಕನಾಥ್ ಎಂಬಾಂತಾನ ಕೊಲೆಯಾಗಿದ್ದು, 112 ಗೆ ಕರೆ ಮಾಡಿ ಸ್ಥಳೀಯರ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದಾಗ ಲೋಕನಾಥ್ ಸಿಂಗ್ 37 ವರ್ಷದ ವ್ಯಕ್ತಿ ಕೊಲೆಯಾಗಿರೋದು ಗೊತ್ತಾಗಿದೆ. ಅವರ ಸಹೋದರನ ದೂರಿನ ಮೇಲೆ ಮರ್ಡರ್ ಕೇಸ್ ನಲ್ಲಿ ಎಫ್ಐಆರ್ ದಾಖಲಾಗಿದ್ದು, ಬಳಿಕ ತನಿಖೆ ಮಾಡಿ ಇಬ್ಬರು ಮಹಿಳೆಯರು ಬಂಧಿಸಲಾಗಿದೆ. ಆರೋಪಿಗಳು ಆತನ ಪತ್ನಿ ಮತ್ತು ಅತ್ತೆಯೇ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ನಿ ಯಶಸ್ವಿಯನ್ನು ಎರಡು ವರ್ಷದಿಂದ ಪ್ರೀತಿಸಿ ಕಳೆದ ಡಿಸೆಂಬರ್ ನಲ್ಲಿ ಕುಣಿಗಲ್ ನ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ವಿಚಾರ ಪತ್ನಿ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಮದುವೆ ಬಳಿಕ ಹುಡುಗಿಯನ್ನ ಪೋಷಕರ ಜೊತೆಯೇ ಬಿಟ್ಟು ಹೋಗಿರುತ್ತಾನೆ. ಮಗಳನ್ನ ಪ್ರೀತಿಸುತ್ತಿದ್ದಾಗ ವಯಸ್ಸು ಅಂತರಕ್ಕೆ ಪೋಷಕರು ಮದುವೆಗೆ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಕುಣಿಗಲ್ ನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿರುತ್ತಾರೆ. ಆದರೆ ಕೆಲ ದಿನಗಳಲ್ಲಿ ಇತನ ವ್ಯವಹಾರ ಅಕ್ರಮ ಸಂಬಂಧ, ವ್ಯವಹಾರಗಳ ಬಗ್ಗೆ ಗೊತ್ತಾಗುತ್ತೆ. ಆಗ ಗಂಡ ಹೆಂಡತಿ ಇಬ್ಬರ ನಡುವೆ ಜಗಳವಾಗಿದ್ದು, ಡಿವೋರ್ಸ್ ಗೆ ಮಾತುಕತೆ ಆಗಿದೆ. ಎರಡು ವಾರದ ಹಿಂದೆ ಕುಟುಂಬಕ್ಕೆ ಮದುವೆ ಆಗಿರೋದು ಗೊತ್ತಾಗುತ್ತೆ. ಆಗ ಲೋಕನಾಥ್, ಹುಡುಗಿ ಕುಟುಂಬದ ಮೇಲೆ ಬೆದರಿಕೆ ಹಾಕಲು ಮುಂದಾಗ್ತಾರೆ. ಇದರಿಂದ ಇತನನ್ನ ಕೊಲೆ ಮಾಡಲು ಅತ್ತೆ, ಪತ್ನಿ ಪ್ಲ್ಯಾನ್ ಮಾಡುತ್ತಾರೆ. ಪ್ಲ್ಯಾನ್ ಮಾಡಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲೇ ಕತ್ತಿಯಿಂದ ಕುತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು. ಪತ್ನಿಯೇ ಲೋಕನಾಥ್ ನನ್ನ ಮಾತನಾಡಬೇಕು ಅಂತ ಚಿಕ್ಕಬಾಣವರಕ್ಕೆ ಕರೆಸಿಕೊಂಡು, ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ . ಆಗ ಹಿಂದೆಯಿಂದ ಆಟೋದಲ್ಲಿ ತಾಯಿ ಕೂಡ ಫಾಲೋ ಮಾಡಿಕೊಂಡು ಹಿಂದೆ ಹೋಗಿ ಪ್ಲ್ಯಾನ್ ಮಾಡಿ ಮರ್ಡರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ