ಅತ್ತಿಗೆಯನ್ನೇ ಮಂಚಕ್ಕೆ ಕರೆದ ಮೈದುನ: ಒಪ್ಪದಿದ್ದಕ್ಕೆ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ
ಆತನಿಗೆ ಮದುವೆಯಗಿತ್ತು. ಮದುವೆಯಾದರೂ ಅಣ್ಣನ ಹೆಂಡತಿ ಮೇಲೆ ಕಣ್ಣು ಹಾಕಿದ್ದ. ಅಣ್ಣನ ಹೆಂಡತಿ ಇದು ಸರಿ ಅಲ್ಲ ಅಂದರೂ ಕೇಳಿರಲಿಲ್ಲ.ನೀನೇ ಬೇಕೇ ಬೇಕು ಎಂದು ಪಟ್ಟು ಹಿಡದಿದ್ದ. ಅತ್ತಿಗೆಯನ್ನ ಮಂಚಕ್ಕೆ ಕರೆದವ ಕಾಮುಕನಂತೆ ವರ್ತಿಸಿದ್ದಾನೆ. ಹೌದು.. ಅತ್ತಿಗೆ ನಿರಾಕರಣೆ ಮಾಡಿದ್ದಕ್ಕೆ ಮೈದುನ ಅತ್ತಿಗೆಗೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿದ್ದಾನೆ. ಅಷ್ಟಕ್ಕೂ ಏನಿದು ಮೈದುನನ ಮೃಗೀಯ ವರ್ತನೆ ಅಂತೀರಾ ಈ ಸ್ಟೋರಿ ನೋಡಿ..

ಧಾರವಾಡ, (ಮಾರ್ಚ್ 24): ಅತ್ತಿಗೆ ಅಂದ್ರೆ ತಾಯಿ ಸಮಾನ ಅಂತಾರೆ. ಹೀಗಾಗಿ ಅತ್ತಿಗೆಗೆ ಯಾವಾಗಲೂ ತಾಯಿಯ ಸ್ಥಾನಮಾನವನ್ನು ನೀಡಲಾಗುತ್ತದೆ. ಅದಕ್ಕಾಗಿಯೇ ಅವರ ಬಗ್ಗೆ ಯಾವಾಗಲೂ ಗೌರವದ ಭಾವನೆ ಇರಬೇಕು. ಆದ್ರೆ, ಇಲ್ಲೊರ್ವ ವ್ಯಕ್ತಿ, ಅಣ್ಣನ ಹೆಂಡತಿ ಮೇಲೆ ಕಣ್ಣಾಗಿದ್ದು, ಲೈಂಗಿಕವಾಗಿ ಸಹಕರಿಸುವಂತೆ ಕರೆದಿದ್ದಾನೆ. ಆದ್ರೆ, ಇದಕ್ಕೆ ನಿರಾಕರಿಸಿದ ಅತ್ತಿಗೆ ಮೇಲೆ ಮೈದುನ ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿದ್ದಾನೆ. ಈ ಘಟನೆ ಧಾರವಾಡ (Dharwad) ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸ ಕಟ್ಟಿ ಗ್ರಾಮದಲ್ಲಿ ನಡೆದಿದೆ,
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಕಟ್ಟಿ ನಿವಾಸಿ ರಮೇಶ್ ಮೇಗುಂಡಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಹ ಸ್ವಂತ ಅತ್ತಿಗೆಯನ್ನ(ಅಣ್ಣನ ಹೆಂಡತಿ) ಮಂಚಕ್ಕೆ ಕರೆದಿದ್ದಾನೆ. ಆದ್ರೆ, ಇದಕ್ಕೆ ಅತ್ತಿಗೆ ಸವಿತಾ ಬಸಪ್ಪ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಮೇಶ್, ಅತ್ತಿಗೆಯನ್ನು ಹಿಡಿದುಕೊಂಡು ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಳಿಕ ಮೈದುನನಿಂದ ತಪ್ಪಿಸಿಕೊಂಡು ಮನೆಯಿಂದ ಕೈಗಾಡಿಕೊಂಡು ಹೊರಗೆ ಬಂದಿದ್ದಾಳೆ. ಆಗ ಅಕ್ಕಪಕ್ಕದ ಜನರು ಏನಾಯ್ತು ಎಂದು ಓಡೋಡಿ ಬಂದಿದ್ದು, ಗಾಯಗೊಂಡಿದ್ದ ಸವಿತಾಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸವಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಕಾಮುಕ ಮೈದುನ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಸಪ್ತಪದಿ ತುಳಿದ ಎದುರು ಬದುರು ಮನೆಯ ಹಿಂದೂ-ಮುಸ್ಲಿಂ ಜೋಡಿ!
ಸವಿತಾ ತನ್ನ ಅಣ್ಣನ ಹೆಂಡತಿ ಎನ್ನುವುದನ್ನು ಮರೆತ ರಮೇಶ್, ನಿತ್ಯವೂ ಮಂಚಕ್ಕೆ ಕರೆಯುತ್ತಿದ್ದನಂತೆ. ಆದ್ರೆ, ಇದಕ್ಕೆ ಸವಿತಾ ನಿರಾಕರಿಸುತ್ತಾ ಬಂದಿದ್ದಾಳಂತೆ. ಆದ್ರೆ, ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಸವಿತಾಳನ್ನು ಮತ್ತೆ ಕರೆದಿದ್ದಾನೆ. ಇದಕ್ಕೆ ಸವಿತಾ ಒಪ್ಪದಿದ್ದಾಗ ಬಲವಂತ ಮಾಡಿದ್ದು, ಈ ವೇಳೆ ಎಲ್ಲೆಂದರಲ್ಲಿ ಕಚ್ಚಿದ್ದಾನೆ. ಇದರಿಂದ ಮುಖ, ಎದೆ ಭಾಗ , ಗಲ್ಲಕ್ಕೆ ಕಚ್ಚಿದ ಗಾಯಗಳಾಗಿದ್ದು, ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೊಸಕಟ್ಟಿ ಗ್ರಾಮದಲ್ಲಿ ಸಹೋದರಾರ ಬಸಪ್ಪ ಹಾಗೂ ರಮೇಶ್ ಇಬ್ಬರು ಕೂಲಿಕೆಲಸ ಮಾಡಿಕೊಂಡು ಜೀವನ ಮಾಡತಿದ್ದರು. ಇಬ್ಬರಿಗೂ ಹೆಚ್ಚು ಕಡಿಮೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದು. ಇನ್ನು ಬಸಪ್ಪನ ಪತ್ನಿ ಸವಿತಾ ಗಾರ್ಮೆಂಟ್ಸ್ ಕೆಲಸ ಮಾಡತಿದ್ದಳು. ಒಂದೇ ಮನೆಯಲ್ಲಿ ಇದ್ದ ಕಾರಣ, ಸವಿತಾ ಮೇಲೆ ಮೈದುನ ರಮೇಶ್ ಕಣ್ಣು ಹಾಕಿದ್ದ, ಯಾರೂ ಇಲ್ಲದ ವೇಳೆ ಜಗಳ ತಗೆದು ನನ್ನ ಜೊತೆ ಬಾ ಎಂದು ಕರೆಯುವುದು ಮಾಡತಿದ್ದನಂತೆ. ಇದಕ್ಕೆ ಸವಿತಾ ನಿರಾಕರಣೆ ಮಾಡುತ್ತಾ ಬಂದಿದ್ದಾಳೆ.
ಆದ್ರೆ, ಭಾನುವಾರ ಮುಂಜಾನೆ ಇದೇ ವಿಚಾರಕ್ಕೆ ಗಲಾಟೆಯಾಗಿದ್ದು, ರಮೇಶ್ ಅತ್ತಿಗೆಎಂದು ನೋಡದೆ ಮೃಗೀಯ ವರ್ತನೆ ತೋರಿದ್ದಾನೆ. ಪೈಪ್ ನಿಂದ ಹಲ್ಲೆ ಮಾಡಿರೋ ಆರೋಪವೂ ಕೇಳಿ ಬಂದಿದೆ.ಮನೆಯಲ್ಲಿ ಅತ್ತಿಗೆ ಮೇಲೆ ಹಲ್ಲೆ ಮಾಡಿ ರಮೇಶ್ ಪರಾರಿಯಾಗಿದ್ದಾನೆ. ಇನ್ನು ಸವಿತಾ ಸಂಬಂಧಿಕರು ಕುಂದಗೋಳ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.