Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಸಪ್ತಪದಿ ತುಳಿದ ಎದುರು ಬದುರು ಮನೆಯ ಹಿಂದೂ-ಮುಸ್ಲಿಂ ಜೋಡಿ!

ಪ್ರೀತಿ ಕುರುಡು ಎನ್ನುವ ಹಾಗೆ ಜಾತಿ, ಧರ್ಮ, ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟಲೆಗಳನ್ನು ಮೀರಿದ ಜೋಡಿಯೊಂದು ಪೊಲೀಸ್ ಠಾಣೆಯಲ್ಲಿ ಒಂದಾಗಿದೆ. ಎದುರು ಬದುರು ಮನೆಯ ಮಸ್ಲಿಂ ಯುವತಿ ಹಾಗೂ ಹಿಂದೂ ಯುವಕ ತಮ್ಮ-ತಮ್ಮ ಧರ್ಮ, ಜಾತಿಗೆ ತಿಲಾಂಜಲಿ ಇಟ್ಟು ಪೋಷಕರ ವಿರೋಧದ ನಡುವೆಯೂ ಒಂದಾಗಿದ್ದಾರೆ. ಹೆಚ್ಚಾಗಿ ಹಿಂದೂ ಯುವತಿಯರೇ ಮುಸ್ಲಿಂ ಯುವರನ್ನ ಪ್ರೀತಿಸಿ ಮದ್ವೆಯಾದ ಸಾಕಷ್ಟು ಉದಾಹರಣೆಗಳು ಇವೆ. ಇದರ ಮಧ್ಯೆ ಮುಸ್ಲಿಂ ಯುವತಿಯೇ ಹಿಂದೂ ಯುವಕನನ್ನು ವರಿಸುವುದರ ಮೂಲಕ ತನ್ನ ಪ್ರೀತಿಗೆ ಜೈ ಎಂದಿದ್ದಾಳೆ.

ಚಿಕ್ಕಬಳ್ಳಾಪುರ: ಸಪ್ತಪದಿ ತುಳಿದ ಎದುರು ಬದುರು ಮನೆಯ ಹಿಂದೂ-ಮುಸ್ಲಿಂ ಜೋಡಿ!
Hindhu Muslim Marriage
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ

Updated on:Mar 24, 2025 | 4:05 PM

ಚಿಕ್ಕಬಳ್ಳಾಪುರ, (ಮಾರ್ಚ್​ 24): ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪರಸ್ಪರ ಪ್ರೀತಿಸಿ (Love) ಇದೀಗ ಪೋಷಕರ ವಿರೋಧದ ನಡುವೆಯೂ ಪೊಲೀಸ್​ ಠಾಣೆಯಲ್ಲಿ ಒಂದಾಗಿದ್ದಾರೆ. ಚಿಕ್ಕಬಳ್ಳಾಪುರ(Chikkaballapur) ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಪಸೀಹಾ ಕಳೆದ 2 ವರ್ಷಗಳಿಂದ ತನ್ನ ಮನೆ ಎದುರಿನ ಹಿಂದೂ ಯುವಕ 24 ವರ್ಷದ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು. ವಾಟ್ಸಾಪ್ ಮೂಲಕ ಆರಂಭವಾಗಿ ಇವರ ಪ್ರೀತಿ, ಪ್ರೇಮ, ಪ್ರಣಯ ಕೊನೆಗೆ ಮದುವೆವರೆಗೂ ಬಂದಿದ್ದು, ಇದೀಗ ಅಂತಿಮವಾಗಿ ಜಾತಿ, ಧರ್ಮ ಬದಿಗಿಟ್ಟು ಪೋಷಕರ ವಿರೋಧದ ನಡುವೆಯೂ ಪೊಲೀಸ್​ ಠಾಣೆಯಲ್ಲಿ ಒಂದಾಗಿದ್ದಾರೆ.

ಎದುರು ಬದುರು ಮನೆಯವರಾದ ಪಸೀಹಾ ಹಾಗೂ ನಾಗಾರ್ಜುನ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದೆ. ಆದ್ರೆ, ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಈ ಜೋಡಿ ಜೋಡಿ ಮನೆಬಿಟ್ಟು ಬಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‍ಠಾಣೆ ಮೊರೆ ಹೋಗಿದ್ದರು. ಕೊನೆಗೆ ಇಬ್ಬರ ಪೋಷಕರು ಆಗಮಿಸಿ, ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೂ ಸಹ ಪಸೀಹಾ ಪ್ರೀತಿಸಿದವನ ಜೊತೆಯೇ ಬಾಳುವುದಾಗಿ ಹಠ ಹಿಡಿದು, ಕೊನೆಗೆ ನಾರ್ಗಾಜುನನ್ನು ವರಿಸಿದ್ದಾಳೆ.

ಇದನ್ನೂ ಓದಿ: 50 ವರ್ಷದ ಅಂಕಲ್​ನ ಮದ್ವೆಯಾದ 18 ವರ್ಷದ ಯುವತಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ

ಇನ್ನು ಈ ಜೋಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆ ದೊಡ್ಡ ಹೈಡ್ರಾಮಾವೇ ನಡೆಯಿತು. ಪಸೀಹಾ ಹಾಗೂ ನಾಗಾರ್ಜುನ ಬಂಧು-ಬಳಗ, ಸಂಬಂಧಿಕರು ಚಿಕ್ಕಬಳ್ಳಾಪುರ ಪೊಲೀಸ್​ ಠಾಣಗೆ ದೌಡಾಯಿಸಿ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯುವತಿಯ ಪೋಷಕರು, ಇದನ್ನು ಇಲ್ಲಿಗೆ ಬಿಟ್ಟುಬಿಡು, ನಮ್ಮ ಜೊತೆ ಮನೆಗೆ ಬಾ ಎಂದು ಬೇಡಿಕೊಂಡಿದ್ದಾರೆ. ಪೋಷಕರು ಎಷ್ಟು ಬೇಡಿಕೊಂಡರೂ ಸಹ ಕ್ಯಾರೇ ಎನ್ನದ ಪಸೀಹಾ, ನಾಗಾರ್ಜುನನನ್ನು ಬಿಟ್ಟು ಬರುವುದಿಲ್ಲ. ಆತನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ.

ಇದನ್ನೂ ಓದಿ
Image
19ರ ಯುವತಿ ಹಿಂದೆ ಬಿದ್ದ 47ರ ವ್ಯಕ್ತಿ: ಕಿರುಕುಳಕ್ಕೆ ವಿದ್ಯಾರ್ಥಿನಿ ಬಲಿ!
Image
ಇಬ್ಬರು ಹೆಂಡರ ನೀಚ ಗಂಡ: ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು!
Image
ಇನ್ಸ್ಟಾಗ್ರಾಮ್ ಸುಂದ್ರಿ ಜತೆ ಹೋಗಿದ್ದವ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಕೊನೆಗೆ ಪಸೀಹಾ ತಂದೆ-ತಾಯಿ ಜೊತೆ ಹೋಗದೇ ಪ್ರಿಯಕರನ ಜೊತೆಯಲ್ಲೇ ಹೋಗಿದ್ದು, ದೇವಸ್ಥಾನವೊಂದರಲ್ಲಿ ಸತಿಪತಿಗಳಾಗಿ ಕಾಲಿಟ್ಟರು. ಇನ್ನು ಮದುವೆಗೆ ಹುಡುಗಿ ಪೋಷಕರ ವಿರೋಧ ವ್ಯಕ್ತವಾಗಿರುವ ಹಿನ್ನಲೆ ಸೂಕ್ತ ರಕ್ಷಣೆ ನೀಡುವಂತೆ ಈ ಜೋಡಿ ಪೊಲೀಸರಲ್ಲಿ ಮನವಿ ಮಾಡಿದೆ.

ಒಟ್ಟಿನಲ್ಲಿ ಜಾತಿ, ಧರ್ಮಕ್ಕಿಂತ ಹೆಚ್ಚಾಗಿ ಪೋಷಕರ ವಿರೋಧದ ನಡುವೆಯೇ ಈ ಜೋಡಿ  ಪ್ರೀತಿಸಿ ಮದ್ವೆಯಾಗಿದ್ದು, ಕೊನೆ ತನಕ ಹೀಗೆ ಪರಸ್ಪರ ಪ್ರೀತಿಯಿಂದ  ಬಾಳಲಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Mon, 24 March 25