ಇಬ್ಬರು ಹೆಂಡರ ನೀಚ ಗಂಡ: ಪ್ರೀತಿ ನಂಬಿ ಬಂದವಳು ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು
ಪ್ರೀತಿ ಹೆಸರಲ್ಲಿ ಒಂದೇ ದಿನ ಇಬ್ಬರಿಗೆ ತಾಳಿ ಭಾಗ್ಯ ಕರುಣಿಸಿದ್ದ. ಅಲ್ಲದೇ ಒಂಬತ್ತು ವರ್ಷದದಲ್ಲಿ ಇಬ್ಬರಿಗೂ ನಾಲ್ಕು ಮಕ್ಕಳನ್ನು ಕರುಣಿಸಿದ್ದ. ಆದ್ರೆ ಇದೀಗ ಇಬ್ಬರು ಹೆಂಡತಿಯರ ಪೈಕಿ ಓರ್ವ ಪತ್ನಿ ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಿದ್ದಾಳೆ. ಪ್ರೀತಿ ನಂಬಿ ಬಂದವಳು ಬಾಬು ಕೈಯಿಂದ ಅಮಾನುಷ್ಯವಾಗಿ ಹತ್ಯೆಯಾಗಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಯಾರು ಈ ಇಬ್ಬರ ಹೆಂಡ್ತಿರ ನೀಚ ಗಂಡನ ಕ್ರೌರ್ಯ ಇಲ್ಲಿದೆ ನೋಡಿ

ಬೆಂಗಳೂರು, (ಮಾರ್ಚ್ 19): ಇಬ್ಬರು ಹೆಂಡ್ತೀರ ಮುದ್ದಿನ ಗಂಡ. ನಾನೂ ನನ್ನ ಹೆಂಡ್ತೀರು ಎಂದು ಇಬ್ಬರು ಹೆಂಡ್ತೀರ ಜೊತೆ ಸಂಸಾರ ಮಾಡುತ್ತಿದ್ದವನು ಒಬ್ಬಳ ಕಥೆ ಮುಗಿಸಿದ್ದಾನೆ. ಹೌದು..ಇಬ್ಬರು ಹೆಂಡ್ತೀರ ನೀಚನ ಗಂಡನ ಹೆಸರು ಬಾಬು ಆನೇಕಲ್ ತಾಲೂಕಿನ ರಾಚಾಮಾನಹಳ್ಳಿ ನಿವಾಸಿಯಾಗಿದ್ದು, ಅನಿತಾ ಹಾಗೂ ಸುಷ್ಮಿತಾಳನ್ನ ಲವ್ ಮಾಡಿದ್ದ. ಒಬ್ಬರ ವಿಷಯ ಮತ್ತೊಬ್ಬರಿಗೆ ಗೊತ್ತಿಲ್ಲದೆ ಎರಡೆರಡು ಲವ್ ಟ್ರ್ಯಾಕ್ ನಡೆಸಿದ್ದ. ಬಳಿಕ ತನ್ನ ಪ್ರೀತಿ ವಿಚಾರವನ್ನು ಇಬ್ಬರಿಗೂ ಹೇಳಿ ಒಪ್ಪಿಸಿ, 10 ವರ್ಷದ ಹಿಂದೆ ಒಂದೇ ಸಲ ಇಬ್ಬರಿಗೂ ತಾಳಿ ಕಟ್ಟಿದ್ದ. ಆದ್ರೆ, ಇದೀಗ ಅನಿತಾಳನ್ನು ಬಡಿದು ಕೊಂದಿದ್ದಾನೆ. ಇನ್ನು ಪ್ರೀತಿ ನಂಬಿ ಬಂದವಳು ಗಂಡ ಬಾಬುನ ಅನುಮಾನದ ಭೂತಕ್ಕೆ ಬಲಿಯಾಗಿದ್ದಾಳೆ.
ಮೂವರು ಒಂದೇ ಮನೆಯಲ್ಲಿ ಅನ್ಯೂನ್ಯವಾಗಿ ದಾಂಪತ್ಯ ಜೀವನ ನಡೆಸಿದ್ದರು. ಅನಿತಾಗೆ ಒಂದು ಗಂಡು, ಒಂದು ಹೆಣ್ಣು. ಸುಷ್ಮಿತಾಗೆ ಇಬ್ಬರು ಹೆಣ್ಣು ಮಕ್ಕಳು. ನಾಲ್ವರು ಮಕ್ಕಳು, ಇಬ್ಬರು ಹೆಂಡ್ತೀರನ್ನ ಬಾಬು ಚೆನ್ನಾಗೇ ನೋಡಿಕೊಳ್ಳುತ್ತಿದ್ದ. ಆದ್ರೆ ಕೊಲೆಯಾದ ಅನಿತಾ 3 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳಂತೆ. ಬಳಿಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದ. ದೂರು ದಾಖಲಿಸಿಕೊಂಡಿದ್ದ ಪೊಲೀಸ್ರು ಅನಿತಾಳನ್ನ ಹುಡುಕಿ ಗಂಡನ ಜೊತೆ ಕಳಿಸಿದ್ದರು. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆ ಆಗಿದೆ. ಮೊನ್ನೆ ಭಾನುವಾರ ಕೋಪದಲ್ಲಿ ಬಾಬು ಮೊದಲ ಪತ್ನಿ ಅನಿತಾಳನ್ನ ಹಿಡಿದು ಹಿಗ್ಗಾಮುಗ್ಗ ಥಳಿಸಿ, ರೂಮ್ ಲಾಕ್ ಮಾಡಿದ್ದಾನೆ. ಬಳಿಕ ಅತ್ತ ಯಾರೂ ತಲೆ ಹಾಕಿಲ್ಲ. ಆದ್ರೆ ಮರು ದಿನ ಮಧ್ಯಾಹ್ನ 2ನೇ ಹೆಂಡ್ತಿ ಸುಷ್ಮಾ ರೂಮ್ನ ಬಾಗಿಲು ತೆಗೆದು ಒಳಗೆ ಹೋದಾಗ ಅನಿತಾ ಮೃತಪಟ್ಟಿರುವುದು ಗೊತ್ತಾಗಿದೆ. ಇತ್ತ ಅತ್ತಿಬೆಲೆ ಪೊಲೀಸ್ರಿಗೆ ಈ ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಆರೋಪಿ ಬಾಬುನ ಬಂಧಿಸಿದ್ದಾರೆ.
ಇದನ್ನೂ ಓದಿ: ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ: ಅಳಿಯನ ಕೈಯಲ್ಲೇ ಹೆಣವಾದ ಪಂಚನಹಳ್ಳಿ ಸಾಹುಕಾರ
ಮೂಲತಃ ಮೈಸೂರಿನವಳಾದ ಅನಿತಾ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಚಮಾನಹಳ್ಳಿ ವಾಸಿ ಬಾಬು ಎಂಬಾತನ ಬಣ್ಣದ ಬಲೆಗೆ ಬಿದ್ದು ಇಂದು ಬಲಿಯಾಗಿ ಹೋಗಿದ್ದಾಳೆ. ಇದಕ್ಕೂ ಮೊದಲು ಮದುವೆಯಾಗಿದ್ದ ಇಬ್ಬರು ಮಹಿಳೆಯರ ಜೊತೆ ಸಂಸಾರ ನಡೆಸಿದ್ದ ಆರೋಪಿ ಬಾಬು, ಅನಿತಾ ಮತ್ತು ಸುಶ್ಮೀತಾ ಎಂಬ ಇಬ್ಬರ ತಲೆಕೆಡಿಸಿ ಒಮ್ಮೆಲೆ ಸಿನಿಮಾ ಸ್ಟೈಲ್ ನಲ್ಲಿ ತಾಳಿಕಟ್ಟಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮದುವೆ ಆದರೂ ಮದರಂಗಿ ಆಟ ಬಿಡದ ಅಸಾಮಿ ಸಿಕ್ಕ ಸಿಕ್ಕಲ್ಲಿ ಮೇಯ್ದು ರಂಗಿನಾಟ ಮುಂದುವರಿಸಿದ್ದ. ಈ ನಡುವೆ ಇಬ್ಬರು ಪತ್ನಿಯರಿಗೆ ನಾಲ್ಕು ಮಕ್ಕಳನ್ನು ಕರುಣಿಸಿ ಬೀದಿಗೆ ಬಿಟ್ಟಿದ್ದು, ಪತ್ನಿಯರಿಗೆ ನಿತ್ಯ ನರಕ ತೋರಿಸುತ್ತಿದ್ದ.
ಇನ್ನೂ ಆರೋಪಿ ಬಾಬು ಮಾತ್ರ ತನ್ನ ಪತ್ನಿಯರ ಬಗ್ಗೆ ಸದಾ ಅನುಮಾನದ ಕಣ್ಣಿನಿಂದ ನೋಡುತ್ತಿದ್ದ. ಆದರಲ್ಲು ಮೊದಲ ಪತ್ನಿ ಅನಿತಾ ಕುಂತರೆ ತಪ್ಪು ನಿಂತರೆ ತಪ್ಪು ಎಂದು ಅತ್ಯಂತ ಕ್ರೂರವಾಗಿ ಬ್ಲೇಡ್, ಮತ್ತು ಚೂಪಾದ ಕಡ್ಡಿಯಿಂದ ಚುಚ್ಚಿ ಚುಚ್ಚಿ ಹಿಂಸಿಸುತ್ತಿದ್ದ. ಇವನ ಕಿರುಕುಳ ತಾಳಲಾರದೆ ಆನೇಕ ಬಾರಿ ಮನೆ ಬಿಟ್ಟು ಸಂಬಂಧಿಕರ ಮನೆ ಸೇರಿಕೊಂಡಿದ್ದಳು. ಇತ್ತೀಚೆಗೆ ಸಹ ಪೊಲೀಸರ ಸಮ್ಮುಖದಲ್ಲಿ ಮರಳಿ ಗಂಡನ ಮನೆ ಸೇರಿದ್ದ ಅನಿತಾ ಮತ್ತು ಆರೋಪಿ ಬಾಬು ನಡುವೆ ಕಳೆದ ಭಾನುವಾರ ಸಹ ಜಗಳ ನಡೆದಿದೆ. ಮತ್ತೊಬ್ಬನ ಜೊತೆ ಓಡಿಹೋಗಿದ್ಯಾ ಎಂದು ಶಂಕಿಸಿ ಕೊಠಡಿಯಲ್ಲಿ ಕೂಡಿ ಹಾಕಿ ದೊಣ್ಣೆಯಿಂದ ಮನಸೋ ಇಚ್ಚೆ ಹಲ್ಲೆ ಮಾಡಿದ್ದ.
ಸಾಲದಕ್ಕೆ ಅನಿತಾಳಿಗೆ ಅನ್ನ, ನೀರು ನೀಡದೇ ಕೋಣೆಯಲ್ಲಿ ಕೂಡಾಕಿ ಬಾಗಿಲು ಬಂದ್ ಮಾಡಿದ್ದ. ಆದ್ರೆ, ಅನಿತಾ ಕೋಣೆಯಲ್ಲೇ ನರಳಿ ನರಳಿ ಉಸಿರು ಚೆಲ್ಲಿದ್ದಾಳೆ. ಕೊಣೆಯಿಂದ ಯಾವುದೇ ಶಬ್ದ ಬರುತ್ತಿಲ್ಲ ಎಂದು ಅನುಮಾನಗೊಂಡ 2ನೇ ಹೆಂಡ್ತಿ ಸುಷ್ಮಿತಾ, ಬಾಗಿಲು ತೆರೆದಾಗ ಅನಿತಾ ಸಾವನ್ನಪ್ಪಿದ್ದಳು.
ಸುಂದರ ಸಂಸಾರದಲ್ಲಿ ಇಂತಹ ಘೋರ ನಡೆದಿದ್ದು ವಿಪರ್ಯಾಸ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.