AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಸಮಾನ ಅತ್ತಿಗೆ ಜೊತೆಗಿನ ಲವ್ವಿಡವ್ವಿಗಾಗಿ ಸ್ವಂತ ಅಣ್ಣನನ್ನೇ ಕೊಂದ ಕಾಮುಕ ತಮ್ಮ

ಹಿಂದೂ ಧರ್ಮದಲ್ಲಿ, ಅತ್ತಿಗೆಗೆ ಯಾವಾಗಲೂ ತಾಯಿಯ ಸ್ಥಾನಮಾನವನ್ನು ನೀಡಲಾಗುತ್ತದೆ. ಅದಕ್ಕಾಗಿಯೇ ಅವರ ಬಗ್ಗೆ ಯಾವಾಗಲೂ ಗೌರವದ ಭಾವನೆ ಇರಬೇಕು. ಆದರೆ ಇಲ್ಲೋರ್ವ ಕಾಮುಕ ತನ್ನ ಅಣ್ಣನ ಹೆಂಡ್ತಿ ಮೇಲೆ ಕಣ್ಣಾಕಿದ್ದು, ಇದಕ್ಕೆ ಅಡ್ಡಿಯಾಗುತ್ತಿದ್ದಾನೆಂದು ರಕ್ತ ಹಂಚಿಕೊಂಡ ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತಾಯಿ ಸಮಾನ ಅತ್ತಿಗೆ ಜೊತೆಗಿನ ಲವ್ವಿಡವ್ವಿಗಾಗಿ ಸ್ವಂತ ಅಣ್ಣನನ್ನೇ ಕೊಂದ ಕಾಮುಕ ತಮ್ಮ
ಅಣ್ಣ ಪ್ರಸಾದ್(ಕೊಲೆಯಾದ ವ್ಯಕ್ತಿ), ಕುಮಾರ್(ಕೊಲೆಗಾರ)
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Jun 02, 2024 | 5:40 PM

Share

ಚಾಮರಾಹನಗರ, (ಜೂನ್ 02): ಪಾಪಿ ತಮ್ಮನೊಬ್ಬ ತನ್ನ ಕಾಮದ ತೀಟೆಗಾಗಿ ಒಡಹುಟ್ಟಿದ ಅಣ್ಣನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ (Murder) ಮಾಡಿದ್ದಾನೆ. ಅಣ್ಣನ ಹೆಂಡತಿ ಅತ್ತಿಗೆ ಜೊತೆಗಿನ ಲವ್ವಿಡವ್ವಿಗೆ(illicit relationship)  ಅಡ್ಡಿಯಾಗಿದ್ದಾನೆಂದು ಕೊಂದು ಹಾಕಿದ್ದಾನೆ. ಚಾಮರಾಜನಗರದ(chamarajanagar)  ಗುಂಡ್ಲುಪೇಟೆ ತಾಲೂಕಿನ‌ ಚೌಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೌಡಹಳ್ಳಿ ಗ್ರಾಮದ ಪ್ರಸಾದ್ (45) ಕೊಲೆಯಾದ ದುರ್ದೈವಿ. ಪ್ರಸಾದ್‌ ಸಹೋದರ ಕುಮಾರ್ (39) ಎಂಬಾತ ಕೊಲೆ ಮಾಡಿದ ಆರೋಪಿ.

ಆರೋಪಿ ಕುಮಾರ್‌ ತನ್ನ ಅಣ್ಣನ ಹೆಂಡ್ತಿ ಅಂದರೆ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಅಣ್ಣನಿಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಶನಿವಾರ ರಾತ್ರಿ ಅಣ್ಣ-ತಮ್ಮನ ನಡುವೆ ಗಲಾಟೆಯಾಗಿದೆ. ಹೀಗೆ ಮಾತಿನ ಚಕಮಕಿ ವೇಳೆ ನಿನ್ನ ಹೆಂಡತಿ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಕುಮಾರ್​ ಬೈದಿದ್ದಾನೆ.  ಇದರಿಂದ ಕೋಪಗೊಂಡ ಅಣ್ಣ ಪ್ರಸಾದ್‌ ತಮ್ಮ ಕುಮಾರ್‌ಗೆ ಹೊಡೆಯಲು ಹೋಗಿದ್ದಾನೆ.

ಇದನ್ನೂ ಓದಿ: ಲವರ್​​ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಕೊಂದು ಫ್ರೀಜರ್‌ನಲ್ಲಿಟ್ಟಿದ್ದ 16 ರ ಬಾಲಕಿಯ ಬಂಧನ

ಹೀಗೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಕುಮಾರ್‌ ಸಿಟ್ಟಿನಲ್ಲಿ ಅಣ್ಣ ಪ್ರಸಾದ್‌ಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಪ್ರಸಾದ್​ ಮೃತಪಟ್ಟಿದ್ದಾನೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ದೌಡಾಯಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ಕೊಲೆ ಆರೋಪಿ ಕುಮಾರ್‌ನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ