ಲವರ್ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಕೊಂದು ಫ್ರೀಜರ್‌ನಲ್ಲಿಟ್ಟಿದ್ದ 16 ರ ಬಾಲಕಿಯ ಬಂಧನ
ಮಾರ್ಚ್ 15 ರಂದು ಬಾಲಕಿ ತನ್ನ 19 ವರ್ಷದ ಪ್ರಿಯಕರನ ಜೊತೆ ಸೇರಿ ತನ್ನ ತಂದೆ ಮತ್ತು ತಮ್ಮನನ್ನು ಕೊಂದು ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಳು. ಬಳಿಕ ಅಲ್ಲಿಂದ ಇಬ್ಬರೂ ಪರಾರಿಯಾಗಿದ್ದರು. ಇದೀಗ ಮೇ 29ರಂದು ಹರಿದ್ವಾರ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರಿದ್ವಾರ: ಜಬಲ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಮಿಲೇನಿಯಮ್ ಸೊಸೈಟಿಯಲ್ಲಿ ತನ್ನ ತಂದೆ ಮತ್ತು ಒಂಬತ್ತು ವರ್ಷದ ಸಹೋದರನನ್ನು ಕೊಂದು ತಲೆ ಮರಿಸಿಕೊಂಡಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಹರಿದ್ವಾರ ಪೊಲೀಸರು ಕೊಲೆ ನಡೆದ ಎರಡು ತಿಂಗಳ ನಂತರ ಇದೀಗ ಮೇ 29ರಂದು ಬಂಧಿಸಿದ್ದಾರೆ . ಮಾರ್ಚ್ 15 ರಂದು ಬಾಲಕಿ ತನ್ನ ತಂದೆ ಮತ್ತು ತಮ್ಮನನ್ನು ಕೊಂದು ದೇಹಗಳನ್ನು ತುಂಡುಗಳಾಗಿ ಕತ್ತರಿಸಿ ಫ್ರೀಜರ್‌ನಲ್ಲಿ ತುಂಬಿದ್ದಳು. ಬಳಿಕ ತನ್ನ ಲವರ್ ಜೊತೆ ಪರಾರಿಯಾಗಿದ್ದಳು.
ಮುಕುಲ್ ಸಿಂಗ್(19) ಎಂಬಾತನನ್ನು ಪ್ರೀತಿಸಿದ್ದ ಈ ಬಾಲಕಿ ಆತನೊಂದಿಗೆ ಸೆಪ್ಟೆಂಬರ್ 2023 ರಲ್ಲಿ ಓಡಿ ಹೋಗಿದ್ದಳು. ಬಾಲಕಿಯ ತಂದೆ ರಾಜ್‌ಕುಮಾರ್ ವಿಶ್ವಕರ್ಮ ಪೊಲೀಸರಿಗೆ ದೂರು ನೀಡಿದ್ದರು. ಇದರ ಪರಿಣಾಮವಾಗಿ ಮುಕುಲ್ ಸಿಂಗ್ ನನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದರು. ಬಾಲಕಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಿದ್ದರು. ಕೆಲ ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಮುಕುಲ್ ಸಿಂಗ್ ತನ್ನನ್ನು ಜೈಲಿಗೆ ಕಳುಹಿಸಿದ ಆಕೆಯ ತಂದೆಯನ್ನು ಕೊಲ್ಲಲು ಸಂಚು ರೂಪಿಸಿದ್ದ, ಇದಕ್ಕಾಗಿ ಆಕೆಯ ಸಹಾಯವನ್ನೂ ಪಡೆದಿದ್ದ. ಇದರಂತೆ ಮಾರ್ಚ್ 15 ರಂದು ಕೊಲೆ ನಡೆದಿದೆ.
ಇದನ್ನೂ ಓದಿ: ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್ಗೆ ಒಳಗಾಗ ವರನ ಕುಟುಂಬ
ಹತ್ಯೆಯ ನಂತರ, ಬಾಲಕಿ ಆತನೊಂದಿಗೆ ಸುಮಾರು ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದಳು. ಇದೀಗ ಹರಿದ್ವಾರದಲ್ಲಿ ಸಿಕ್ಕಿಬಿದ್ದು TOI ಯೊಂದಿಗೆ ಮಾತನಾಡಿದ ಹರಿದ್ವಾರದ ಎಸ್‌ಎಸ್‌ಪಿ ಪ್ರಮೀಂದ್ರ ದೋಬಲ್, “ಸ್ಥಳೀಯರು ಅನುಮಾನಾಸ್ಪದವಾಗಿ ತಿರುಗುತ್ತಿರುವುದನ್ನು ಕಂಡು ಹುಡುಗಿಯನ್ನು ಆರಂಭದಲ್ಲಿ ನಗರದಲ್ಲಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವಳು ಅಪರಾಧವನ್ನು ಒಪ್ಪಿಕೊಂಡಿದ್ದು ಮತ್ತು ತನ್ನ ಸಹಚರನ ಗುರುತನ್ನು ಬಹಿರಂಗಪಡಿಸಿದ್ದಾಳೆ. ನಾವು ಅವಳನ್ನು ಜಬಲ್‌ಪುರ ಪೊಲೀಸರಿಗೆ ಒಪ್ಪಿಸಿದ್ದೇವೆ. ನಾವು ಮುಕುಲ್‌ನನ್ನು ಪತ್ತೆಹಚ್ಚಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.” ವಿಚಾರಣೆ ವೇಳೆ ಬಾಲಕಿ ತನ್ನ ತಂದೆ ರಾಜ್‌ಕುಮಾರ್ ವಿಶ್ವಕರ್ಮನನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದು ಮುಕುಲ್ ಎಂದು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆಕೆಯ ಕಿರಿಯ ಸಹೋದರ, ತನಿಷ್ಕ್, ಘಟನೆಯ ಸಮಯದಲ್ಲಿ ಎಚ್ಚರಗೊಂಡಿದ್ದರಿಂದಾಗಿ ಸಾಕ್ಷಿ ನಾಶ ಮಾಡಲು ತಮ್ಮನ್ನನ್ನೂ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Thu, 30 May 24