AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್​​ಗೆ ಒಳಗಾಗ ವರನ ಕುಟುಂಬ

ಯುವತಿಗೆ ಮೇ 20 ರಂದು ಮದುವೆಯಾಗಿದೆ. ಎರಡು ದಿನಗಳ ಬಳಿಕ, ಮೇ 22 ರ ಮುಂಜಾನೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ತಕ್ಷಣ ಆಕೆಯನ್ನು ಧಮ್ನೋಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ತುಂಬು ಗರ್ಭಿಣಿ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ.

ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್​​ಗೆ ಒಳಗಾಗ ವರನ ಕುಟುಂಬ
ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ(ಸಾಂದರ್ಭಿಕ ಚಿತ್ರ)
ಅಕ್ಷತಾ ವರ್ಕಾಡಿ
|

Updated on: May 30, 2024 | 10:37 AM

Share

ಮಧ್ಯಪ್ರದೇಶ: ಮದುವೆಯಾದ ಕೇವಲ ಎರಡು ದಿನಗಳ ಬಳಿಕ ಯುವತಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಷಯ ತಿಳಿದ ವರನ ಕುಟುಂಬ ಶಾಕ್​​ಗೆ ಒಳಗಾಗಿದೆ. ಈ ಘಟನೆ ಧಮ್ನೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣ ಹಳ್ಳಿಯೊಂದರಲ್ಲಿ ನಡೆದಿದೆ. ಹೆರಿಗೆಯ ಬಗ್ಗೆ ಅತ್ತೆ ಪ್ರಶ್ನಿಸಿದಾಗ, ಮದುವೆಯ ನೆಪದಲ್ಲಿ ಒಬ್ಬ ಆರೋಪಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದು,ತನಗೆ ಮೋಸ ಮಾಡಿ ಹೋಗಿರುವುದಾಗಿ ತಿಳಿಸಿದ್ದಾಳೆ. ವಿಷಯ ಬಯಲಿಗೆ ಬಂದ ಕೂಡಲೇ ಪೊಲೀಸರು ಆರೋಪಿಯನ್ನು ಸರಾಯ್ ಗ್ರಾಮದ ಸುನಿಲ್ ಬಾಘೇಲ್ ಎಂದು ಗುರುತಿಸಿ ಬಂಧಿಸಿದ್ದಾರೆ.

ಧಮನೋಡ್ ಪೋಲೀಸರ ಪ್ರಕಾರ, ಯುವತಿ ಮೇ 20 ರಂದು ಮದುವೆಯಾಗಿದ್ದು, ಕೇವಲ ಎರಡು ದಿನಗಳ ಬಳಿಕ, ಮೇ 22 ರ ಮುಂಜಾನೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಕೆಯ ಪತಿ ತಕ್ಷಣವೇ ಅವಳನ್ನು ಧಮ್ನೋಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಈ ವೇಳೆ ಆಕೆ ತುಂಬು ಗರ್ಭಿಣಿ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಆಘಾತಕೊಳ್ಳಗಾದ ವರನ ಕುಟುಂಬ ಯುವತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತಿಂಗಳುಗಟ್ಟಲೆ ಮುಚ್ಚಿಟ್ಟಿದ್ದ ಅತ್ಯಾಚಾರ ಮತ್ತು ವಂಚನೆಯ ಭಯಾನಕ ಕಥೆಯನ್ನು ಯುವತಿ ಬಹಿರಂಗಪಡಿಸಿದ್ದಾಳೆ.

ಎರಡು ವರ್ಷಗಳ ಹಿಂದೆ ಸಿಮ್ರಾಲಿ ಗ್ರಾಮದ ಮದುವೆಯೊಂದರಲ್ಲಿ ಸುನೀಲ್‌ನನ್ನು ಭೇಟಿಯಾಗಿದ್ದೆ ಎಂದು ಆಕೆ ವಿವರಿಸಿದ್ದಾಳೆ. ಅವರು ಫೋನ್ ನಂಬರ್​ ವಿನಿಮಯ ಮಾಡಿಕೊಂಡಿದ್ದು, ನಿಯಮಿತವಾಗಿ ಸಂವಹನ ಮಾಡಲು ಪ್ರಾರಂಭಿಸಿದರು. ಸುನೀಲ್ ಕಚ್ವಾನಿಯಾದಲ್ಲಿ ಅವಳನ್ನು ಅನೇಕ ಬಾರಿ ಭೇಟಿ ಮಾಡಿದ್ದಾನೆ ಮತ್ತು ಸುಮಾರು ಒಂಬತ್ತು ತಿಂಗಳ ಹಿಂದೆ, ಮದುವೆಯ ಭರವಸೆ ನೀಡಿ ಹೊಲವೊಂದರಲ್ಲಿ ಅತ್ಯಾಚಾರವೆಸಗಿದ್ದಾನೆ. ಆದರೆ ಬೆದರಿಕೆ ಮತ್ತು ಸಾಮಾಜಿಕ ಕಳಂಕಕ್ಕೆ ಹೆದರಿ ಯುವತಿ ಈ ಘಟನೆಯನ್ನು ತನ್ನ ಕುಟುಂಬದಿಂದ ಗೌಪ್ಯವಾಗಿಟ್ಟಿದ್ದಳು.

ಇದನ್ನೂ ಓದಿ: ಲವರ್​ ಜೊತೆ ಬ್ರೇಕಪ್​​ ಮಾಡಿಕೊಂಡ ಯುವತಿ; 1 ವರ್ಷದಲ್ಲಿ ಖರ್ಚಾದ ಹಣದ ಬಿಲ್​​ ಕಳುಹಿಸಿದ ಬಾಯ್ ಫ್ರೆಂಡ್

ತಾನು ಗರ್ಭಿಣಿಯಾಗಿರುವುದಾಗಿ ಸುನಿಲ್‌ಗೆ ಪದೇ ಪದೇ ತಿಳಿಸಿದ್ದಳು, ಆದರೆ ಅವನು ಅವಳನ್ನು ಭೇಟಿ ಮಾಡಿ ಹಲ್ಲೆ ನಡೆಸಿದ್ದಾನೆ. ಇದಲ್ಲದೇ ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ. ಇದೀಗ ಮಗುವಿಗೆ ಜನ್ಮ ನೀಡಿದ ಬಳಿಕ , ಧಮ್ನೋದ್ ಪೊಲೀಸ್ ಠಾಣೆಗೆ ಬಂದು ಸುನೀಲ್ ವಿರುದ್ಧ ದೂರು ದಾಖಲಿಸಿದ್ದಾಳೆ. ಸುನೀಲ್ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ