Viral Video: ರೈಲ್ವೆ ನಿಲ್ದಾಣ ಆಯ್ತೂ.. ಇದೀಗ ಏರ್‌ಪೋರ್ಟ್‌ನಲ್ಲೂ ಶುರುವಾಯಿತು ಈಕೆಯ ರೀಲ್ಸ್ ಹುಚ್ಚಾಟ
ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಯುವತಿರು ಮೆಟ್ರೋ, ರೈಲ್ವೆ ನಿಲ್ದಾಣದಲ್ಲಿ ರೀಲ್ಸ್ ವಿಡಿಯೋ ಮಾಡುವ ವಿಡಿಯೋ ವೈರಲ್ ಆಗಿದ್ದವು. ರೈಲ್ವೆ ನಿಲ್ದಾಣ ಸಾಲದ್ದಕ್ಕೆ ಇದೀಗ ಯುವತಿಯೊಬ್ಬಳು ಏರ್‌ಪೋರ್ಟ್‌ನಲ್ಲಿಯೂ ರೀಲ್ಸ್ ವಿಡಿಯೋ ಮಾಡಲು ಶುರು ಹಚ್ಚಿಕೊಂಡಿದ್ದಾಳೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೇವ್ರೇ ಏರ್‌ಪೋರ್ಟ್‌ಗೂ ತಲುಪಿತಾ ಈ ವೈರಸ್ ಎಂದು ನೆಟ್ಟಿಗರು ಯುವತಿಯ ವಿರುದ್ಧ ಗರಂ ಆಗಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್‌ಡಮ್ ಯುಗದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು, ಸ್ಟಾರ್ ಆಗಿ ಮೆರೆಯಲು ಹೆಚ್ಚಿನವರು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರು ಕಡಿಮೆ ಸಯಮದಲ್ಲಿ ಫೇಮಸ್ ಆಗಬೇಕೆಂದು ಹುಚ್ಚಾಟ ಮೆರೆಯುವಂತಹ ರೀಲ್ಸ್, ವಿಡಿಯೋಗಳನ್ನು ಮಾಡುತ್ತಾರೆ. ಇಂತಹ ಹುಚ್ಚಾಟದ ರೀಲ್ಸ್ ಮಾಡುವುದರಲ್ಲಿ ಫೇಮಸ್ ಕಂಟೆಂಟ್ ಕ್ರಿಯೆಟರ್ ಸೀಮಾ ಕಾನೋಜಿಯಾ. ಈಕೆ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆಯನ್ನು ಉಂಟುಮಾಡುತ್ತ ರೀಲ್ಸ್ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾಳೆ. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ರೀಲ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಇದೀಗ ಈಕೆ ಏರ್‌ಪೋರ್ಟ್‌ನಲ್ಲೂ ತನ್ನ ಹುಚ್ಚಾಟವನ್ನು ಮುಂದುರವೆರಿಸಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು @desimojoto ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಏರ್‌ಪೋರ್ಟ್ ತಲುಪಿದ ವೈರಸ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಂಟೆಂಟ್ ಕ್ರಿಯೆಟರ್ ಸೀಮಾ ಕಾನೋಜಿಯಾ ಏರ್‌ಪೋರ್ಟ್‌ನಲ್ಲಿ ರೀಲ್ಸ್ ವಿಡಿಯೋ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆ ನೆಲದಲ್ಲಿ ಹೊರಳಾಡುತ್ತಾ ಬಾಲಿವುಡ್ ಸಾಂಗ್‌ಗೆ ಡಾನ್ಸ್ ಮಾಡುತ್ತಾ ಏರ್‌ಪೋರ್ಟ್‌ನಲ್ಲಿ ಓಡಾಡುವ ಸಾರ್ವಜನಿಕರಿಗೂ ತೊಂದರೆಯನ್ನು ಕೊಟ್ಟಿದ್ದಾಳೆ.
ಇದನ್ನೂ ಓದಿ: ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್ಗೆ ಒಳಗಾಗ ವರನ ಕುಟುಂಬ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
The virus has reached the airports pic.twitter.com/vSG15BOAZE
— desi mojito 🇮🇳 (@desimojito) May 29, 2024
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಶಾಂತಿ ಕದಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವೈರಸ್ ಅನ್ನು ಹೋಗಲಾಡಿಸಲು ಯಾವುದೇ ಔಷದಿ ಇಲ್ಲವೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ